ಸೀಮ್ಲಾ,ಡಿ.10- ತಮ್ಮ ರಾಜಕೀಯ ಜೀವನದ ಹಾದಿಯಲ್ಲಿ ಮೊದಲ ಬಾರಿಗೆ ಹಿಮಾಚಲಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಯಶಸ್ಸಿನತ್ತ ಮುಖ ಮಾಡಿರುವ ಪ್ರಿಯಾಂಕ ಗಾಂಧಿ ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲೂ ನಿರ್ಣಾಯಕರಾಗಿದ್ದಾರೆ.
ನಿನ್ನೆ ಸಂಜೆ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ 40 ಮಂದಿ ಚುನಾಯಿತ ಪ್ರತಿನಿಧಿಗಳು ಹೈಕಮಾಂಡ್ ನಿರ್ಧಾರಕ್ಕೆ ಬದ್ದ ಎಂದು ಒಂದು ಸಾಲಿನ ನಿರ್ಣಯಕ್ಕೆ ಸರ್ವಸಮ್ಮತಿ ಸೂಚಿಸಿದ್ದಾರೆ.
ಅಂತಿಮವಾಗಿ ಬೆಟ್ಟಗುಡ್ಡಗಳ ನಾಡು ಹಿಮಾಚಲಪ್ರದೇಶದ ಮುಖ್ಯಮಂತ್ರಿಯ ಆಯ್ಕೆ ಹೈಕಮಾಂಡ್ ಅಂಗಳಕ್ಕೆ ರವಾನೆಯಾಗಿದೆ. ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಪ್ರಿಯಾಂಕ ಗಾಂಧಿ ಚುನಾವಣೆಯ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.
2023ರಲ್ಲಿ ನಡೆಯಲಿವೆಯಂತೆ ಘನಘೋರ ಕೃತ್ಯಗಳು..!
ಬಿಜೆಪಿಯಿಂದ ಆಡಳಿತ ಯಂತ್ರ ದುರುಪಯೋಗವಾದ ಹೊರತಾಗಿಯೂ ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗಳಿಸಿದೆ. ಇದಕ್ಕೆ ಪ್ರಿಯಾಂಕ ಅವರ ನಾಯಕತ್ವ ಮತ್ತು ತಂತ್ರಗಾರಿಕೆ ಕಾರಣ ಎಂದು ಹೇಳಲಾಗುತ್ತಿದೆ.
ಹಿಮಾಚಲಪ್ರದೇಶದಲ್ಲಿ ಸಿರ್ಮೊರ್, ಸೋಲಾನ್, ಕಂಗ್ರಾ, ಉನ್ನಾ ಸೇರಿದಂತೆ ಹಲವು ಕಡೆ ಪ್ರಿಯಾಂಕ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಅಲ್ಲಿ ಸೇನೆಯಲ್ಲಿ ನೂತನವಾಗಿ ಜಾರಿಗೊಳಿಸಲಾಗಿರುವ ಅಗ್ನಿಪಥ್‍ನ ಲೋಪಗಳು, ನಿರುದ್ಯೋಗ, ಹಳೆ ಪಿಂಚಣಿ ವ್ಯವಸ್ಥೆಯ ಬಗ್ಗೆ ಜನಜಾಗೃತಿ ಮೂಡಿಸಿದ್ದರು. ಹೀಗಾಗಿ ಹಿಮಾಚಲಪ್ರದೇಶದ ಜನ ಕಾಂಗ್ರೆಸ್‍ನತ್ತ ಒಲವು ತೋರಿದರು ಎಂದು ಹೇಳಲಾಗಿದೆ.
ಇಷ್ಟು ದಿನ ನೀವು ಪೂಜಿಸಿದ ವಿಗ್ರಹ ಹಿಂದೂ ದೇವರಲ್ಲ. ಅದು ಬುದ್ಧನ ಶಿಲ್ಪ : ಮದ್ರಾಸ್ ಹೈಕೋರ್ಟ್
ಈ ಮೊದಲು ಪ್ರಿಯಾಂಕ ಗಾಂಧಿ ಉತ್ತರಪ್ರದೇಶದ ಚುನಾವಣೆಯಲ್ಲಿ ಭರವಸೆ ಮೂಡಿಸಿದರು. ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪ್ರಧಾನಿ ನರೇಂದ್ರಮೋದಿ ಅವರ ವಿರುದ್ದ ಸೋದರ ರಾಹುಲ್ ಗಾಂಧಿ ಅವರೊಂದಿಗೆ ಸೇರಿ ಸಮರ ಸಾರಿದ್ದರು. ಆದರೆ ಅದು ಯಶಸ್ವಿಯಾಗಲಿಲ್ಲ. ಆ ಬಳಿಕ ಗೋವಾ, ಮಣಿಪುರ ಚುನಾವಣೆ ನಡೆದವರಾದರೂ ಪ್ರಿಯಾಂಕ ಅತ್ತ ತಲೆ ಹಾಕಲಿಲ್ಲ.
ಹಿಮಾಚಲಪ್ರದೇಶದಲ್ಲಿ ರ್ನಿಷ್ಟವಾಗಿ ತೊಡಗಿಸಿಕೊಂಡ ಪ್ರಿಯಾಂಕ ಯಶಸ್ಸು ಗಳಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಆಯ್ಕೆಯಲ್ಲಿ ಅವರ ಮಾತೇ ಅಂತಿಮ ಎಂದು ಹೇಳಲಾಗಿದೆ.
ವಿವಾದಕ್ಕೆ ಎಡೆ ಮಾಡಿಕೊಟ್ಟ ಪವನ್ ಕಲ್ಯಾಣ್ ಪ್ರಚಾರ ರಥದ ಬಣ್ಣ
ಹಿಮಾಚಲಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್, ಸುಖ್ವಿಂದರ್ ಸಿಂಗ್ ಶುಕು, ಮುಖೇಶ್ ಅಗ್ನಿಹೋತ್ರಿ ಅವರ ನಡುವೆ ಪ್ರಬಲ ಪೈಪೋಟಿ ಇದೆ. ನಿನ್ನೆ ಹೈಕಮಾಂಡ್ ನಾಯಕರಾದ ಛತ್ತೀಸ್‍ಘಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ವೀಕ್ಷಕರಾಗಿ ಆಗಮಿಸಿದ ವೇಳೆ, ಪ್ರತಿಭಾ ಅವರ ಬೆಂಬಲಿಗರು ಕಾರನ್ನು ಘೇರಾವ್ ಮಾಡಿ, ವೀರಭದ್ರ ಸಿಂಗ್ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.
Priyanka Gandhi, announce, Himachal, Chief Minister,