ಬೆಂಗಳೂರಲ್ಲಿ ವಿಮಾನಕ್ಕಿಂತಲೂ ದುಬಾರಿಯಾಯ್ತು ಖಾಸಗಿ ಬಸ್ ಪ್ರಯಾಣ..!

Social Share

ಬೆಂಗಳೂರು,ಅ.22-ದೀಪಾವಳಿ ಹಬ್ಬಕ್ಕೆ ಹೊರಟಿರುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ಯದ್ವತದ್ವಾ ಹಣ ವಸೂಲಿ ಮಾಡುತ್ತಿದ್ದು, ವಿಮಾನ ಪ್ರಯಾಣ ದರಕ್ಕಿಂತಲೂ ಹೆಚ್ಚಿನ ದರ ವಸೂಲಿ ಮಾಡುತ್ತಿದ್ದಾರೆ.

ಶನಿವಾರ, ಭಾನುವಾರ, ಸೋಮವಾರ ರಜಾ ದಿನವಾಗಿರುವುದರಿಂದ ಹಬ್ಬಕ್ಕೆ ಕುಟುಂಬ ಸಮೇತ ಹೊರಟಿರುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು 8ರಿಂದ 10 ಪಟ್ಟು ದರವನ್ನು ಹೆಚ್ಚಳ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರಿನಿಂದ ಮೈಸೂರಿಗೆ ಹವಾ ನಿಯಂತ್ರಿತ ರಹಿತ ಬಸ್‍ಗಳಲ್ಲಿ 1500 ರೂಗಳಿಂದ 2000 ರೂ, ಬೆಂಗಳೂರಿನಿಂದ ಚಾಮರಾಜನಗರಕ್ಕೆ 1800 ರೂ.ಗಳಿಂದ 3000, ಬೆಂಗಳೂರಿನಿಂದ ಹುಬ್ಬಳ್ಳಿಗೆ 5000, ಬೆಂಗಳೂರಿನಿಂದ ಶಿವಮೊಗ್ಗಕ್ಕೆ 2500, ಬೆಂಗಳೂರಿನಿಂದ ಚಿಕ್ಕಮಗಳೂರಿಗೆ 2500, ಮಂಗಳೂರಿಗೂ 3000 ರೂ. ಹೀಗೆ ಮನಸೋ ಇಚ್ಛೆ ದರವನ್ನು ನಿಗದಿಪಡಿಸಿದ್ದಾರೆ.

ಹಬ್ಬಕ್ಕೆ ಕುಟುಂಬ ಸಮೇತ ಹೊರಟಿರುವ ಹಿನ್ನಲೆಯಲ್ಲಿ ಇದನ್ನು ಸದುಪಯೋಗಪಡಿಸಿಕೊಳ್ಳುತ್ತಿರುವ ಖಾಸಗಿ ಬಸ್ ಮಾಲೀಕರು ಆಯಾ ರೂಟ್‍ಗಳಿಗೆ ನಿಗದಿಪಡಿಸಿದ ದರವನ್ನು ಉಲ್ಲಂಘಿಸಿ, ಕೇಳಿದಷ್ಟು ಕೊಟ್ಟರೆ ಮಾತ್ರ ಕರೆದುಕೊಂಡು ಹೋಗುತ್ತೇವೆ ಎನ್ನುತ್ತಿದ್ದಾರೆ.

ವಿಶೇಷವಾಗಿ ಕಲಬುರಗಿ, ಬೀದರ್, ವಿಜಯಪುರ, ಬಳ್ಳಾರಿ, ರಾಯಚೂರು, ಕೊಪ್ಪಳ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಉತ್ತರಕನ್ನಡ, ಮಂಗಳೂರು ಹೀಗೆ ದೂರದ ಊರುಗಳಿಗೆ ಹೋಗುತ್ತಿರುವ ಪ್ರಯಾಣಿಕರಿಗೆ ದರದ ಬಿಸಿ ತಟ್ಟಿದೆ.

ಚೀನಾ ಅಧ್ಯಕ್ಷರಾಗಿ 3ನೇ ಅವಧಿಗೆ ಕ್ಸಿ ಜಿನ್‍ಪಿಂಗ್ ಆಯ್ಕೆ ಖಚಿತ

ದಸರಾ ಹಬ್ಬಕ್ಕೂ ಮುನ್ನ ಇದೇ ರೀತಿ ಊರಿಗೆ ಹೊರಟ ಪ್ರಯಾಣಿಕರಿಗೆ ಹೆಚ್ಚಿನ ದರ ವಸೂಲಿ ಮಾಡಲಾಗಿತ್ತು. ಆ ವೇಳೆ ಆರ್‍ಟಿಒ ಅಧಿಕಾರಿಗಳು ಮಿಂಚಿನ ದಾಳಿ ನಡೆಸಿ ಖಾಸಗಿ ಬಸ್‍ಗಳಿಗೆ ಬಿಸಿ ಮುಟ್ಟಿಸಿದ್ದರು.

ಆದರೂ ಎಚ್ಚೆತ್ತುಕೊಳ್ಳದ ದೀಪಾವಳಿ ಹಬ್ಬಕ್ಕೆ ಊರುಗಳಿಗೆ ಹೊರಟ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ.
ದಸರಾ ರಜೆ ಹೊತ್ತಲ್ಲಿ ಪ್ರಯಾಣಿಕರಿಂದ ಖಾಸಗಿ ಬಸ್‍ಗಳು ದುಪ್ಪಟ್ಟು ಹಣ ವಸೂಲಿ ಮಾಡಿದ್ದು, 3 ದಿನದಲ್ಲೆ 400 ಬಸ್‍ಗಳ ಮೇಲೆ ಪ್ರಕರಣ ದಾಖಲಾಗಿತ್ತು.

ಎಚ್ಚರಿಕೆ ಮಧ್ಯೆಯೂ ದೀಪಾವಳಿ ಹಬ್ಬದಲ್ಲೂ ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದು ಈ ಬಗ್ಗೆ ಪ್ರಯಾಣಿಕರು ಆರ್‍ಟಿಒ ಅಧಿಕಾರಿಗಳಿಗೆ ದೂರು ನೀಡಿದ್ದರು. ಇದೀಗ ಬೆಂಗಳೂರಿನಲ್ಲಿ ಆರ್‍ಟಿಒ ಅಧಿಕಾರಿಗಳ ಕಾರ್ಯಾಚರಣೆಗಿಳಿದಿದ್ದಾರೆ.

ಸಚಿವರ ಎಚ್ಚರಿಕೆ:
ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಮತ್ತಿತರರ ನಗರ ಪ್ರದೇಶಗಳಿಂದ ತಮ್ಮ ಗ್ರಾಮಗಳಿಗೆ ತೆರಳುವ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ನಿಗದಿಪಡಿಸಿದ ದರವನ್ನಷ್ಟೇ ಪಡೆಯಬೇಕು. ಇಲ್ಲದಿದ್ದರೆ ರೂಟ್ ಪರ್ಮಿಟ್ ತಕ್ಷಣದಿಂದಲೇ ರದ್ದುಪಡಿಸಲಾಗುತ್ತದೆ ಎಂದು ಖಾಸಗಿ ಬಸ್ ಮಾಲೀಕರಿಗೆ ಸಾರಿಗೆ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.

ದೀಪಾವಳಿ ಮುನ್ನವೇ ದೆಹಲಿ ಗಾಳಿ ಮತ್ತಷ್ಟು ಮಲೀನ

ಸಾರ್ವಜನಿಕರಿಂದ ಹೆಚ್ಚಿನ ದೂರುಗಳು ಬಂದ ಹಿನ್ನಲೆಯಲ್ಲಿ ದರ ಹೆಚ್ಚು ಮಾಡುವ ಖಾಸಗಿ ಬಸ್‍ಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಸಾರಿಗೆ ಇಲಾಖೆ ಅಕಾರಿಗಳ ಹತ್ತು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯಾದ್ಯಂತ ಈ ತಂಡ ತಪಾಸಣೆ ಕಾರ್ಯಚರಣೆ ನಡೆಸಲಿದೆ. ಒಂದು ವೇಳೆ ಹೆಚ್ಚು ಟಿಕೆಟ್ ದರ ಕೇಳಿದರೆ ಪ್ರಯಾಣಿಕರು ಸಹಾಯವಾಣಿಗೆ ಕರೆ ಮಾಡಿ ಬಸ್ ನಂಬರ್, ಮಾರ್ಗ ತಿಳಿಸಿ ದೂರು ನೀಡಿದರೆ ಕ್ರಮ ತೆಗೆದುಕೊಳ್ಳಲಾಗುವುದು. ಇದಕ್ಕಾಗಿ ಸಾರಿಗೆ ಇಲಾಖೆಯು ಸಹಾಯವಾಣಿ ಆರಂಭಿಸಿದ್ದು 94498 63429 ಅಥವಾ 94498 63426 ಸಂಪರ್ಕಿಸಲು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Articles You Might Like

Share This Article