ಇಂದು ಸೆಮಿಫೈನಲ್ ; ಬೆಂಗಳೂರು ಬುಲ್ಸ್ ಗೆ ದಬಾಂಗ್ ಸವಾಲು

Social Share

ಬೆಂಗಳೂರು, ಫೆ. 23- ವಿವೋ ಪ್ರೊ ಕಬಡ್ಡಿ ಸೆಮಿಫೈನಲ್‍ನಲ್ಲಿ ಇಂದು ಪವನ್‍ಕುಮಾರ್ ಶೇರಾವತ್ ನಾಯಕತ್ವದ ಬೆಂಗಳೂರು ಬುಲ್ಸ್ ತಂಡವು ದಬಾಂಗ್ ಡೆಲ್ಲಿ ತಂಡದ ಸವಾಲನ್ನು ಎದುರಿಸುತ್ತಿದ್ದು ಇಂದಿನ ಪಂದ್ಯವನ್ನು ಜಯಿಸುವ ಮೂಲಕ ಫೈನಲ್‍ಗೇರಲು ಎರಡು ತಂಡಗಳು ಉತ್ಸುಕವಾಗಿವೆ.
ಬೆಂಗಳೂರು ಬುಲ್ಸ್ ಮತ್ತು ದಬಾಂಗ್ ಡೆಲ್ಲಿ ತಂಡಗಳೆರಡರಲ್ಲೂ ಉತ್ತಮ ರೇಡರ್‍ಗಳು ಹಾಗೂ ಡಿಫರೆಂಡರ್‍ಗಳಿದ್ದು ಇಂದಿನ ಪಂದ್ಯದಲ್ಲಿ ತಮ್ಮ ಎಲ್ಲಾ ಶಕ್ತಿಯನ್ನು ಬಳಸುವ ಮೂಲಕ ತಮ್ಮ ನೆಚ್ಚಿನ ತಂಡವನ್ನು ಪ್ರಶಸ್ತಿ ಸುತ್ತಿಗೆ ತಲುಪಿಸಲು ಎರಡು ತಂಡಗಳ ಸ್ಟಾರ್ ಆಟಗಾರರು ತುದಿಗಾಲಲ್ಲಿ ನಿಂತಿದ್ದಾರೆ.
ಇಂದಿನ ಪಂದ್ಯವನ್ನು ಒಂದು ರೀತಿ ಬುಲ್ಸ್ ನಾಯಕ ಪವನ್‍ಕುಮಾರ್ ಶೆರಾವತ್ ಹಾಗೂ ನವೀನ್‍ಕುಮಾರ್‍ರ ನಡುವಿನ ಹೋರಾಟವೆಂದೇ ಬಿಂಬಿಸಲಾಗುತ್ತಿದೆ. ಆದರೆ ಕೆಲವು ಪಂದ್ಯಗಳಿಂದ ನವೀನ್ ಅಖಾಡಕ್ಕೆ ಇಳಿಯದಿಲ್ಲ ಇಂದಿನ ಪಂದ್ಯದಲ್ಲೂ ಅವರು ಹೊರಗುಳಿದರೆ ದಬಾಂಗ್‍ಗೆ ಕಷ್ಟವಾಗಬಹುದು.
ಬೆಂಗಳೂರು ಬುಲ್ಸ್ ತಂಡವು ರೇಡಿಂಗ್‍ನಲ್ಲಿ ಹೆಚ್ಚಾಗಿ ಪವನ್‍ಕುಮಾರ್ ಶೆರಾವತ್ ಅವರನ್ನೇ ನೆಚ್ಚಿಕೊಂಡಿದ್ದರೂ ಕೂಡ ಅವರಿಗೆ ಭರತ್ ಹಾಗೂ ಚಂದ್ರನ್ ರಂಜಿತ್ ಅವರು ಉತ್ತಮ ಸಾಥ್ ನೀಡುತ್ತಿರುವುದರಿಂದ ಎಲಿಮಿ ನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಬುಲ್ಸ್ ಸುಲಭವಾಗಿ ಗೆಲುವು ಸಾಧಿಸಿ ಸೆಮಿಫೈನಲ್‍ಗೆ ತಲುಪಿದೆ.
ರೇಡಿಂಗ್‍ನಷ್ಟೇ ಡಿಫೆಂಡಿಗ್‍ನಲ್ಲೂ ಬಲಿಷ್ಠವಾಗಿರುವ ಬುಲ್ಸ್ ಪಡೆಗೆ ಮಹೇಂದರ್, ಸೌರಭ್ ನಂದಾಲ್, ಅಮನ್, ಜೈದೀಪ್ ಅವರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.
ಇನ್ನು ಡೆಲ್ಲಿ ದಬಾಂಗ್ ತಂಡವು ವಿಜಯ್, ನವೀನ್‍ರಂತಹ ಸ್ಟಾರ್ ರೈಡರ್‍ಗಳು, ಅನುಭವಿ ಡಿಫರೆಂಡರ್‍ಗಳಾದ ಮಂಜಿತ್ ಚಿಲ್ಲರ್, ಜೋಗೆಂದರ್ ನರ್ವಾಲ್, ಸಂದೀಪ್ ನಾರ್ವಲ್ ಅವರು ಬುಲ್ಸ್‍ನ ರೇಡರ್‍ಗಳ ವೇಗಕ್ಕೆ ಬ್ರೇಕ್ ಹಾಕಲು ಕಾಯುತ್ತಿದ್ದಾರೆ, ಒಂದು ವೇಳೆ ಈ ತ್ರಿಮೂರ್ತಿ ಡಿಫರೆಂಡರ್‍ಗಳು ಹೈ ಫೆಯರ್ ಪವನ್, ಭರತ್ , ರಂಜಿತ್‍ರನ್ನು ಕಟ್ಟು ಹಾಕುವಲ್ಲಿ ಯಶಸ್ಸಾದರೆ ಗೆಲುವು ಸಾಸುವುದು ಖಚಿತ, ಆದರೆ ನಮ್ಮ ಡಿಫರೆಂಡರ್‍ಗಳು ಕೂಡ ನವೀನ್ ಹಾಗೂ ವಿಜಯ್‍ರ ರೇಡಿಂಗ್ ಅನ್ನು ಕಟ್ಟಲು ಸಜ್ಜಾಗಿದ್ದಾರೆ. ಮತ್ತೊಂದು ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಹಾಗೂ ಯುಪಿ ಯೋಧಾ ನಡುವೆ ಫೈನಲ್ ಸ್ಥಾನಕ್ಕಾಗಿ ಪೈಪೋಟಿ ನಡೆಯಲಿದೆ.

Articles You Might Like

Share This Article