ತಾಯಿ ಸತ್ತಾಗ ದುಃಖ ವ್ಯಕ್ತಪಡಿಸಲಾಗದಿರುವುದು ನನ್ನನ್ನು ಬಾಧಿಸುತ್ತಿದೆ : ಪ್ರಿನ್ಸ್ ಹ್ಯಾರಿ

Social Share

ಲಂಡನ್,ಜ.8- ನನ್ನ ತಾಯಿ ಡಯಾನಾ ಮೃತಪಟ್ಟಾಗ ಸಾರ್ವಜನಿಕವಾಗಿ ದುಃಖಿಸಲು ಸಾಧ್ಯವಾಗದೆ ಕೇವಲ ಒಂದು ಬಾರಿ ಮಾತ್ರ ಅತ್ತಿದೆ. ಅದು ನನ್ನನ್ನು ಇಂದಿಗೂ ಬಾಧಿಸುತ್ತಿದೆ ಎಂದು ಬ್ರಿಟನ್ ರಾಜಕುಮಾರ ಪ್ರಿನ್ಸ್ ಹ್ಯಾರಿ ನೆನಪಿಸಿಕೊಂಡಿದ್ದಾರೆ.

ಅವರು ಬರೆದಿರುವ ಆತ್ಮಕಥೆ ಸ್ಪೇರ್ ಕೃತಿ ಬಿಡುಗಡೆಗೂ ಮುನ್ನು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ತಮ್ಮ ಮನದಾಳದ ಅಳುಕನ್ನು ಹೊರ ಹಾಕಿದ್ದಾರೆ.

ತನ್ನ ತಾಯಿಯ ಮರಣದ ಸಮಯದಲ್ಲಿ ನನಗೆ ಕೇವಲ 12 ವರ್ಷ ಆದರೂ ನಾನು ಸಾರ್ವಜನಿಕವಾಗಿ ಅಳಲು ಸಾಧ್ಯವಾಗದೆ ಕೇವಲ ಒಂದು ಬಾರಿ ಮಾತ್ರ ಅತ್ತಿದೆ ಮತ್ತು ಸಾರ್ವಜನಿಕವಾಗಿ ಅಳದಿದ್ದಕ್ಕಾಗಿ ತಾನು ತಪ್ಪಿತಸ್ಥನೆಂದು ಭಾವಿಸುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ದೆಹಲಿಯಲ್ಲಿ ಜಾರಿಗೆ ಬಂತು ಹೊಸ ರೂಲ್ಸ್

ಪ್ರಿನ್ಸ್ ಹ್ಯಾರಿಯ ಆತ್ಮಚರಿತ್ರೆ ‘ಸ್ಪೇರ್ ಅಧಿಕೃತವಾಗಿ ಜನವರಿ 10 ರಂದು ಮಾರಾಟವಾಗಲಿದೆ ಆದರೆ ಅದರ ಹೆಚ್ಚಿನ ವಿಷಯಗಳು ಈಗಾಗಲೇ ಬ್ರಿಟಿಷ್ ಮತ್ತು ಯುಎಸ್ ಮಾಧ್ಯಮಗಳಲ್ಲಿ ಸೋರಿಕೆಯಾಗಿವೆ.

Prince Harry, guilt, meeting, Diana, death,

Articles You Might Like

Share This Article