ನವದೆಹಲಿ, ಜ.28- ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ಸೇನಾನಿ ಲಾಲಾ ಲಜಪತ್‍ರಾಯ್ ಅವರ ಜನ್ಮ ದಿನೋತ್ಸವದ ಸಂದರ್ಭದಲ್ಲಿ ಗೌರವ ನಮನ ಸಲ್ಲಿಸಿದ್ದಾರೆ.
ಪಂಜಾಬ್ ಕೇಸರಿ ಎಂದೇ ಜನಪ್ರಿಯರಾಗಿದ್ದ ರಾಯ್ ಅವರನ್ನು ಸ್ಮರಿಸಿರುವ ಮೋದಿ ರಾಯ್ ಅವರ ಧೈರ್ಯ, ಶೌರ್ಯ ಮತ್ತು ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಮರ್ಪಿಸಿಕೊಂಡು ಹೋರಾಡಿದ ಪರಿ ದೇಶವಾಸಿಗಳಿಗೆ ಸ್ಮರಣೀಯವಾಗಿದೆ ಎಂದಿದ್ದಾರೆ.
1965ರಲ್ಲಿ ಜನಿಸಿದ ರಾಯ್ ಅವರು ಕಟ್ಟಾ ರಾಷ್ಟ್ರೀಯವಾದಿಯಾಗಿದ್ದು, ಸಾಮಾಜಿಕ ಸುಧಾರಣೆಗೂ ಶ್ರಮಿಸಿದ್ದರು. ಅವರ ಬರಹಗಳು ಭಗತ್‍ಸಿಂಗ್ ಅವರಂತಹ ಕ್ರಾಂತಿಕಾರಿಗಳಿಗೂ ಸೂರ್ತಿದಾಯಕವಾಗಿದ್ದವು.
