ರಾಜ್ಯಕ್ಕೆ ಪ್ರಿಯಾಂಕ ಆಗಮನ, ಕಾಂಗ್ರೆಸ್‌ನಲ್ಲಿ ಸಂಚಲನ

Social Share

ಬೆಂಗಳೂರು,ಜ.16- ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ರಾಜ್ಯಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರ ಪ್ರವಾಸ ಕಾಂಗ್ರೆಸ್‍ನಲ್ಲಿ ಹೊಸ ಸಂಚಲನ ಮೂಡಿಸಿತು. ಪ್ರಮುಖವಾಗಿ ಮಹಿಳಾ ಮತದಾರರು ಮತ್ತು ನಾಯಕಿಯರನ್ನು ಗುರಿಯಾಗಿಸಿಕೊಂಡು ನಡೆದ ಸಮಾವೇಶದಲ್ಲಿ ನಿರುದ್ಯೋಗಿ ಯುವತಿಯರಿಗೆ ಮಾಸಾಶನದ ಭರವಸೆ ಕೂಡ ವ್ಯಕ್ತವಾಗಿದೆ.

ಹಲವಾರು ಜನಾಕರ್ಷಿತ ಭರವಸೆಗಳ ಮೂಲಕ ಮತದಾರರನ್ನು ಸೆಳೆಯಲು ಕಸರತ್ತು ನಡೆಸುತ್ತಿರುವ ರಾಜ್ಯ ಕಾಂಗ್ರೆಸ್‍ಗೆ ಪ್ರಿಯಾಂಕ ಗಾಂಧಿ ಭೇಟಿ ಮತ್ತಷ್ಟು ಬಲ ನೀಡಿದೆ. ಸೋನಿಯಾ ಗಾಂಧಿ ಅವರು ಈ ಹಿಂದೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೊ ಯಾತ್ರೆಗೆ ಭಾಗವಹಿಸಿತ್ತು. ಆದರೆ ಆ ವೇಳೆಯಲ್ಲಿ ಪ್ರಿಯಾಂಕ ಬಂದಿರಲಿಲ್ಲ.

ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ವೇಳೆ ಪ್ರಮಾಣ ವಚನ ಸ್ವೀಕರ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿತ್ತಾದರೂ ಆಗಲೂ ಬಂದಿರಲಿಲ್ಲ. ಬದಲಾಗಿ ದೂರವಾಣಿಯಲ್ಲಿ ಶುಭಾಷಯ ಕೋರಿದ್ದರು.
ಪ್ರಿಯಾಂಕ ಅವರ ಪ್ರವಾಸಕ್ಕೆ ಭಾರೀ ಬೇಡಿಕೆಗಳು ಕೇಳಿಬಂದಿದ್ದವು. ಅಂತಿಮವಾಗಿ ನಾ ನಾಯಕಿ ಸಮಾವೇಶದಲ್ಲಿ ಅವರು ಭಾಗವಹಿಸಿದ್ದರು.

ಈ ಮೂಲಕ ಕಾಂಗ್ರೆಸ್ ಮಹಿಳಾ ಕೇಂದ್ರಿತ ರಾಜಕಾರಣಕ್ಕೆ ಚಾಲನೆ ನೀಡಿದೆ. ಶೆ.50ಕ್ಕಿಂತಲೂ ಹೆಚ್ಚಿನ ಮಹಿಳಾ ಮತದಾರರು ರಾಜ್ಯದಲ್ಲಿ ನೊಂದಣಿಯಾಗಿದ್ದಾರೆ. ಹೀಗಾಗಿ ಪ್ರಿಯಾಂಕ ಅವರ ಆಗಮನ ನಾರಿ ಶಕ್ತಿಗೆ ಹೊಸ ಆಶಾಕಿರಣವಾಗಲಿದೆ ಎಂಬ ವಿಶ್ವಾಸಗಳು ಸಮಾವೇಶದಲ್ಲಿ ಕೇಳಿಬಂದವು.

ಮೊದಲ ಹಂತದಲ್ಲಿ ಮಹಿಳಾ ನಾಯಕಿಯರಿಗೆ ಮಾತ್ರ ಸಮಾವೇಶದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಗ್ರಾಪಂನಿಂದ ಸಂಸತ್‍ವರೆಗೂ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವರು ಸಹಕಾರ ಹಾಗೂ ಇತರ ಕ್ಷೇತ್ರಗಳಲ್ಲಿ ಚುನಾಯಿತರಾದವರು, ಚುನಾವಣೆಯಲ್ಲಿ ಸ್ರ್ಪಧಿಸಿ ಸೋಲು ಕಂಡ ನಾಯಕರು ಭಾಗವಹಿಸಿದ್ದರು.
ಪ್ರತಿ ಬೂತ್ ಮಟ್ಟದಿಂದಲೂ ಮೂರಕ್ಕೂ ಹೆಚ್ಚು ಮಂದಿ ನಾಯಕಿಯರು ಸೇರಿದಂತೆ ಸಾವಿರಾರು ಮಂದಿ ಪ್ರಿಯಾಂಕ ಅವರನ್ನು ನೋಡಲು ಆಗಮಿಸಿದ್ದರು.

ಸ್ಯಾಂಟ್ರೋ ರವಿ ಆಮಿಷಕ್ಕೆ ಒಳಗಾಗುವಂತ ಪ್ರಸಂಗ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವು ಪ್ರಮುಖ ನಾಯಕರಿಗೆ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು.

ಪ್ರಿಯಾಂಕ ಗಾಂಧಿ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರ ಮುಖ ಹೋಲಿಕೆ ಹೊಂದಿರುವುದರಿಂದ ಹಳೆ ತಲೆಮಾರಿನಲ್ಲಿ ಅವರ ಬಗ್ಗೆ ಹೆಚ್ಚಿನ ಅಭಿಮಾನವಿದೆ. ಅವರ ಸಕ್ರಿಯ ಪಾಲ್ಗೊಳ್ಳುವಿಕೆ,ಮತ್ತು ಚುರುಕುತನದಿಂದಾಗಿ ಹೊಸ ತಲೆಮಾರಿಗೂ ಆಕರ್ಷಿತರಾಗಿದ್ದಾರೆ.ಹೀಗಾಗಿ ಪ್ರಿಯಾಂಕ ಅವರ ಆಗಮನ ಕಾಂಗ್ರೆಸ್‍ಗೆ ಹೊಸ ಹುರುಪು ಮೂಡಿಸಿದೆ.

ಪ್ರಜಾಧ್ವನಿ ಸಂಕಲ್ಪ ರಥಯಾತ್ರೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕರು ಅದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಪ್ರಿಯಾಂಕ ಗಾಂಧಿ ಅವರ ಕಾರ್ಯಕ್ರಮಕ್ಕೆ ಪೂರ್ವ ತಯಾರಿ ನಡೆಸಿದರು.

ನೇಪಾಳ ವಿಮಾನ ದುರಂತದಲ್ಲಿ ಎಲ್ಲಾ 72 ಪ್ರಯಾಣಿಕರ ಸಾವು..!

ಮುಂದಿನ ದಿನಗಳಲ್ಲಿ ಪ್ರಿಯಾಂಕ ಮತ್ತಷ್ಟು ಕಾರ್ಯಕ್ರಮಗಳಲ್ಲಿ ಭಾಗಹಿಸುವ ಸಾಧ್ಯತೆಗಳಿವೆ. ಚುನಾವಣಾ ಆಯೋಗಕ್ಕೆ ಸಲ್ಲಿಸುವ ಪಟ್ಟಿಯಲ್ಲಿ ಪ್ರಿಯಾಂಕ ಸ್ಟಾರ್ ಪ್ರಚಾರಕಿ ಸ್ಥಾನವನ್ನು ಪಡೆದಿದ್ದಾರೆ.

ಇತ್ತೀಚೆಗೆ ನಡೆದ ಹಿಮಾಚಲಪ್ರದೇಶದ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದ ಪ್ರಿಯಾಂಕ ಯಶಸ್ವಿಯಾಗಿದ್ದು ಅಲ್ಲಿ ಸ್ವಂತ ಬಲದ ಮೇಲೆ ಕಾಂಗ್ರೆಸ್ ಅಕಾರಕ್ಕೆ ಬರಲು ನೆರವಾಗಿದ್ದರು. ಹೀಗಾಗಿ ಪ್ರಿಯಾಂಕ ಗಾಂಧಿ ಅವರ ಆಗಮನ ರಾಜ್ಯ ಕಾಂಗ್ರೆಸ್‍ನಲ್ಲಿ ಹೊಸ ಭರವಸೆಗಳನ್ನು ಹುಟ್ಟಿಸಿದೆ.

Priyanka Gandhi Vadra, Congress, women, convention, Bengaluru,

Articles You Might Like

Share This Article