ನಾಳೆ ಭಾರತ್ ಜೋಡೋ ಯಾತ್ರೆ ರಾಯಚೂರಿಗೆ : ಪ್ರಿಯಾಂಕ ಭಾಗಿ..?

Social Share

ಬೆಂಗಳೂರು, ಅ.20- ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಐಕ್ಯತಾ ಯಾತ್ರೆ ನಾಳೆ ಆಂಧ್ರ ಪ್ರವೇಶದಿಂದ ಮತ್ತೆ ರಾಜ್ಯ ಪ್ರವೇಶಿಸಲಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಗಾಂಧಿ ಪಾದಯಾತ್ರೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಹಾಸನಂಬ ದರ್ಶನಕ್ಕೆ ಸರತಿ ಸಾಲಿಲ್ಲಿ ನಿಂತಿದ್ದ ಯುವಕ ಹೃದಯಘಾತದಿಂದ ಸಾವು

ಸೆಪ್ಟಂಬರ್ 30ರಿಂದ ಅಕ್ಟೋಬರ್ 16ರವರೆಗೂ ಕರ್ನಾಟಕದ ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಬಳ್ಳಾರಿ ಜಿಲ್ಲೆಗಳಲ್ಲಿ ಸಂಚರಿಸಿದ ಯಾತ್ರೆ ಕಳೆದ ನಾಲ್ಕು ದಿನಗಳಿಂದ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಂಚರಿಸುತ್ತಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಮುಖ ನೇರ ಮಾರ್ಗದ ಅನುಸಾರ ಯಾತ್ರೆ ಮತ್ತೆ ರಾಯಚೂರು ಹಾದು ಹೋಗಬೇಕಿದೆ. ಹೀಗಾಗಿ ನಾಳೆ ಪಾದಯಾತ್ರೆ ಮತ್ತೆ ಕರ್ನಾಟಕ ಪ್ರವೇಶಿಸಲಿದೆ.

ಬೆಳಗ್ಗೆ ರಾಯಚೂರಿನಿಂದ ಆರಂಭವಾಗುವ ಯಾತ್ರೆ ಎರಡು ದಿನಗಳ ಕಾಲ ರಾಯಚೂರು ನಗರ, ಗ್ರಾಮೀಣ ಭಾಗದಲ್ಲಿ ಸಂಚರಿಸಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ಸೇರಿ ಅನೇಕ ನಾಯಕರು ಭಾಗವಹಿಸಲಿದ್ದಾರೆ.

ಯಾತ್ರೆಗೆ ಬೆಂಬಲ ನೀಡಲು ಪ್ರಿಯಾಂಕ ಗಾಂಧಿ ನಾಳೆ ಅಥವಾ ನಾಡಿದ್ದು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದಲ್ಲಿನ ಯಾತ್ರೆಯಲ್ಲೇ ಪ್ರಿಯಾಂಕ ಭಾಗವಹಿಸಬೇಕು ಎಂಬ ಬೇಡಿಕೆ ರಾಜ್ಯದ ನಾಯಕರದಾಗಿದೆ. ಆದರೆ ರಾಜ್ಯದಿಂದ ಯಾತ್ರೆ ಅಕ್ಟೋಬರ್ 23ರಂದು ತೆಲಂಗಾಣ ಪ್ರವೇಶಿಸಲಿದೆ. ಅಲ್ಲಿ ವಿಧಾನಸಭೆ ಚುನಾವಣೆಗೆ ತಯಾರಿ ನಡೆಯುತ್ತಿದೆ.

ಹೀಗಾಗಿ ಪ್ರಿಯಾಂಕ ಗಾಂಧಿ ತೆಲಂಗಾಣದಲ್ಲಿ ಯಾತ್ರೆಯಲ್ಲಿ ಭಾಗವಹಿಸಿದ್ದರೆ ಹೆಚ್ಚು ಸೂಕ್ತ ಎಂಬ ಲೆಕ್ಕಚಾರಗಳು ನಡೆದಿವೆ. ಹೀಗಾಗಿ ಪ್ರಿಯಾಂಕ ಗಾಂಧಿ ಕರ್ನಾಟಕದಲ್ಲಿ ಭಾಗವಹಿಸುತ್ತಾರೋ ಅಥವಾ ತೆಲಂಗಾಣದಲ್ಲೋ ಎಂಬ ಕುತೂಹಲಗಳು ಹೆಚ್ಚಾಗಿದ್ದವು. ಬಹುತೇಕ ಕರ್ನಾಟಕದಲ್ಲೇ ಪ್ರಿಯಾಂಕ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಇದೆ. ನಾಳೆ ಅಥವಾ ನಾಡಿದ್ದು ಸಹೋದರ ರಾಹುಲ್ ಜೊತೆ ಪ್ರಿಯಾಂಕ ಹೆಜ್ಜೆ ಹಾಕಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕನ್ನಡ ರಾಜ್ಯೋತ್ಸವದಂದು ಅಪ್ಪುಗೆ ಕರ್ನಾಟಕ ರತ್ನ ಪ್ರದಾನ

ಎಐಸಿಸಿಗೆ ನೂತನವಾಗಿ ಚುನಾಯಿತರಾದ ಮಲ್ಲಿಕಾರ್ಜುನ ಖರ್ಗೆ ಅವರು ಯಾತ್ರೆಯಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ. ರಾಹುಲ್‍ಗಾಂಧಿ ಅವರ ವರ್ಚಸ್ಸನ್ನು ಬದಲಾವಣೆ ಮಾಡುವ ಉದ್ದೇಶದಿಂದ ಇಡೀ ಕಾಂಗ್ರೆಸ್ ಟೊಂಕ ಕಟ್ಟಿ ನಿಂತು ನಡೆಸುತ್ತಿರುವ ಯಾತ್ರೆಗೆ ಈವರೆಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲಲ್ಲಿ ಸಂವಾದಗಳು, ಸಾರ್ವಜನಿಕ ಸಮಾವೇಶಗಳ ಮೂಲಕ ರಾಹುಲ್ ಜನ ಸಮಾನ್ಯರ ಜೊತೆ ಬೆರೆತು ಮುನ್ನೆಡೆಯುತ್ತಿದ್ದಾರೆ. ಈವರೆಗೂ ಸಾವಿರ ಕಿಲೋ ಮೀಟರ್ ದೂರ ಕ್ರಮಿಸಿದ್ದಾರೆ.

ತೆರಿಗೆ ಯೋಜನೆ ವಿರೋಧಿಸಿ ನ್ಯೂಜಿಲೆಂಡ್‍ನಾದ್ಯಂತ ರೈತರ ಪ್ರತಿಭಟನೆ

ಎಐಸಿಸಿ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರು ಅಕ್ಟೋಬರ್ 4-5ರಂದು ರಾಜ್ಯ ಪ್ರವಾಸ ಕೈಗೊಂಡು ಮೈಸೂರಿನಲ್ಲಿ ಪುತ್ರ ರಾಹುಲ್‍ಗಾಂಧಿಯೊಂದಿಗೆ ವಿಶ್ರಾಂತಿ ಪಡೆದು ಅಕ್ಟೋಬರ್ 6ರಂದು ಯಾತ್ರೆಯಲ್ಲಿ ಭಾಗವಹಿಸಿದ್ದರು.

ಅ.15ರಂದು ಬಳ್ಳಾರಿಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಸೋನಿಯಾ ಗಾಂ, ಪ್ರಿಯಾಂಕ ಗಾಂಧಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇಬ್ಬರು ಗೈರು ಹಾಜರಾಗಿ ರಾಜ್ಯ ನಾಯಕರ ಜೊತೆ ರಾಹುಲ್‍ಗಾಂಧಿ ಯವರೆ ಸಮಾವೇಶ ಮುಗಿಸಿ ಆಂಧ್ರ ಪ್ರದೇಶದತ್ತ ನಡೆದರು. ಈಗ ಪ್ರಿಯಾಂಕ ಗಾಂಧಿ ಅವರನ್ನು ರಾಜ್ಯಕ್ಕೆ ಕರೆ ತರಲೇಬೇಕು ಎಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸಿಗರು ದೆಹಲಿ ನಾಯಕರ ಜೊತೆ ನಿರಂತರ ಮಾತುಕತೆ ನಡೆಸುತ್ತಿದ್ದಾರೆ. ಪ್ರಿಯಾಂಕ ಅವರು ಇಂದಿರಾ ಗಾಂಧಿ ಹೋಲಿಕೆ ಇರುವುದರಿಂದ ಅವರ ಆಗಮನ ಕಾಂಗ್ರೆಸ್‍ಗೆ ಹೆಚ್ಚಿನ ಬಲ ತಂದುಕೊಡಲಿದೆ ಎಂಬ ಅಂದಾಜುಗಳಿವೆ.

Articles You Might Like

Share This Article