ಪ್ರಿಯಾಂಕಾ ಗಾಂಧಿ ಪಿಎ ವಿರುದ್ಧ ಎಫ್‍ಐಆರ್ ದಾಖಲು

Social Share

ಮೀರತ್,ಮಾ.8-ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಆಪ್ತ ಸಹಾಯಕ ತನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಬಿಗ್ ಬಾಸ್‍ನಲ್ಲಿ ಕಂಟೆಸ್ಟೆಂಟ್ ಅರ್ಚನಾ ಗೌತಮ್ ಆರೋಪಿಸಿದ್ದಾರೆ.

ಬಿಗ್ ಬಾಸ್ 16ನೇ ಸೀಸನಿನ ಟಾಪ್ 5 ಫೈನಲಿಸ್ಟ್‍ರಲ್ಲಿ ಒಬ್ಬರಾಗಿದ್ದ ಅರ್ಚನಾ ಗೌತಮ್ ಅವರು ಈ ಗಂಭೀರ ಆರೋಪ ಮಾಡಿದ್ದು, ಈ ಕುರಿತಂತೆ ಮೀರತ್‍ನ ಪರ್ತಾಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಫೇಸ್‍ಬುಕ್ ಲೈವ್‍ನಲ್ಲಿ ಘಟನೆಯ ಬಗ್ಗೆ ವಿವರವಾಗಿ ಮಾತನಾಡಿರುವ ಅವರು ಪ್ರಿಯಾಂಕಾ ಅವರ ಆಪ್ತ ಸಹಾಯಕ ಸಂದೀಪ್ ಸಿಂಗ್ ನನ್ನ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರಿದ್ದಾರೆ.

ರಾಜ್ಯದಲ್ಲಿ ದಿನೇದಿನೇ ಹೆಚ್ಚುತ್ತಿರುವ ಬಿಸಿಗಾಳಿಯಿಂದ ತಪ್ಪಿಸಿಕೊಳ್ಳೋದು ಹೇಗೆ..?

ಪ್ರಿಯಾಂಕಾ ಗಾಂಧಿಯವರ ಆಹ್ವಾನದ ಮೇರೆಗೆ ಕಾಂಗ್ರೆಸ್ ಮಹಾಧಿವೇಶನದಲ್ಲಿ ಪಾಲ್ಗೊಳ್ಳಲು ಫೆಬ್ರವರಿ 26 ರಂದು ಛತ್ತೀಸ್‍ಗಢದ ರಾಯ್‍ಪುರಕ್ಕೆ ತಮ್ಮ ಪುತ್ರಿ ಅರ್ಚನಾ ತೆರಳಿದ್ದ ಸಂದರ್ಭದಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಿಸುವಂತೆ ಅವರ ಆಪ್ತ ಸಹಾಯಕರನ್ನು ಕೇಳಿಕೊಂಡಿದ್ದರು ಎಂದು ಆರ್ಚನಾ ತಂದೆ ಗೌತಮ್ ಬುದ್ಧ ತಿಳಿಸಿದ್ದಾರೆ.

ಆದರೆ, ಆಕೆಯನ್ನು ಪ್ರಿಯಾಂಕಾ ಗಾಂಧಿಗೆ ಪರಿಚಯಿಸಲು ನಿರಾಕರಿಸಿದ್ದ ಆತ, ಜಾತಿವಾದಿ ಪದಗಳು ಹಾಗೂ ಅವಾಚ್ಯ ಶಬ್ಧಗಳನ್ನು ಬಳಸಿ ಅರ್ಚನಾ ಜತೆ ಅಸಭ್ಯವಾಗಿ ಮಾತನಾಡಿದ್ದಾನೆ.ಇದಲ್ಲದೆ ಕೊಲೆ ಬೆದರಿಕೆಯನ್ನೂ ಹಾಕಿದ್ದಾನೆ ಎಂದು ಆರೋಪಿಸಿದ್ದಾರೆ.

ಜಗತ್ತನ್ನು ಆರೋಗ್ಯಕರ ತಾಣವನ್ನಾಗಿಸುವ ಭಾರತೀಯ ಸಿರಿಧಾನ್ಯಗಳು

ಅರ್ಚನಾ ಅವರ ತಂದೆ ಗೌತಮ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮೀರತ್ ಎಸ್ಪಿ ಪಿಯೂಷ್ ಸಿಂಗ್ ತಿಳಿಸಿದ್ದಾರೆ. ಬಿಗ್ ಬಾಸ್ ಮಾಜಿ ಸ್ರ್ಪಧಿ ಮತ್ತು ಕಾಂಗ್ರೆಸ್ ನಾಯಕಿ ಅರ್ಚನಾ ಗೌತಮ್ ಅವರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪಿಎ ವಿರುದ್ಧ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

Priyanka Gandhi, aide, misbehaved, Bigg Boss, fame, Archana Gautam,

Articles You Might Like

Share This Article