ಡಾಕ, ಆ. 8- ಪೆಟ್ರೊಲ್, ಡಿಸೇಲ್, ಗ್ಯಾಸ್ ಅನಿಲ ಬೆಲೆಯನ್ನು ಶೇ. 50ರಷ್ಟು ಹೆಚ್ಚಳ ಮಾಡಿರುವುದನ್ನು ಖಂಡಿಸಿ ಬಾಂಗ್ಲಾದೇಶದಾದ್ಯಂತ ರೊಚ್ಚಿಗೆದ್ದು ಜನರು ಪ್ರತಿಭಟನೆಗಿಳಿದಿದ್ದಾರೆ.
ಪೆಟ್ರೊಲ್ ಪ್ರತಿ ಲೀಟರ್‍ಗೆ 100 ಟಾಕ ಇದ್ದ ಬೆಲೆ ಏಕಾಏಕಿ 130(108) ರ ಸಮೀಪ ಬಂದಿರುವುದು ಜನರನ್ನು ಆತಂಕಕ್ಕೆ ದೂಡಿದ್ದು, ಪ್ರತಿಭಟನಾಕಾರರು ಪೆಟ್ರೊಲ್ ಬಂಕ್‍ಗಳ ಮುಂದೆ ಜಮಾಯಿಸಿ ಹಿಂಸಾ ಕೃತ್ಯದಲ್ಲಿ ತೊಡಗಿದ್ದಾರೆ. ಹಲವೆಡೆ ಲಾಠಿ ಚಾರ್ಜ್, ಗೋಲಿಬಾರ್‍ಗಳು ನಡೆದಿದ್ದು, ಹಲವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರತಿಭಟನಾಕಾರರು ಪ್ರಧಾನಿ ಶೇಕ್ ಹಸೀನ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದು, ಕೂಡಲೇ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಇದರ ನಡುವೆ ಬಾಂಗ್ಲಾ ದೇಶದ ಪೆಟ್ರೊಲಿಯಂ ಮತ್ತು ಇಂಧನ ಸಚಿವರು ದೇಶದ ಆರ್ಥಿಕತೆ ಕಾಪಾಡುವ ದೃಷ್ಟಿಯಿಂದ ಇದು ಅನಿವಾರ್ಯ.
ಅಂತರ್ ರಾಷ್ಟ್ರೀಯ ಬ್ಯಾಂಕ್‍ಗಳಿಂದ ಪಡೆದಿರುವ ಸಾಲವನ್ನು ಮರು ಪಾವತಿ ಮಾಡಲು ಮತ್ತು ತೈಲ ಕಂಪೆನಿಗಳು ಕಳೆದ 6 ತಿಂಗಳಿಂದ ಅನುಭವಿಸಿರುವ ನಷ್ಟವನ್ನು ಸರಿದೂಗಿಸಲು ಇದು ಒಂದೇ ಮಾರ್ಗ ಜನರು ಸಹನೆಯಿಂದಿರಬೇಕು ಎಂದು ಮನವಿ ಮಾಡಿದ್ದಾರೆ.
ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಇದೇ ರೀತಿ ಪ್ರತಿಭಟನೆಗಳು ನಡೆದ ನಂತರ ಈಗ ಬಾಂಗ್ಲಾದೇಶದಲ್ಲಿ ತೈಲ ಬೆಲೆ ಏರಿಕೆ ಜನರನ್ನು ಕೆರಳಿಸಿದ್ದು, ಪ್ರತಿಭಟನೆಗೆ ಕಿಚ್ಚು ಹಚ್ಚಿವೆ.