ನಿವೇಶನ ಹಂಚಿಕೆಗೆ ಒತ್ತಾಯಿಸಿ ಪ್ರತಿಭಟನೆ

ಕೆ.ಆರ್.ಪುರ, ಮೇ 29- ಅರ್ಹ ಫಲಾನುಭವಿಗಳಿಗೆ ಕೂಡಲೇ ನಿವಾಶನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ದಲಿತ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ರಿಪಬ್ಲಿಕನ್ ಸೇನೆ ಬೆಂಗಳೂರು ಪೂರ್ವ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿತು. ನಂತರ ಮಾತನಾಡಿದ ಕರ್ನಾಟಕ ದಲಿತ ರಕ್ಷಣಾ ವೇದಿಕೆ ರಾಜದ್ದಾಕ್ಷ ಸೋರುಣಸೆ ಎನ್. ವೆಂಕಟೇಶ, ಬೆಂಗಳೂರು ಪೂರ್ವ ತಾಲ್ಲೂಕಿನ ಚನ್ನ ಸಂದ್ರ ಗ್ರಾಮದ ಸರ್ವೆ ನಂ. 115 ರಲ್ಲಿ ಗ್ರಾಮ ಪಂಚಾಯತಿ ಸಾಮಾನ್ಯ ಸಭೆ ತೀರ್ಮಾನ ದಂತೆ ಅರ್ಹ ಫಲಾನುಭವಿಗಳಿಗೆ ಕೂಡಲೆ ನಿವೇಶನಗಳನ್ನು ಹಂಚಿಕೆ ಮಾಡುವಂತೆ ಒತ್ತಾಯಿಸಿದರು.

ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಣ ಮಾಡಲು ಲಾಕ್ ಡೌನ್ ಏರಿ ಬಡಜನರ ಬದುಕಿನಲ್ಲಿ ಆಟವಾಡುತ್ತಿದ್ದಾರೆ ಎಂದು ದೂರಿದರು.  ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಮೀಸಲಿಟ್ಟಿರುವ 2 ಎಕರೆ ಜಮೀನಿನಲ್ಲಿ 100 ಮಂದಿ ಫಲಾನುಭವಿಗಳಿಗೆ ನಿವೇಶನ ನೀಡುವುದಾಗಿ ರಾಜೀವ್ ಗಾಂ ಗ್ರಾಮೀಣ ವಸತಿ ನಿಗಮದ ಆದೇಶದಂತೆ ಬೆಂಗಳೂರು ಪೂರ್ವ ತಾಲ್ಲೂಕು ಪಂಚಾಯಿತಿಯ ಕಾರ್ಯ ನಿರ್ವಾಹಕ ಅಕಾರಿಗಳ ಹೆಸರಿಗೆ 8 ಸಾವಿರ ಡಿ.ಡಿ.ಕಟ್ಟಿಸಿಕೊಂಡಿದ್ದಾರೆ, ಆದರೆ ಇದುವರೆಗೂ ನಿವೇಶನ ನೀಡದೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು.

ಕೊರೊನಾ ವೈರಸ್ ನಿಂದ ಸಂಕಷ್ಟಕ್ಕೆ ಸಿಲುಕಿರುವುದು ಬಡ ಜನರೆ ಹೊರತು ಶ್ರೀಮಂತರಲ್ಲ ಎಂದರು. ಕರ್ನಾಟಕ ರಿಪಬ್ಲಿಕನ್ ಸೇನೆ ರಾಜದ್ಯಕ್ಷ ಜಿಗಣಿ ಶಂರ್ಕ ಮಾತನಾಡಿ, ಸರ್ಕಾರಿ ಕಚೇರಿ ಅಧಿಕಾರಿಗಳು ಬಡವರ ಪರ ಕಾರ್ಯ ನಿರ್ವಹಿಸದೇ ಭೂ ಮಾಪಿಯಾ ಮಾಡುವ ಬಿಲ್ಡರ್‍ಗಳ ಪರ ಇದ್ದು ಬಡವರಿಗೆ ವಂಚಿಸುತ್ತಿದ್ದಾರೆ ಎಂದು ದೂರಿದರು.

ಹಣದಾಸೆಗೆ ಬಡವರ ಮನವಿಗೆ ಈ ಸರ್ಕಾರದಿಂದ ಯಾವುದೆ ಉತ್ತರವಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಯಲಹಂಕ ಮೇಲು ಸೇತುವೆಗೆ ದಿ. ಬಸವಲಿಂಗಪ್ಪರವರ ಹೇಸರಿಡುವಂತೆ ಒತ್ತಾಯಿಸಿದರು. ರಾಜ್ಯ ಸರ್ಕಾರವು ದಲಿತರಿಗೆ ನಿವೇಶನ ಹಂಚಿಕೆ ಮಾಡದೆ ವಂಚನೆ ಮಾಡುತ್ತಿದ್ದು ಕೂಡಲೆ ನಿವೇಶನ ಹಂಚಿಕೆ ಮಾಡುವಂತೆ ಒತ್ತಾಯಿಸಿ ಬೆಂಗಳೂರು ಪೂರ್ವ ತಾಲ್ಲೂಕು ತಹಶಿಲ್ದಾರವರಿಗೆ ಮರು ಮನವಿಯನ್ನು ಸಲ್ಲಿಸಲಾಯಿತು.

ಜೆ.ಕೃಷ್ಣಪ್ಪ, ಕರ್ನಾಟಕ ದಲಿತ ರಕ್ಷಣಾ ವೇದಿಕೆ ರಾಜ್ಯ ಕಾರ್ಯದರ್ಶಿ ಆರ್. ಕಿರಣ್ ಕುರ್ಮಾ, ವಿಜೇಯ ಕುರ್ಮಾ, ಬೆಂ.ನಗರ ಜಿಲ್ಲಾ ಅದ್ದಾಕ್ಷ ವಿ.ಲಕ್ಷ್ಮೀನಾರಾಯಣ, ಮಹಿಳಾ ಅದ್ಯಕ್ಷೆ ಕೆ. ಮೇಘಲಾ, ಮಾಜಿ.ಗ್ರಾ.ಪಂ. ಸದಸ್ಯ ಟಿ.ತಿಮ್ಮಯ್ಯ, ಪದಾಕಾರಿಗಳಾದ ಸುಬ್ರಮಣಿ, ರೂಪಾ, ಸತ್ಯವತಿ, ದೇವರಾಜು ಮುಂತಾದವರು ಪಾಲ್ಗೊಂಡಿದ್ದರು.