ರಸ್ತೆಗುಂಡಿ ಮುಚ್ಚುವಂತೆ ಜೆಸಿಬಿ ತಡೆದು ಸ್ಥಳೀಯರ ಪ್ರತಿಭಟನೆ

Social Share

ಬೆಂಗಳೂರು, ನ.15- ರಾಜಾಜಿನಗರದ ಎರಡನೆ ಹಂತದ ಡಿ ಬ್ಲಾಕ್‍ನ ಗುಂಡಿಬಿದ್ದ ರಸ್ತೆಯಿಂದ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿಗೆ ಆಗ್ರಹಿಸಿ ಸ್ಥಳೀಯರು ರಸ್ತೆ ಮಧ್ಯೆ ಜೆಸಿಬಿ ನಿಲ್ಲಿಸಿ ಪ್ರತಿಭಟನೆ ನಡೆಸಿದರು.

ಕೆಲಸದ ನಿಮಿತ್ತ ತೆರಳುತ್ತಿದ್ದ ಮರಿಯಪ್ಪನಪಾಳ್ಯದ ನಿವಾಸಿ ಕುಮಾರ್ ಎಂಬುವವರು ಮೃತಪಟ್ಟಿದ್ದಾರೆ. ಇದಕ್ಕೆ ಬಿಬಿಎಂಪಿ ಹಾಗೂ ಸರ್ಕಾರವೇ ನೇರ ಕಾರಣ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಸ್ಥಳೀಯರು ಗುತ್ತಿಗೆದಾರರು ಹಾಗೂ ಪಾಲಿಕೆ ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿದ್ದಾರೆ.

ಘಟನೆ ನಡೆದು 24 ಗಂಟೆಯಾದರೂ ಯಾವೊಬ್ಬ ಅಧಿಕಾರಿಗಳೂ ಸ್ಥಳಕ್ಕೆ ಬಂದಿಲ್ಲ. ರಸ್ತೆಗಳೆಲ್ಲ ಗುಂಡಿಮಯವಾಗಿದ್ದು, ಇಲ್ಲಿ ವಾಹನ ಚಲಾಯಿಸುವುದೇ ಒಂದು ಸವಾಲಾಗಿದೆ. ಹಲವು ಬಾರಿ ಕೆಲವರು ಗುಂಡಿಗಳಿಗೆ ಬಿದ್ದು ಅಪಘಾತಗಳಾಗಿವೆ.

ಶ್ರದ್ದಾ ವಿಕೃತ ಹತ್ಯೆ ಹಿಂದೆ ಲವ್ ಜಿಹಾದ್ ಶಂಕೆ, ಗಲ್ಲು ಶಿಕ್ಷೆಗೆ ಒತ್ತಾಯ

ಆದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಇವರ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಬಲಿ ಬೇಕೋ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ದುರಸ್ತಿಗಾಗಿ ಕೋಟಿ ಕೋಟಿ ಹಣ ನೀಡಲಾಗುತ್ತಿದೆ ಎಂದು ಹೇಳುವ ಸರ್ಕಾರ ಹಣ ಮಾತ್ರ ಲೆಕ್ಕಕ್ಕೆ ಖರ್ಚಾಗಿದೆ, ಗುಂಡಿಗಳು ಮಾತ್ರ ಹಾಗೇ ಇವೆ. ಮುಖ್ಯಮಂತ್ರಿಗಳೆ ಒಮ್ಮೆ ನಿಮ್ಮ ಸಚಿವರ ಜತೆ ಸ್ಥಳಕ್ಕೆ ಬನ್ನಿ. ಜನರ ಪರಿಸ್ಥಿತಿ ಅರ್ಥವಾಗುತ್ತದೆ ಎಂದರು.

ಕಾಟಾಚಾರಕ್ಕೆ ನಗರದಲ್ಲಿ ಗುಂಡಿಗಳನ್ನು ಮುಚ್ಚಲಾಗುತ್ತಿದೆ. ಒಂದು ಕಡೆ ಮುಚ್ಚಿದರೆ ಮತ್ತೊಂದು ಕಡೆ ಹಾಗೇ ಇರುತ್ತವೆ. ಗುಂಡಿಗಳು ಇವರ ಕಣ್ಣಿಗೆ ಕಾಣೋದೆ ಇಲ್ಲ. ಲೆಕ್ಕಕ್ಕೆ ಮಾತ್ರ ಗುಂಡಿ ಮುಚ್ಚಲಾಗುತ್ತಿದ್ದು, ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಮಾತ್ರ ಕಡಿಮೆ ಯಾಗಿಲ್ಲ.

ಸರ್ಕಾರ – ಕೆಎಂಎಫ್ ನಡುವೆ ಸಮನ್ವಯ ಕೊರತೆ

ಪದೇ ಪದೇ ನಗರದ ರಸ್ತೆ ಗುಂಡಿಗಳಿಂದ ಅಪಘಾತ, ಅನಾಹುತಗಳು ಸಂಭವಿಸುತ್ತಲೇ ಇವೆ. ಇದರ ಬಗ್ಗೆ ಸಂಬಂಧಪಟ್ಟವರು ಮಾತ್ರ ತಲೆ ಕೆಡಿಸಿಕೊಂಡಿಲ್ಲ. ಶೀಘ್ರ ರಸ್ತೆಗುಂಡಿಗಳನ್ನು ಮುಚ್ಚಿ ಜನರಿಗಾಗುತ್ತಿರುವ ತೊಂದರೆ ತಪ್ಪಿಸುವಂತೆ ಸ್ಥಳೀಯ ನಾಗರೀಕರು ಆಗ್ರಹಿಸಿದ್ದಾರೆ.

Articles You Might Like

Share This Article