ಖಾಸಗಿ ಬ್ಯಾಂಕ್‍ನಲ್ಲಿ ಬೆಂಕಿ ಅವಗಡ

Social Share

ನವದೆಹಲಿ, ಫೆ 9-ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ಖಾಸಗಿ ಬ್ಯಾಂಕ್‍ನ ಸರ್ವರ್ ರೂಮ್‍ನಲ್ಲಿ ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಗ್ರೇಟರ್ ಕೈಲಾಶ್ ಭಾಗ -2 ರ ಎಂ-ಬ್ಲಾಕ್‍ನಲ್ಲಿ ಜಿಕೆ ಬ್ಯಾಂಕ್‍ಗೆ ಬೆಳಿಗ್ಗೆ 6.05 ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು ಮಹಿತಿ ಪಡೆದ ತಕ್ಷಣ 9 ಅಗ್ನಿಶಾಮಕ ವಾಹನಗಲು ಸ್ಥಳಕ್ಕೆ ಧಾವಿಸಿ ಬೆಳಗ್ಗೆ 7.15ಕ್ಕೆ ಬೆಂಕಿಯನ್ನು ಹತೋಟಿಗೆ ತರಲಾಯಿತುನಂತರ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತ್ಯೇಕ ಅಪಘಾತ : ಐವರು ಪ್ರಾಣಾಪಯದಿಂದ ಪಾರು

ನಾಲ್ಕು ಮಹಡಿ ಕಟ್ಟಡದಲ್ಲಿ ನೆಲಮಾಳಿಗೆಯಲ್ಲಿ ಸರ್ವರ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅದು ಮತ್ತು ನೆಲಮಹಡಿಯಲ್ಲಿರುವ ಬ್ಯಾಂಕ್‍ನ ಕೆಲ ವಸ್ತುಗಳು ಸುಟ್ಟುಹೋಗಿದೆ.

ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಅದರೆ ಕೆಲ ಉಪಕರಣ ,ವಸುಗಳು ನಾಶವಾಗಿದೆ, ಬೆಂಕಿ ಅನಾಹುತಕ್ಕೆ ಕಾರಣ ತಿಳಿದುಬಂದಿಲ್ಲ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Private, bank, server room, catches, fire, Delhi,

Articles You Might Like

Share This Article