ಕೆಲಸ ಕೊಡಿಸುವುದಾಗಿ ನಂಬಿಸಿ ಪ್ರೇಯಸಿಯನ್ನೇ ವೇಶ್ಯಾವಾಟಿಕೆಗೆ ದೂಡಿದ್ದ ಪ್ರಿಯಕರ

Social Share

ಬೆಂಗಳೂರು.ಆ.20- ಕೆಲಸ ಕೊಡಿಸೋದಾಗಿ ಯುವತಿಯನ್ನು ವೇಶ್ಯಾವಾಟಿಕೆಗೆ ನೂಕಿದ್ದ ಪ್ರಕರಣ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಸಂತ್ರಸ್ತ ಯುವತಿಯನ್ನು ಸಾಂತ್ವಾನ ಕೇಂದ್ರದಲ್ಲಿ ಇರಿಸಲಾಗಿದ್ದು ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂದಿಸಿದ್ದಾರೆ.

ಯುವತಿ ಮಂಡ್ಯ ಮೂಲದವಳಾಗಿದ್ದು, ಕಳೆದ 4ವರ್ಷಗಳ ಹಿಂದೆ ಆಕೆಯ ಪ್ರಿಯಕರನೇ ಬೆಂಗಳೂರಿಗೆ ಕರೆತಂದಿದ್ದನು.
ಕೆಲಸ ಕೊಡಿಸೋದಾಗಿ ಹೇಳಿ ಮಂಡ್ಯದಿಂದ ಬೆಂಗಳೂರಿಗೆ ಕರೆ ತಂದಿದ್ದನು. ನಂತರ ಆತನೇ ಪ್ರೇಯಸಿಯನ್ನು ವೇಶ್ಯಾವಾಟಿಕೆಗೆ ನೂಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವೇಳೆ ಯುವತಿ ಮೇಲೆ ಗ್ಯಾಂಗ್ ರೇಪ್ ಕೂಡ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ ಮಂಜುಳಾ ಎಂಬಾಕೆ ಯುವತಿಯನ್ನು ವೇಶ್ಯಾವಾಟಿಕೆಗೆ ನೂಕಿದ್ದಳು ಪೊಲೀಸರು ಶಿವಾನಂದ ಸರ್ಕಲ್ ಬಳಿ ಇರುವ ಸಾಯಿ ಲಾಡ್ಜ ನ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಈ ವೇಳೆ ತನ್ನ ಮೇಲೆ ಏಕಕಾಲದಲ್ಲಿ ಐದಾರು ಜನ ಸಾಮೂಹಿಕ ಅತ್ಯಾಚಾರ ನಡೆಸಿರುವ ವಿಚಾರವನ್ನು ಪೊಲೀಸರ ಮುಂದೆ ಸಂತ್ರಸ್ತ ಯುವತಿ ಹೇಳಿದ್ದಾಳೆ. ಈ ಸಂಬಂಧ ಹೈಗ್ರೌಂಡ್ಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೇಶ್ಯಾವಾಟಿಕೆ ದಂಧೆಗಾಗಿಯೇ ಆರೋಪಿಗಳು ಈ ಹೋಟೆಲ್ ನಡೆಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ವೇಶ್ಯಾವಾಟಿಕೆಗೆ ಬೆಂಬಲ ನೀಡಿದ್ದ ಲಾಡ್ಜ ಮಾಲೀಕ ಸಂತೋಷ್ ಎಂಬಾತನನ್ನು ಸಹ ಬಂದಿಸಲಾಗಿದೆ. ಸದ್ಯ ಪೊಲೀಸರು ಈ ಸಂಬಂಧ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Articles You Might Like

Share This Article