ಖಾಸಗಿ ಆಸ್ಪತ್ರೆಗಳ ಕೋಟಿ ಕೋಟಿ ಬಾಕಿ ಬಿಡುಗಡೆಗೆ ಆಗ್ರಹ

Social Share

ಬೆಂಗಳೂರು, ಜ.22- ಎರಡನೆ ಅಲೆ ಸಂದರ್ಭದಲ್ಲಿ ಕೊರೊನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳು ನೀಡಿದ್ದ ಚಿಕಿತ್ಸಾ ವೆಚ್ಚವನ್ನು ಭರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಬರೊಬ್ಬರಿ 140 ಕೋಟಿ ರೂ.ಬಾಕಿ ಉಳಿಸಿಕೊಂಡಿರುವ ಸರ್ಕಾರದ ನಡೆಗೆ ಖಾಸಗೀ ಆಸ್ಪತ್ರೆಗಳ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ.ನಾವು ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದೇವೆ.
ಬಿಬಿಎಂಪಿ, ಲೋಕೋಪಯೊಗಿ ಇಲಾಖೆಗಳ ಮಾದರಿಯಲ್ಲಿ ನಮ್ಮ ಬಿಲ್ ಅನ್ನು ಬಾಕಿ ಉಳಿಸಿಕೊಳ್ಳಬೇಡಿ. ಅದಷ್ಟು ಶೀಘ್ರ ಬಾಕಿ ಹಣ ಬಿಡುಗಡೆ ಮಾಡಿ ಎಂದು ಒಕ್ಕೂಟದ ಅಧ್ಯಕ್ಷ ಡಾ.ಪ್ರಸನ್ನ ಆಗ್ರಹಿಸಿದ್ದಾರೆ. ಎರಡನೆ ಅಲೆಯಲ್ಲಿ ಒಟ್ಟಾರೆ ಖಾಸಗಿ ಆಸ್ಪತ್ರೆಗಳಿಗೆ 300 ಕೋಟಿ ರೂ.ಗಳಿಗೂ ಹೆಚ್ಚು ಹಣ ಬಿಡುಗಡೆ ಮಾಡಬೇಕಿತ್ತು.
ಅದರಲ್ಲಿ ಶೇ.55 ರಷ್ಟು ಹಣ ಬಿಡುಗಡೆಯಾಗಿದೆ. ಉಳಿದ 140 ಕೋಟಿ ರೂ.ಗಳನ್ನು ಸರ್ಕಾರ ಇನ್ನು ಬಿಡುಗಡೆ ಮಾಡಿಲ್ಲ ಎಂದು ಅವರು ಅಂಕಿ ಅಂಶ ನೀಡಿದ್ದಾರೆ.ಕೋಟ್ಯಂತರ ರೂ.ಬಾಕಿ ಉಳಿಸಿಕೊಂಡರೆ ಸಣ್ಣ-ಪುಟ್ಟ ಆಸ್ಪತ್ರೆ ನಡೆಸುವವರಿಗೆ ಸಾಕಷ್ಟುತೊಂದರೆ ಎದುರಾಗಲಿದೆ. ಹೀಗಾಗಿ ಅದಷ್ಟು ಬೇಗ ಬಾಕಿ ಬಿಡುಗಡೆ ಮಾಡುವಂತೆ ಅವರು ಆಗ್ರಹಿಸಿದ್ದಾರೆ.
ಬಾಕಿ ಬಿಲ್ ಬಿಡುಗಡೆಗೆ ವಿಳಂಭ ಮಾಡಿದರೆ, ವೈದ್ಯುರು, ನರ್ಸ್‍ಗಳು, ಪರಿಪಾಲಕರು ಹಾಗೂ ಇತರ ಸಿಬ್ಬಂದಿಗಳ ವೇತನ ನೀಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದರಿಂದ ಮೂರನೆ ಅಲೆ ಉಲ್ಬಣಗೊಂಡಾಗ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಲಿದೆ. ಆದ್ದರಿಂದ ಬೇಗ ಬಾಕಿ ಬಿಡುಗಡೆ ಮಾಡುವಂತೆ ಪ್ರಸನ್ನ ಒತ್ತಾಯಿಸಿದ್ದಾರೆ

Articles You Might Like

Share This Article