ರಣಜಿ ಟೂರ್ನಿಯಲ್ಲಿ ವೇಗದ ತ್ರಿಶತಕ ಗಳಿಸಿದ ಪೃಥ್ವಿ ಶಾ

Social Share

ಗುವಾಹಟಿ, ಜ. 11- ಅಂಡರ್ 19 ವಿಶ್ವಕಪ್ ವಿಜೇತ ನಾಯಕ ಪೃಥ್ವಿ ಶಾ ಅವರು ರಣಜಿ ಟೂರ್ನಿಯಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮುಂದುವರೆಸಿದ್ದು, ಅಸ್ಸಾಮ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಚೊಚ್ಚಲ ತ್ರಿಶತಕ ಗಳಿಸಿ ಗಮನ ಸೆಳೆದಿದ್ದಾರೆ.

ಗುವಾಹಟಿಯ ಅಮಿಂಗೋನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 326 ಎಸೆತಗಳನ್ನು ಎದುರಿಸಿದ ಪೃಥ್ವಿ ಶಾ 300 ರನ್‍ಗಳನ್ನು ದಾಖಲಿಸುವ ಮೂಲಕ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಯ್ಕೆ ಆಗುವ ಸೂಚನೆ ನೀಡಿದ್ದಾರೆ.

ಫೆಬ್ರವರಿ 9 ರಿಂದ ನಾಗ್ಪುರದಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ನಡೆಯಲಿದ್ದು ಐಸಿಸಿ ವಿಶ್ವ ಚಾಂಪಿಯನ್‍ಶಿಪ್‍ನ 2ನೇ ಆವೃತ್ತಿಯ ಫೈನಲ್ ಹಂತಕ್ಕೆ ತಲುಪಲು ಬಾರ್ಡರ್- ಗವಾಸ್ಕರ್ ಸರಣಿಯು ಭಾರತ ತಂಡಕ್ಕೆ ನಿರ್ಣಾಯಕವಾಗಿದೆ.

ಮೆಟ್ರೋ ಪಿಲ್ಲರ್ ದುರಂತ : NCC ಕಂಪೆನಿ, 7 ಮಂದಿ ವಿರುದ್ಧ FIR

ಪೃಥ್ವಿ ಶಾ ಅವರು ಭಾರತ ತಂಡದ ಪರ ಆರಂಭಿಕ ಆಟಗಾರನಾಗಿ 5 ಟೆಸ್ಟ್ ಪಂದ್ಯಗಳನ್ನಾಡಿದ್ದು ಆರಂಭಿಕ ಪಂದ್ಯದಲ್ಲೇ ಶತಕ ಗಳಿಸಿ ಗಮನ ಸೆಳೆದಿದ್ದರು. ಗಾಯದ ಸಮಸ್ಯೆಯಿಂದ 2020, ಡಿಸೆಂಬರ್ 17 ರಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದು, ಈಗ ಆಸ್ಟ್ರೇಲಿಯಾ ವಿರುದ್ಧವೇ ತಂಡಕ್ಕೆ ಕಮ್‍ಬ್ಯಾಕ್ ಮಾಡಲು ಪೃಥ್ವಿ ಶಾ ಎದುರು ನೋಡುತ್ತಿದ್ದಾರೆ. ಪೃಥ್ವಿ ಶಾ ಅವರು 91.79 ಸ್ಟ್ರೈಕ್‍ರೇಟ್‍ನಲ್ಲಿ 41 ಬೌಂಡರಿ, 2 ಸಿಕ್ಸರ್ ಸಿಡಿಸಿ 300 ರನ್‍ಗಳ ಗುರಿ ಮೆಟ್ಟಿದರು.

400 ಗಡಿಯತ್ತ ಪೃಥ್ವಿ ಶಾ:
ಅಸ್ಸಾಮ್‍ನ ಬೌಲರ್‍ಗಳನ್ನು ಬೆಂಡೆತ್ತಿ ಚೆಂಡನ್ನು ಮೂಲೆ ಮೂಲೆಗೂ ಅಟ್ಟುತ್ತಿರುವ ಪೃಥ್ವಿಶಾ ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ 49 ಬೌಂಡರಿ, 4 ಸಿಕ್ಸರ್‍ಗಳ ನೆರವಿನಿಂದ 379 ರನ್ ಗಳಿಸಿದ್ದು 400 ರನ್ ಗಳಿಸುವತ್ತ ದೃಷ್ಟಿ ನೆಟ್ಟು ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ.

ಕಂದರಕ್ಕೆ ಜಾರಿ ಬಿದ್ದು ಮೂವರು ಸೈನಿಕರು ಹುತಾತ್ಮ

ಪೃಥ್ವಿ ಶಾ ಉತ್ತಮ ಸಾಥ್ ನೀಡಿರುವ ಮುಂಬೈ ನಾಯಕ ಅಜಿಂಕ್ಯಾ ರಹಾನೆ 9 ಬೌಂಡರಿಗಳ ನೆರವಿನಿಂದ 131 ರನ್‍ಗಳಿಸಿ ಅಜೇಯರಾಗಿ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಪೃಥ್ವಿ ಶಾ 379 ರನ್ ಗಳಿಸಿದ್ದರೆ, ಅಂಜಿಕ್ಯಾ ರಹಾನೆ 131 ರನ್ ಗಳಿಸಿ 125.1 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 598 ಬೃಹತ್ ಮೊತ್ತ ದಾಖಲಿಸಿತ್ತು.

Prithvi Shaw, smashes, second, highest, score, Ranji Trophy,

Articles You Might Like

Share This Article