ಬೆಂಗಳೂರು, ಜ.16- ನಗರದ ಅರಮನೆ ಮೈದಾನದಲ್ಲಿ ನಡೆದ ನಾ ನಾಯಕಿ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಿಯಾಂಕ ಗಾಂಧಿ ಭದ್ರತೆಯನ್ನು ಲೆಕ್ಕಿಸದೆ ಸಮಾವೇಶಗೊಂಡಿದ್ದ ಮಹಿಳಾ ಕಾರ್ಯಕರ್ತರ ಕೈ ಕುಲುಕುವ ಮೂಲಕ ಸಂಚಲನ ಮೂಡಿಸಿದರು.
ಸಭಾಂಗಣದ ಹಾದಿಯುದ್ಧಕ್ಕೂ ಕೈ ನೀಡಿದವರಿಗೆ ಹಸ್ತಲಾಘವ ನೀಡುತ್ತಾ, ಅಲ್ಲಲ್ಲಿ ಕೆಲವರಿಗೆ ಸೆಲ್ಫಿಗೆ ಪೋಸು ನೀಡುತ್ತಾ ಪ್ರಿಯಾಂಕ ವೇದಿಕೆಯತ್ತ ಬಂದರು.
ವೇದಿಕೆಯಲ್ಲಿ ವಿಧಾನ ಪರಿಷತ್ ನ ಮಾಜಿ ಸದಸ್ಯೆ ಜಲಜಾನಾಯಕ್ ಪ್ರಿಯಾಂಕ ಅವರಿಗೆ ಲಂಬಾಣಿ ಸಾಂಪ್ರದಾಯಿಕ ದುಪ್ಪಟ್ಟ ಹೊದಿಸುವ ಮೂಲಕ ಬರಮಾಡಿಕೊಂಡರೆ, ಮಾಜಿಸಚಿವೆ ಮೊಟಮ್ಮ ಎರಡು ಎಳೆಯ ಚಿನ್ನದ ಸರವನ್ನು ಖುದ್ದು ಪ್ರಿಯಾಂಕರ ಕೊರಳಿಗೆ ಹಾಕಿ ಗಮನ ಸೆಳೆದರು.
ಹಿರಿಯ ನಾಯಕರಾದ ಎಂ.ಬಿ.ಪಾಟೀಲ್, ಬಿ.ಕೆ.ಹರಿಪ್ರಸಾದ್ ಬೃಹತ್ ಗಾತ್ರದ ಪ್ರತಿಮೆ ನೀಡುವ ಮೂಲಕ ಸ್ವಾಗತಿಸಿದರು.
#PriyankaGandhi #ShakeHands #Congress