ಕೋಟಾ,ಡಿ.12- ಭಾರತ್ ಜೋಡೋ ಯಾತ್ರೆ ಆರಂಭಿಸಿ 100ನೇ ದಿನದ ಸಮೀಪಿಸುತ್ತಿರುವ ರಾಹುಲ್ ಗಾಂಧಿ ಅವರಿಗೆ ಇಂದು ನಾರಿ ಶಕ್ತಿ ಬೆಂಬಲ ದೊರೆಯಿತು. ರಾಜಸ್ಥಾನದ ಕೋಟಾ-ಲಾಲ್ಸೋಟ್ ಮೆಗಾ ಹೈವೇಯಲ್ಲಿ ಪಾದಯಾತ್ರೆ ಹಾದುಹೋಗುವ ವೇಳೆ ಸುಮಾರು 5 ಸಾವಿರಕ್ಕೂ ಹೆಚ್ಚು ಮಹಿಳೆಯರು ಜೊತೆಗೂಡಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಪತಿ ರಾಬಟ್ ವಾದ್ರ ಇಬ್ಬರೂ ಇಂದು ಯಾತ್ರೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ರಾಜಸ್ಥಾನದಲ್ಲಿ 6ನೇ ದಿನದ ಪಾದಯಾತ್ರೆಯಲ್ಲಿ ತೊಡಗಿರುವ ರಾಹುಲ್ ಗಾಂಧಿ ಇಂದು ಬುಂಡಿ ಜಿಲ್ಲೆಯಿಂದ ನಿರ್ಗಮಿಸಿದ್ದಾರೆ. ಬೆಳಗ್ಗೆ 6 ಗಂಟೆಗೆ ಬಾಬೈನ ತೇಜಾಜಿ ಮಹಾರಾಜ್ ಮಂಡಿ ವಿರುದ್ಧ ಯಾತ್ರೆ ಆರಂಭವಾಯಿತು.
ಗುಜರಾತ್‍ನ ಸಿಎಂ ಭೂಪೇಂದ್ರ ಪಟೇಲ್ ಅಧಿಕಾರ ಸ್ವೀಕರ
ಧ್ವಜಾರೋಹಣ, ರಾಷ್ಟ್ರಗೀತೆ ಗಾಯನದೊಂದಿಗೆ ಶುರುವಾದ ಯಾತ್ರೆಯೊಂದಿಗೆ ಮಹಿಳೆಯರು ಹೆಜ್ಜೆ ಹಾಕಿದರು. ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ನೂರಾರು ಜನ ಸಾಲುಗಟ್ಟಿ ನಿಂತಿ ರಾಹುಲ್ ಗಾಂಧಿಗೆ ಶುಭ ಹಾರೈಸಿದರು.
6 ಕಿ.ಮೀ ನಡೆದ ಬಳಿಕ ತೇಜಾಜಿ ದೇವಸ್ಥಾನದಲ್ಲಿ ಕೊಂಚಕಾಲ ವಿಶ್ರಾಂತಿ ಪಡೆಯಲಾಯಿತು. ನಂತರ 5 ಕಿ.ಮೀ ಮುಂದುವರೆದು ಟೋಂಕ್ ಜಿಲ್ಲೆ ಪ್ರವೇಶಿಸಿದೆ. ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡುವ ಅಗತ್ಯವಿದೆ. 96ನೇ ದಿನದ ಐಕ್ಯತಾ ಯಾತ್ರೆಯನ್ನು ನಾರಿಶಕ್ತಿಗೆ ಅರ್ಪಿಸುವುದಾಗಿ ಹೇಳಿದರು.
ಒಗ್ಗಟ್ಟಿನಿಂದ ಶ್ರಮಿಸಿ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ದೇವೇಗೌಡರ ಕರೆ
ರಾಜಸ್ಥಾನದಲ್ಲಿ ಒಟ್ಟು 17 ದಿನಗಳ ಕಾಲ 500 ಕಿ.ಮೀ ಸಂಚರಿಸುವ ಯಾತ್ರೆ ಡಿ.23ರಂದು ಹರಿಯಾಣಕ್ಕೆ ಪ್ರವೇಶ ಪಡೆಯಲಿದೆ. ಈ ಮೊದಲು ಸೆಪ್ಟೆಂಬರ್ 7ರಿಂದ ಕನ್ಯಾಕುಮಾರಿಯಿಂದ ಆರಂಭಗೊಂಡ ಯಾತ್ರೆ ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಮುಖೇನ ಮಧ್ಯಪ್ರದೇಶ ಪ್ರವೇಶಿಸಿದೆ.
ಒಟ್ಟು 3570 ಕಿ.ಮೀ ದೂರದ 150 ದಿನಗಳ ಪಾದಯಾತ್ರೆ 2023ರ ಫೆಬ್ರವರಿಗೆ ಜಮ್ಮುಕಾಶ್ಮೀರದಲ್ಲಿ ಸಮಾರೋಪಗೊಳ್ಳುವ ನಿರೀಕ್ಷೆಗಳಿವೆ.
Priyanka Gandhi, Daughter, Join, Rahul Gandhi, Bharat Jodo Yatra, Rajasthan,