ಬೆಂಗಳೂರು,ಡಿ.6-ಮಲ್ಲಿಕಾರ್ಜುನ ಖರ್ಗೆ ಪುತ್ರ ಶಾಸಕ ಪ್ರಿಯಾಂಕ ಖರ್ಗೆ ತನ್ನ ಆಪ್ತ ರಾಜು ಕಪನೂರು ಅವರಿಗೆ ಸುಪಾರಿ ಕೊಟ್ಟು ನನ್ನನ್ನು ಕೊಲ್ಲಿಸಲು ಸಂಚರೂಪಿಸಿದ್ದರು. ಇದು ಸಾಬೀತಾಗಿ ಅವರ ಆಪ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ಖರ್ಗೆ ಕುಟುಂಬದ ಮೇಲೆ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಗಂಭೀರ ಆರೋಪ ಮಾಡಿದ್ದಾರೆ.
ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಅನೇಕ ವರ್ಷಗಳಿಂದ ಚಿತ್ತಾಪುರ ಕ್ಷೇತ್ರದಲ್ಲಿ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದೇನೆ.
ಬಿಜೆಪಿ ಕಚೇರಿಯತ್ತ ಫ್ಲೈಯಿಂಗ್ ಕಿಸ್ ರವಾನಿಸಿದ ರಾಹುಲ್
ಬಡವ ದೀನದಲಿತರಿಗೆ ಆರ್ಥಿಕ ನೆರವು ಮತ್ತು ಸರ್ಕಾರಿ ಸವಲತ್ತುಗಳ ಬಗ್ಗೆ ಅರಿವು ಮೂಡಿಸಿತ್ತಾ ಬರುತ್ತಿದ್ದು, ಇದನ್ನು ಸಹಿಸಲಾಗದ ಪ್ರಿಯಾಂಕ ಖರ್ಗೆ ನನ್ನನ್ನು ಮುಗಿಸಲು ಸಂಚುರೂಪಿಸಿದ್ದಾರೆ.
ಜನರು ಮತ್ತು ನನ್ನ ನಡುವೆ ಇರುವ ಉತ್ತಮ ಬಾಂಧವ್ಯ ಪ್ರಿಯಾಂಕ ಖರ್ಗೆ ರಾಜಕೀಯಕ್ಕೆ ಮುಳುವಾಗಬಹುದು ಎಂಬ ದುರಾಲೋಚನೆಯಿಂದ ಈ ಹೇಯಕೃತ್ಯಕ್ಕೆ ಕೈ ಹಾಕಿದ್ದಾರೆ ಎಂದು ದೂರಿದರು.
#PriyankaKharge #Allegation #MurderAttempt