ಭಾರತೀಯರ ಮೇಲೆ ಖಲಿಸ್ತಾನಿ ಉಗ್ರರ ದಾಳಿಗೆ ಖಂಡನೆ

Social Share

ನವದೆಹಲಿ,ಜ.31- ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಖಲಿಸ್ತಾನಿ ಉಗ್ರರು ನಡೆಸಿರುವ ದಾಳಿ ಖಂಡನಿಯ ಎಂದು ಭಾರತದಲ್ಲಿನ ಆಸ್ಟ್ರೇಲಿಯಾ ಹೈ ಕಮಿಷನರ್ ಬ್ಯಾರಿ ಓ ಫಾರೆಲ್ ಅಭಿಪ್ರಾಯಪಟ್ಟಿದ್ದಾರೆ.

ಮೆಲ್ಬೋರ್ನ್‍ನ ಫೆಡ್ ಸ್ಕ್ವೇರ್‍ನಲ್ಲಿ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಭಾರತೀಯರ ಮೇಲೆ ಖಲಿಸ್ತಾನಿ ಪರ ಗುಂಪು ನಡೆಸಿದ ದಾಳಿಯಿಂದ ತಾನು ದುಃಖಿತನಾಗಿದ್ದೇನೆ ಎಂದು ಅವರು ಟ್ವಿಟ್ ಮಾಡಿದ್ದಾರೆ.

ಪಾಕ್ ಮಸೀದಿ ಸ್ಪೋಟದಲ್ಲಿ ಸತ್ತವರ ಸಂಖ್ಯೆ 80ಕ್ಕೆ ಏರಿಕೆ

ಆಸ್ಟ್ರೇಲಿಯಾ ಮತ್ತು ಭಾರತವು ಆಯಾ ರಾಷ್ಟ್ರೀಯ ದಿನಗಳಲ್ಲಿ ವೈವಿಧ್ಯತೆ ಮತ್ತು ಏಕತೆಯನ್ನು ಆಚರಿಸಿದ ನಂತರ ನಡೆದಿರುವ ಈ ಕೃತ್ಯದಿಂದ ನಾನು ದುಃಖಿತವಾಗಿದೆ. ಆಸ್ಟ್ರೇಲಿಯಾದಲ್ಲಿ ಶಾಂತಿಯುತ ಪ್ರತಿಭಟನೆಯಲ್ಲಿ ತೊಡಗಿಸಿಕೊಳ್ಳಲು ಜನರಿಗೆ ಹಕ್ಕಿದೆ, ಆದರೆ ನಾವು ಇತ್ತೀಚೆಗೆ ನೋಡಿದ ಹಿಂಸಾಚಾರ ಅಥವಾ ವಿಧ್ವಂಸಕತೆಗೆ ಯಾವುದೇ ಸ್ಥಳವಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.

pro-Khalistanis, attack, Indians, Australia,

Articles You Might Like

Share This Article