ಚರ್ಚ್ ಬಾಗಿಲು ತೆರೆಸಲು ಆಗ್ರಹಿಸಿ ಯೇಸು ಭಕ್ತರ ಪ್ರತಿಭಟನೆ

Social Share

ಬೆಂಗಳೂರು,ಅ.31-ಕಳೆದ ಹಲವಾರು ತಿಂಗಳಿನಿಂದ ಮುಚ್ಚಲಾಗಿರುವ ಚರ್ಚ್ ಬಾಗಿಲು ತೆರೆಯಬೇಕು ಹಾಗೂ ಚರ್ಚ್ ಒಳಗೆ ಪ್ರಾರ್ಥನೆ ಸಲ್ಲಿಸಲು ನಮಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿ ಭಕ್ತರು ಮುಷ್ಕರ ನಡೆಸುತ್ತಿದ್ದಾರೆ.

ಫ್ರೇಜರ್ ಟೌನ್‍ನ ನೇತಾಜಿ ರಸ್ತೆಯಲ್ಲಿರುವ ಬೆಂಗಳೂರು ತೆಲುಗು ಚರ್ಚ್ ಗೆ ಬೀಗ ಜಡಿದಿರುವುದನ್ನು ಖಂಡಿಸಿ ಯೇಸುವಿನ ಆರಾಧಕರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

ನಾವು ಪ್ರತಿನಿತ್ಯ ಚರ್ಚ್ ಒಳಗೆ ಪ್ರಾರ್ಥನೆ ಸಲ್ಲಿಸುತ್ತಿದ್ದೇವು. ಕೆಲ ತಿಂಗಳುಗಳ ಹಿಂದೆ ತ್ಯಾಗರಾಜ್ ಎಂಬುವರು ಈ ಚರ್ಚ್‍ಗೆ ಫಾಸ್ಟರ್ ಆಗಿ ಬಂದ ನಂತರ ನಮಗೆ ಸಮಸ್ಯೆ ಎದುರಾಗಿದೆ. ಅವರು ಅಕಾರ ವಹಿಸಿಕೊಂಡ ನಂತರ ಚರ್ಚ್‍ನಲ್ಲಿ ಆಗುತ್ತಿರುವ ಬೆಳವಣಿಗೆಗಳು ಆಘಾತಕಾರಿಯಾಗಿದೆ ಎಂದು ಯೇಸು ಕ್ರಿಸ್ತನ ಆರಾಧಕರು ಆರೋಪಿಸಿದ್ದಾರೆ.

ಚರ್ಚ್ ಅನ್ನು ಏಕೆ ಮುಚ್ಚಲಾಗಿದೆ ಎಂದು ಯಾರಿಗೂ ಆರ್ಥವಾಗುತ್ತಿಲ್ಲ. ಆರಾಧನಾ ಕೇಂದ್ರವನ್ನು ಬಲವಂತವಾಗಿ ಮುಚ್ಚಲಾಗಿದೆ. ಧಾರ್ಮಿಕ ಮುಖಂಡರು ರಸ್ತೆಯಲ್ಲೇ ಕುಳಿತು ಪೂಜೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

23 ಸಾವಿರ ರೂ.ವಿದ್ಯುತ್ ಬಿಲ್ ನೋಡಿ ಬಡ ಕಾರ್ಮಿಕನಿಗೆ ಶಾಕ್ ..!

ಏಕಾಏಕಿ ಚರ್ಚ್‍ಗೆ ಬಾಗಿಲು ಹಾಕಲಾಗಿದೆ. ಪ್ರಾರ್ಥನೆ ಸಲ್ಲಿಸಲು ಚರ್ಚ್ ಪ್ರವೇಶಿಸಲು ಅನುಮತಿ ನಿರಾಕರಿಸಲಾಗುತ್ತಿದೆ. ಹೀಗಾಗಿ ಕೂಡಲೇ ಚರ್ಚ್ ಬಾಗಿಲು ತೆರೆಯಬೇಕು ಇಲ್ಲದಿದ್ದರೆ ಅರ್ನೀಷ್ಠಾವ ಮುಷ್ಕರ ನಡೆಸಬೇಕಾಗುತ್ತದೆ ಎಂದು ಭಕ್ತರು ಎಚ್ಚರಿಸಿದ್ದಾರೆ.

ಗುಜರಾತ್‍ನ ಮೊರ್ಬಿ ಸೇತುವೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 132ಕ್ಕೆ ಏರಿಕೆ

Articles You Might Like

Share This Article