ಮದುವೆಯಾಗುವುದಾಗಿ ನಂಬಿಸಿ ನಟಿಗೆ ವಂಚಿಸಿದ ನಿರ್ಮಾಪಕನ ಬಂಧನ

Social Share

ಬೆಂಗಳೂರು, ಜ.29- ನಟಿಗೆ ವಂಚನೆ ಮಾಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಸಿದಂತೆ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು, ನಟ/ ನಿರ್ಮಾಪಕ ಹರ್ಷವರ್ಧನ್ ಅಲಿಯಾಸ್ ವಿಜಯ್ ಭಾರ್ಗವ್‍ನನ್ನು ಬಂಧಿಸಿದ್ದಾರೆ.
ಸಹ ನಟಿಯೊಬ್ಬರು ಇವರ ವಿರುದ್ದ ದೂರು ನೀಡಿದ್ದ ಹಿನ್ನಲೆಯಲ್ಲಿ ಇವರನ್ನು ಬಂಧಿಸಲಾಗಿದೆ. ಸುಮಾರು ಎರಡು ವರ್ಷಗಳಿಂದ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ, ದೈಹಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾಗಿ ಆ ನಟಿ ಆರೋಪಿಸಿ ದೂರು ನೀಡಿದ್ದರು.
ಮದುವೆಯಾಗುವುದಾಗಿ ಹೇಳಿದ್ದರು. ಆದರೆ ಮದುವೆ ಮಾಡಿಕೊಳ್ಳಲು ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಮಾಡಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.
ಆರೋಪಿ ಹರ್ಷವರ್ಧನ್ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ನಟಿಗೆ ಮೆಡಿಕಲ್ ಟೆಸ್ಟ್ ನಡೆಸಲಾಗುತ್ತಿದೆ. ಹಾಗು ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

Articles You Might Like

Share This Article