ಆಸ್ತಿ ನೋಂದಣಿ ಏರಿಕೆ : ಪುಟಿದೆದ್ದ ರಿಯಲ್ ಎಸ್ಟೇಟ್

Social Share

ಬೆಂಗಳೂರು,ಡಿ.6- ಕೋವಿಡ್ ಲಾಕ್‍ಡೌನ್‍ದಿಂದ ಮಂಕಾಗಿದ್ದ ಆಸ್ತಿ ನೋಂದಣಿ ಇದೀಗ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದೆ. ಹಣ ದುಬ್ಬರ, ದುಬಾರಿ ಬಡ್ಡಿದರ, ಅನಿಶ್ಚಿತತೆಯ ಹೊರತಾಗಿಯೂ ಪ್ರಸಕ್ತ 2022-23 ಸಾಲಿನಲ್ಲಿ ರಾಜ್ಯಾದ್ಯಂತ ಆಸ್ತಿ ಪತ್ರಗಳ ನೋಂದಣಿ ಪ್ರಮಾಣ ಗಣನೀಯ ಏರುಗತಿಯಲ್ಲಿದೆ.

ಕೋವಿಡ್ ಎಫೆಕ್ಟ್: ಕೋವಿಡ್ ದಿಂದಾಗಿ ಎರಡು ವರ್ಷ ಭೂ ವಹಿವಾಟು ಪಾತಾಳಕ್ಕೆ ಇಳಿದಿತ್ತು. ಭೂಮಿ ಖರೀದಿ-ಮಾರಾಟ ವಹಿವಾಟು ಸಂಪೂರ್ಣ ನೆಲಕಚ್ಚಿತ್ತು. ಇದರಿಂದ ರಾಜ್ಯಾದ್ಯಂತ ಆಸ್ತಿ ಪತ್ರಗಳ ನೋಂದಣಿ ಪ್ರಕ್ರಿಯೆಯಲ್ಲಿ ಬಹುತೇಕ ಕುಸಿತ ಕಂಡಿತ್ತು.

ಉಪ ನೋಂದಣಿ ಕಚೇರಿ: 2020-21ರಲ್ಲಿ ಲಾಕ್ ಡೌನ್ ಇರುವ ಕಾರಣ 24 ಮಾರ್ಚ್ 2020ರಿಂದ 24 ಏಪ್ರಿಲ್ 2020 ವರೆಗೆ ಉಪನೋಂದಣಿ ಕಚೇರಿಗಳು ಮುಚ್ಚಿದ್ದವು. ಇನ್ನೂ 2021-22ರಲ್ಲಿಎರಡನೇ ಅಲೆ ವೇಳೆ ಸರ್ಕಾರ ಹೇರಿದ ಲಾಕ್‍ಡೌನ ಕಾರಣ ಮೇ 10 ರಿಂದ ಜೂ.7ರವರೆಗೆ ಉಪ ನೋಂದಣಿ ಕಚೇರಿಗಳು ಮುಚ್ಚಲ್ಪಟ್ಟಿದ್ದವು.

ಲಾಲೂಗೆ ಪುತ್ರಿಗೆ ಆದರ್ಶ ಪುತ್ರಿ ಎಂದು ಕೊಂಡಾಡಿದ ರಾಜಕೀಯ ವಿರೋಧಿಗಳು

ಇದೀಗ ಆಸ್ತಿ ನೋಂದಣಿ ಪ್ರಮಾಣದಲ್ಲಿ ಗಣನೀಯ ಏರಿಕೆ ಕಾಣುತ್ತಿದೆ. ಬಹುತೇಕ ಸಹಜ ಸ್ಥಿತಿಗೆ ತಲುಪುತ್ತಿದೆ. ಹಣದುಬ್ಬರ, ದುಬಾರಿ ಬಡ್ಡಿದರ, ವೆಚ್ಚ ಹೆಚ್ಚಳದ ಹೊರತಾಗಿಯೂ ರಾಜ್ಯಾದ್ಯಂತ ಆಸ್ತಿ ಪತ್ರ ನೋಂದಣಿಯಲ್ಲಿ ಜಿಗಿತ ಕಂಡಿದೆ.

2022-23 ಸಾಲಿನಲ್ಲಿ ನವೆಂಬರ್ ವರೆಗೆ ರಾಜ್ಯಾದ್ಯಂತ 16,32,727 ಆಸ್ತಿ ಪತ್ರಗಳು ನೋಂದಣಿಯಾಗಿವೆ. ಅದೇ ಕಳೆದ ವರ್ಷ ಇದೇ ಅವಧಿಗೆ 12,50,835 ಆಸ್ತಿ ಪತ್ರಗಳು ನೋಂದಣಿಯಾಗಿತ್ತು ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.

ಆಸ್ತಿ ನೋಂದಣಿ ದುಪ್ಪಟ್ಟು : ಹಿಂದಿನ ಅವಧಿಗೆ ಹೋಲಿಸಿದರೆ ಈ ಬಾರಿ ನವೆಂರ್ಬ ವರೆಗೆ 3,81,892 ಕ್ಕಿಂತ ಹೆಚ್ಚು ಆಸ್ತಿ ಪತ್ರಗಳು ನೋಂದಣಿ ಆಗಿವೆ. ಮುಂದ್ರಾಂಕ ಹಾಗೂ ನೋಂದಣಿ ಶುಲ್ಕ ದ ಮೂಲಕ ನವೆಂಬರ್‍ವರೆಗೆ ಸುಮಾರು 10,850 ಕೋಟಿ ರೂ. ಸಂಗ್ರಹವಾಗಿದೆ.

ವಿದ್ಯಾರ್ಥಿನಿಯ ಕತ್ತು ಕೊಯ್ದು ಕೊಂದ ಬಗ್ನ ಪ್ರೇಮಿ

ಗುರಿ ಮೀರಿ ಆದಾಯ ಸಂಗ್ರಹಿಸಲಾಗಿದೆ.ರಿಯಾಯಿತಿ: ಮಾರ್ಗಸೂಚಿ ದರದ ಮೇಲೆ 10% ರಿಯಾಯಿತಿ ಆಸ್ತಿ ನೋಂದಣಿ ಪ್ರಮಾಣ ಹೆಚ್ಚಾಗಲು ಕಾರಣವಾಗಿದೆ. ಇತ್ತ ರಿಯಲ್ ಎಸ್ಟೇಟ್ ಚಟುವಟಿಕೆ ಮತ್ತೆ ಪುಟಿದೇಳುತ್ತಿರುವುದು ಈ ಅಂಕಿ ಅಂಶದಿಂದ ಗೊತ್ತಾಗುತ್ತಿದೆ.

ಸರ್ಕಾರ ಜುಲೈ ವರೆಗೆ ಮಾರ್ಗಸೂಚಿ ದರದ ಮೇಲೆ 10% ರಿಯಾಯಿತಿ ನೀಡುತ್ತ ಬಂತು. ಜತೆಗೆ 45 ಲಕ್ಷ ರೂ ವರೆಗಿನ ಫ್ಲಾಟ್ ಗಳಿಗೆ ಮುದ್ರಾಂಕ ಶುಲ್ಕವನ್ನು 5% ದಿಂದ 3%ಗೆ ಇಳಿಕೆ ಮಾಡಿತ್ತು.

ಜಿ-20 ಶೃಂಗ : ಪ್ರಧಾನಿ ಮೋದಿಗೆ ಸಲಹೆ ಕೊಟ್ಟ ದೇವೇಗೌಡರು

ಅಂಕಿ ಅಂಶ ವಿವರ:
ಏಪ್ರಿಲ್ 2022- 1,81,507
ಏಪ್ರಿಲ್ 2021- 1,51,701 ಮೇ 2022- 1,93,711
ಮೇ 2021- 16,469 ಜೂನ್ 2022- 2,25,457
ಜೂನ್ 2021- 1,08,215 ಜುಲೈ 2022- 2,03,459
ಜುಲೈ 2021- 2,08,765 ಆಗಸ್ಟ್ 2022- 2,05,253
ಆಗಸ್ಟ್ 2021- 2,10,310 ಸೆಪ್ಟೆಂಬರ್ 2022- 2,16,165
ಸೆಪ್ಟೆಂಬರ್ 2021- 2,10,727 ಅಕ್ಟೋಬರ್ 2022- 1,83,031
ಅಕ್ಟೋಬರ್ 2021- 1,77,348 ನವೆಂಬರ್ 2022- 2,24,144
ನವೆಂಬರ್ 2021- 1,67,300

#Property, #Registration, #Increase, #Realestate,

Articles You Might Like

Share This Article