ಬೆಂಗಳೂರು, ಫೆ. 17- ಪ್ರೊ ಕಬಡ್ಡಿ 8ರ ಸೆಮಿಫೈನಲ್ ರೇಸ್ ಈಗಾಗಲೇ ಶುರುವಾಗಿದ್ದು ಪವನ್ ಶೆರಾವತ್ ನಾಯಕತ್ವದ ಬೆಂಗಳೂರು ಬುಲ್ಸ್ ತಂಡದ ಭವಿಷ್ಯವು ಇಂದೇ ನಿರ್ಧಾರವಾಗಲಿದೆ. 2016ರ ಪ್ರೊ ಕಬಡ್ಡಿ ಚಾಂಪಿಯನ್ಸ್ ಆಗಿರುವ ಬೆಂಗಳೂರು ಬುಲ್ಸ್ ತಂಡವು ಆರಂಭದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಈ ಬಾರಿಯೂ ಚಾಂಪಿಯನ್ಸ್ ಆಗುತ್ತಾರೆ ಎಂಬ ಆತ್ಮವಿಶ್ವಾಸವನ್ನು ಮೂಡಿಸಿದ್ದರಾದರೂ ಬೆಂಗಾಲ್ ವಾರಿಯರ್ಸ್, ದಬಾಂಗ್ ಡೆಲ್ಲಿ, ಪಾಟ್ನಾ ಪೈರೇಟ್ಸ್ ತಂಡಗಳ ವಿರುದ್ಧ ತಾವು ಮಾಡಿದ ತಪ್ಪಿನಿಂದಾಗಿ ಇಂದು ಸೆಮಿಫೈನಲ್‍ಗೇರುವುದೇ ದುರ್ಗಮವೆನ್ನುವ ಸ್ಥಿತಿಯನ್ನು ತಂದುಕೊಂಡಿದ್ದಾರೆ.
ಬೆಂಗಾಲ್ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಂತೂ ನಬಿಭಕ್ಷ್‍ರ ರೇಡಿಂಗ್‍ನಲ್ಲಿ ಆದ ಪ್ರಮಾದದಿಂದ ಒಂದೇ ರೇಡ್‍ನಲ್ಲಿ 9 ಅಂಕಗಳನ್ನು ಬಿಟ್ಟುಕೊಟ್ಟು ಸೋಲು ಕಂಡಿದ್ದ ಬೆಂಗಳೂರು ಬುಲ್ಸ್ ನಂತರಪದ ಕೆಲವು ಪಂದ್ಯಗಳಲ್ಲೂ ಅದೇ ರೀತಿಯ ತಪ್ಪು ಎಸಗಿದ್ದರಿಂದ ಸೆಮಿಫೈನಲ್ ತಲುಪುವ ಹಾದಿಯನ್ನು ದುರ್ಗಮವಾಗಿಸಿಕೊಂಡಿದ್ದು ಇಂದಿನ ಪಂದ್ಯದಲ್ಲಿ ಬಲಿಷ್ಠ ಹರಿಯಾಣ ಸ್ಟೀಲರ್ಸ್ ವಿರುದ್ಧ ಸೋತರೆ ಸೆಮಿಫೈನಲ್‍ಗೇರುವ ಕನಸು ಛಿದ್ರವಾಗುತ್ತದೆ.
ಈಗಾಗಲೇ ಪಾಟ್ನಾ ಪೈರೇಟ್ಸ್ ಆಡಿರುವ 20 ಪಂದ್ಯಗಳಲ್ಲಿ 15ರಲ್ಲಿ ಗೆಲುವು ಸಾಸುವ ಮೂಲಕ 80 ಪಾಯಿಂಟ್ಸ್‍ಗಳನ್ನು ಕಲೆ ಹಾಕುವ ಮೂಲಕ ಟಾಪ್ 1 ಸ್ಥಾನವನ್ನು ಅಲಂಕರಿಸಿದ್ದರೆ, ದಬಾಂಗ್ ಡೆಲ್ಲಿ 20 ಪಂದ್ಯಗಳಿಂದ 65 ಅಂಕಗಳನ್ನು ಕಲೆ ಹಾಕುವ ಮೂಲಕ 2ನೆ ಸ್ಥಾನದಲ್ಲಿದೆ, ಆ ತಂಡವು ಇನ್ನೂ 2 ಪಂದ್ಯಗಳನ್ನಾಡಬೇಕಾಗಿರುವುದರಿಂದ ಒಂದರಲ್ಲಿ ಗೆಲುವು ಸಾಸಿದರೂ ಸೆಮಿಫೈನಲ್‍ಗೆ ತಲುಪುತ್ತದೆ.
2 ಸ್ಥಾನಕ್ಕೆ 5 ತಂಡಗಳ ನಡುವೆ ಪೈಪೆÇೀಟಿ:
ಪಾಟ್ನಾ ಹಾಗೂ ಡೆಲ್ಲಿ ದಬಾಂಗ್ ಡೆಲ್ಲಿ ತಂಡಗಳು ಈಗಾಗಲೇ ಸೆಮಿಫೈನಲ್ ಸ್ಥಾನವನ್ನು ಭದ್ರಪಡಿಸಿಕೊಂಡಿರುವುದರಿಂದ ಇನ್ನುಳಿದಿರುವ 2 ಸ್ಥಾನಕ್ಕಾಗಿ 5 ತಂಡಗಳ ನಡುವೆ ಪೈಪೋಟಿ ನಡೆಸುತ್ತಿದೆ.
ಯುಪಿ ಯೋಧಾಗೆ ಕಡೇ ಛಾನ್ಸ್:
3ನೆ ಸ್ಥಾನದಲ್ಲಿರುವ ಯುಪಿ ಯೋಧಾ ತಂಡವು ಈಗಾಗಲೇ 21 ಪಂದ್ಯಗಳಲ್ಲಿ 9ರಲ್ಲಿ ಗೆಲುವು ಸಾಸಿ, ಅಷ್ಟೇ ಪಂದ್ಯಗಳಲ್ಲಿ ಸೋಲು ಕಂಡು 3 ಪಂದ್ಯಗಳ ಡ್ರಾನೊಂದಿಗೆ 63 ಅಂಕಗಳನ್ನು ಕಲೆಹಾಕುವ ಮೂಲಕ 3 ನೆ ಸ್ಥಾನದಲ್ಲಿದೆ, ಇಂದು ಆ ತಂಡ ಆಡುವ ಅಂತಿಮ ಪಂದ್ಯದಲ್ಲಿ ಯು ಮುಂಬಾ ಎದುರು ಗೆಲುವು ಸಾಸಿದರೆ 69 ಅಥವಾ 70 ಅಂಕ (ಭಾರೀ ಅಂತರದಿಂದ ಗೆಲುವು ಸಾಸಿದರೆ) 2ನೆ ಸ್ಥಾನವನ್ನು ಅಲಂಕರಿಸುವ ಮೂಲಕ ಸೆಮಿಫೈನಲ್‍ಗೆ ತಲುಪುವ ಅವಕಾಶ ಪಡೆಯುತ್ತದೆ. ಒಂದು ವೇಳೆ ಸೋಲು ಕಂಡರೆ ಸೆಮೀಸ್‍ಗೇರಲು ಇತರ ತಂಡಗಳ ಫಲಿತಾಂಶವನ್ನು ಕಾದು ನೋಡಬೇಕಾಗುತ್ತದೆ.
ಬುಲ್ಸ್‍ಗೆ ಸ್ಟೀಲರ್ಸ್ ಸವಾಲು:
20 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಜಯಿಸಿ 63 ಅಂಕಗಳನ್ನು ಕಲೆ ಹಾಕಿರುವ ಹರಿಯಾಣ ಸ್ಟೀಲರ್ಸ್ ತಂಡವು ಇಂದು ಬುಲ್ಸ್‍ನ ಸವಾಲು ಎದುರಿಸುತ್ತಿದ್ದು, ಈ ಪಂದ್ಯವು ಎರಡು ತಂಡಗಳಿಗೂ ಮಹತ್ತರ ಪಂದ್ಯವಾಗಿದ್ದು ಒಂದು ವೇಳೆ ಹರಿಯಾಣ ಸ್ಟೀಲರ್ಸ್ ಬುಲ್ಸ್ ವಿರುದ್ಧ ಸೋತರೆ ಆ ತಂಡಕ್ಕೆ ಮತ್ತೊಂದು ಪಂದ್ಯದಲ್ಲಿ ಭಾರೀ ಅಂತರದಿಂದ ಗೆಲುವು ಸಾಸುವ ಮೂಲಕ ಸೆಮೀಸ್‍ಗೇರುವ ಅವಕಾಶ ಇರುತ್ತದೆ.
ಆದರೆ ಈ ಋತುವಿನ ಕೊನೆಯ ಪಂದ್ಯ ಆಡುತ್ತಿರುವ ಪವನ್ ಶೆರಾವತ್ ನಾಯಕತ್ವದ ಬೆಂಗಳೂರು ಬುಲ್ಸ್ ತಂಡವು 61 ಅಂಕಗಳನ್ನು ಮಾತ್ರ ಕಲೆ ಹಾಕಿದ್ದು ಇಂದಿನ ಪಂದ್ಯದಲ್ಲಿ ಒಂದು ವೇಳೆ ಸೋಲು ಕಂಡರೆ ಸೆಮೀಸ್‍ಗೇರುವ ಅವಕಾಶವನ್ನು ಕಳೆದುಕೊಳ್ಳಬೇ ಕಾಗುತ್ತದೆ.
21 ಪಂದ್ಯಗಳಲ್ಲಿ 10 ಪಂದ್ಯಗಳಲ್ಲಿ ಗೆಲುವು, 9ರಲ್ಲಿ ಸೋಲು, 2 ಡ್ರಾನೊಂದಿಗೆ 62 ಅಂಕಗಳನ್ನು ಕಲೆ ಹಾಕಿರುವ ಜೈಪುರ್ ಪಿಂಕ್ ಪ್ಯಾಂಥರ್ಸ್ 5ನೆ ಸ್ಥಾನದಲ್ಲಿದ್ದು ಆ ತಂಡಕ್ಕೆ ಇನ್ನೊಂದು ಪಂದ್ಯ ಬಾಕಿ ಉಳಿದಿದ್ದು ಆ ಪಂದ್ಯದಲ್ಲಿ ಗೆಲುವು ಸಾಸಿದರೆ ಸುಲಭವಾಗಿ ಸೆಮಿಫೈನಲ್‍ಗೆ ತಲುಪಬಹುದು, ಒಂದು ವೇಳೆ ಸೋತರೆ ಅದರ ಸೆಮೀಸ್ ಹಾದಿ ದುರ್ಗಮವಾಗುತ್ತದೆ.
20 ಪಂದ್ಯಗಳಲ್ಲಿ 11 ಪಂದ್ಯಗಳಲ್ಲಿ ಗೆಲುವು ಸಾಸಿರುವ ಪುನೇರಿ ಪಲ್ಟನ್ 60 ಅಂಕಗಳನ್ನು ಕಲೆ ಹಾಕಿದ್ದು ಇನ್ನುಳಿದ 2 ಪಂದ್ಯಗಳಿಂದ ಆ ತಂಡಕ್ಕೆ 10 ಅಥವಾ 12 ಅಂಕಗಳನ್ನು ಕಲೆ ಹಾಕುವ ಅವಕಾಶ ಇರುವುದರಿಂದ ಸುಲಭವಾಗಿ ಸೆಮಿಫೈನಲ್ಸ್‍ಗೇರಬಹುದು ಎಂಬ ಲೆಕ್ಕಾಚಾರದಲ್ಲಿದೆ ಆದರೂ ಉಳಿದಿರುವ 2 ಪಂದ್ಯಗಳಲ್ಲಿ 1ರಲ್ಲಿ ಸೋಲು ಕಂಡರೂ ಕೂಡ ಆ ತಂಡದ ಸೆಮಿಫೈನಲ್ಸ್‍ಗೇರುವ ಕನಸು ನನಸಾಗಿಯೇ ಉಳಿಯುತ್ತದೆ.
