ಆನ್‌ಲೈನ್‌ನಲ್ಲಿ ಆಸ್ತಿ ವಿವರಗಳ ವ್ಯವಸ್ಥೆ, ನಕಲಿ ದಾಖಲೆಗೆ ಕಡಿವಾಣ

Social Share

ಬೆಳಗಾವಿ, ಡಿ.28- ಸ್ಥಿರಾಸ್ತಿಗಳ ನೋಂದಣಿಯ ವೇಳೆ ಸ್ವತ್ತು ಖರೀದಿ ಮಾಡು ವವರು ಅಥವಾ ಮಾರುವವರು ದಾಖಲೆಗಳನ್ನು ಒದಗಿಸುವ ಪದ್ಧತಿಯನ್ನು ಬದಲಾವಣೆ ಮಾಡಿ, ಸರ್ಕಾರದ ವೆಬ್‍ಸೈಟ್‍ನಲ್ಲೇ ಅಗತ್ಯ ದಾಖಲೆಗಳನ್ನು ಲಭ್ಯ ಇರುವಂತಹ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ

ವಿಧಾನ ಪರಿಷತ್‍ನಲ್ಲಿ ಸದಸ್ಯ ಗೋವಿಂದರಾಜು ಪರವಾಗಿ ಕೆ.ಎ.ತಿಪ್ಪೇಸ್ವಾಮಿ ಕೇಳಿದ ಪ್ರಶ್ನೆ ಉತ್ತರಿಸಿದ ಸಚಿವರು, ಕಂದಾಯ ಇಲಾಖೆಯಲ್ಲಿ ಭ್ರಷ್ಟಚಾರಕ್ಕೆ ಕಡಿವಾಣ ಹಾಕಲು ನಿಯಮಾವಳಿಗಳನ್ನು ಸರಳೀಕರಣ ಮಾಡಲಾಗುತ್ತಿದೆ. ಶೀಘ್ರವಾಗಿ ಸೇವೆ ಒದಗಿ ಸಲು ಆದ್ಯತೆ ನೀಡಲಾಗಿದೆ ಎಂದರು. ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ದಾಖಲೆ ಕೇಳಬಾರದು. ನಕಲಿ ದಾಖಲೆಗಳನ್ನು ಒದಗಿಸಿ ಸಾಕಷ್ಟು ಅವ್ಯವಹಾರಗಳಾಗಿವೆ.

ಹಲವು ವರ್ಷಗಳಿಂದಲೂ ಇದನ್ನು ತಪ್ಪಿಸಲು ಪ್ರತಿಯೊಬ್ಬರು ಯತ್ನಿಸಿದ್ದಾರೆ. ಆದರೆ ಸಂಪೂರ್ಣ ಸಾಧ್ಯವಾಗಿಲ್ಲ. ಅದಕ್ಕಾಗಿ ವ್ಯವಸ್ಥೆಯನ್ನೇ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಎಲ್ಲಾ ದಾಖಲೆಗಳನ್ನು ಸರ್ಕಾರವೇ ಕಂದಾಯ ಇಲಾಖೆಯಿಂದ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಲಾಗುವುದು. ಯಾವ ಆಸ್ತಿ ಯಾರ ಹೆಸರಿನಲ್ಲಿದೆ.

ಎಲ್ಲಿ ಕೆರೆ, ಕಾಲುವೆಗಳಿವೆ, ಅದರ ಹಿನ್ನೆಲೆ ಏನು ಎಂಬೆಲ್ಲಾ ಮಾಹಿತಿಗಳು ಕಂದಾಯ ಇಲಾಖೆಯ ವೆಬ್‍ಸೈಟ್‍ನಲ್ಲಿ ಅಳವಡಿಸಲಾಗುವುದು. ಅದನ್ನು ತಿದ್ದುಪಡಿ ಮಾಡಲು ಅವಕಾಶ ಇರುವುದಿಲ್ಲ. ಪ್ರಮುಖ ಕಿಯನ್ನು ಕಂದಾಯ ಇಲಾಖೆ ಕಾರ್ಯದರ್ಶಿ ಅವರಿಗೆ ನೀಡಲಾಗುವುದು. ಯಾವುದೇ ಮಾರ್ಪಾಡು ಮಾಡಬೇಕಾದರೂ ಕಾರ್ಯದರ್ಶಿ ಹಂತದಲ್ಲೇ ನಡೆಯಬೇಕಾಗುತ್ತದೆ ಎಂದರು.

ಕನ್ನಡ ಸಾಹಿತ್ಯ ಲೋಕದ ಅಪ್ಪಟ ಕವಿಕೋಗಿಲೆ ರಸಋಷಿ ಕುವೆಂಪು

ಉಪನೋಂದಣಿ ಕಚೇರಿಯಲ್ಲಿ ನೋಂದಣಿದಾರರಿಂದ ದಾಖಲೆ ಕೇಳದೆ ವೆಬ್‍ಸೈಟ್‍ನಲ್ಲಿರುವ ದಾಖಲೆಗಳನ್ನು ಪರಿಶೀಲಿಸಿ ನೋಂದಣಿ ಪ್ರಕ್ರಿಯೆಯನ್ನು ಮುಂದುವರೆಸಬಹುದು. ಆರಂಭದಲ್ಲಿ ಇದನ್ನು ಬಳ್ಳಾರಿ ಜಿಲ್ಲೆಯಲ್ಲಿ ಜಾರಿಗೊಳಿಸಲಾಗುತ್ತಿದೆ. ನಂತರ ಹಂತ ಹಂತವಾಗಿ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು.

ಅನಿಲ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವ ಆರ್.ಅಶೋಕ್, ಸರ್ಕಾರಿ ಜಮೀನನ್ನು ಉಳುಮೆ ಮಾಡುತ್ತಿರುವ ರೈತರಿಗೆ ಪಿ ನಂಬರ್ ನೀಡಲಾಗುತ್ತಿದೆ. ಸರ್ಕಾರಿ ಭೂಮಿ ಉಳುಮೆ ಮಾಡುವವರಿಗೆ ಕಳೆದ 50 ವರ್ಷದಿಂದಲೂ ದಾಖಲೆಗಳ ಕೊರತೆ ಇದೆ.

ಈ ರೈತರಿಗೆ ಸರ್ಕಾರಿ ಸೌಲಭ್ಯ ಸಿಗಲಿ ಎಂಬ ಕಾರಣಕ್ಕೆ ಇತ್ತೀಚೆಗೆ ಪಿ ನಂಬರ ನೀಡುವ ಪದ್ಧತಿ ಜಾರಿಯಾಗಿದೆ. ಇದನ್ನು ತೆಗೆದು ಖಾಯಂ ಸರ್ವೇ ನಂಬರ್ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ. ಕೋಲಾರಕ್ಕೆ ನಿಯಮ 6ರಿಂದ 10ಕ್ಕೆ ವಿನಾಯಿತಿ ನೀಡಲಾಗಿದ್ದು, ಪಿ ನಂಬರ್ ಸಮಸ್ಯೆ ಇತ್ಯಥ್ರ್ಯವಾಗಿದೆ ಎಂದರು.

ಕೋಲಾರ ಜಿಲ್ಲೆಯಲ್ಲಿ 2 ಸಾವಿರ ಎಕರೆಗೆ ವಿಶೇಷ ಅನುಮತಿ ನೀಡಲಾಗಿದೆ. 450 ಎಕರೆ ಮಾತ್ರ ಬಾಕಿ ಇದೆ. ಕೆಲವೆಡೆ ಹಕ್ಕುದಾರರು ಮತ್ತು ಉಳುಮೆದಾರರಿಗೆ ತಾಳೆಯಾಗುತ್ತಿಲ್ಲ. ಅರಣ್ಯ ಇಲಾಖೆಯ ಎನ್‍ಒಸಿ ಸಿಗುತ್ತಿಲ್ಲ.

ನುಭೋಗದಲ್ಲಿ ಇರುವುದು ಮತ್ತು ವಾಸ್ತವದಲ್ಲಿ ಇರುವ ಭೂಮಿ ವಿಸ್ತೀರ್ಣದ ನಡುವೆ ವ್ಯತ್ಯಾಸವಿದೆ. 100 ಎಕರೆ ಮಂಜೂರಾಗಿರುವ ಕಡೆ 90 ಎಕರೆ ಹಂಚಿಕೆಯಾಗಿದ್ದರೆ ಸಮಸ್ಯೆ ಇರುವುದಿಲ್ಲ. ಆದರೆ 120 ಎಕರೆಗೆ ಹಂಚಿಕೆಯಾಗಿದ್ದರೆ ತೊಂದರೆಗಳು ಎದುರಾಗುತ್ತವೆ ಎಂದರು.

ನಾನಾ ದೇಶಗಳಿಂದ ವಿದೇಶಿಗರ ದಾಂಗುಡಿ, ಬೆಂಗಳೂರಲ್ಲಿ ಹೆಚ್ಚಾಯ್ತು ಕೊರೊನಾ ಆತಂಕ

ಕಡಿಮೆ ವಿಸ್ತೀರ್ಣಕ್ಕೆ ಹಕ್ಕು ಪತ್ರ ನೀಡಿದ್ದರೆ ಎದುರಾಗುವ ಸಮಸ್ಯೆಗಳ ನಿವಾರಣೆಗೆ ಕೋಲಾರದಲ್ಲಿ ನೀಡಲಾಗಿರುವ ವಿಶೇಷ ಅನುಮತಿಯನ್ನು ರಾಜ್ಯಾದ್ಯಂತ ನೀಡಲು ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಭರವಸೆ ನೀಡಿದರು.

ಪೋಡಿ, ಸರ್ವೇಗೆ ಸಂಬಂಸಿದಂತೆ ರಾಜ್ಯದಲ್ಲಿ ಲಕ್ಷಾಂತರ ಅರ್ಜಿಗಳು ಬಾಕಿ ಇವೆ. ಮೂರು ಸಾವಿರ ಸರ್ವೇಯರ್ ಅನ್ನು ನೇಮಿಸಲಾಗಿದೆ. ಮುಂದಿನ ನಾಲ್ಕೈದು ವರ್ಷದ ಒಳಗೆ ಇವನ್ನು ಇತ್ಯಥ್ರ್ಯ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪರವಾನಗಿ ಪಡೆದ ಸರ್ವೇಯರ್‍ಗಳನ್ನು ಮೂರು ವರ್ಷಕ್ಕೆ ನೇಮಿಸಲಾಗುತ್ತಿದೆ. ಪ್ರತಿ ಸರ್ವೇಗೆ ನೀಡುತ್ತಿದ್ದ ಶುಲ್ಕವನ್ನು 800 ರೂಪಾಯಿನಿಂದ 1200 ರೂಪಾಯಿಗೆ ಹೆಚ್ಚಿಸಲಾಗಿದೆ. ಸರ್ವೇ ಪದ್ಧತಿಯನ್ನು ಆಧುನಿಕರಣಗೊಳಿಸಲಾಗುತ್ತಿದೆ. ಆನ್‍ಲೈನ್ ವ್ಯವಸ್ಥೆ ಜಾರಿಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಪರವಾನಗಿ ಪಡೆದ ಸರ್ವೇಯರ್‍ಗಳ ನೇಮಕಾತಿಯನ್ನು ಹೆಚ್ಚಿಸಲಾಗಿದೆ. ಸೂಕ್ಷ್ಮ ಪ್ರಕರಣಗಳಲ್ಲಿ ಸರ್ಕಾರಿ ಸರ್ವೇಯರ್‍ಗಳೇ ಸರ್ವೇ ಮಾಡುತ್ತಾರೆ ಎಂದರು.

ಸಹೋದರರು ಆಸ್ತಿ ಭಾಗ ಮಾಡಿಕೊಂಡಾಗ, ಅವರೇ ಸ್ಕೇಚ್ ಮಾಡಿಕೊಟ್ಟು ಒಂದು ತಿಂಗಳ ಒಳಗೆ ಸಲ್ಲಿಸಿದರೆ ತಕ್ಷಣವೇ ಅನುಮೋದನೆ ನೀಡಲಾಗುವುದು ಮತ್ತು ಅದನ್ನು ನೋಂದಣಾಕಾರಿಗಳ ಕಚೇರಿಗೆ ರವಾನಿಸಲಾಗುವುದು.

property, documents, online, Minister Ashok,

Articles You Might Like

Share This Article