ವಾಷಿಂಗಟನ್,ಡಿ.5- ಚೀನಾದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಕಠಿಣ ಕ್ರಮಗಳನ್ನು ವಿರೋಧಿಸಿ ಚೀನಾದ ಪ್ರಜೆಗಳು ಅಮೆರಿಕಾದ ಶ್ವೇತ ಭವನದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಚೀನಾವನ್ನು ಮುಕ್ತಗೊಳಿಸಿ ಎಂಬ ಘೋಷಣೆಯೊಂದಿಗೆ ಕೈನಲ್ಲಿ ಕ್ಯಾಂಡಲ್ ಹಿಡಿದ 200 ಹೆಚ್ಚು ಮಂದಿ ಎರಡು ಬ್ಲಾಕ್‍ಗಳಲ್ಲಿ ಪ್ರತಿಭಟನೆ ನಡೆಸಿದರು. ಸರ್ವಾಕಾರ ಬೇಡ, ನಿರ್ಬಂಧಗಳು ಬೇಡ ಎಂಬ ಫಲಕಗಳನ್ನು ಪ್ರತಿಭಟನಾಕಾರರು ಹಿಡಿದಿದ್ದರು. ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಅಧಿಕಾರ ಬಿಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರು ಖಾಲಿ ಹಾಳೆಗಳನ್ನು ಪ್ರದರ್ಶನ ಮಾಡುವ ಮೂಲಕ ಕಮ್ಯೂನಿಸ್ಟ್ ಆಡಳಿತದ ನಿರ್ಬಂಧಗಳನ್ನು ವಿರೋಧಿಸಿದರು. ನವೆಂಬರ್ 25ರಂದು ಚೀನಾದ ಉರುಮ್ಕಿಯಲ್ಲಿ ದಿಗ್ಭಂದನಕ್ಕೆ ಒಳಗಾಗಿದ್ದ ಕುಟುಂಬದ 10 ಮಂದಿ ಬೆಂಕಿ ಅನಾವುತದಲ್ಲಿ ಸಜೀವ ದಹನವಾದ ಬಳಿಕ ಪ್ರತಿಭಟನೆಗಳು ತೀವ್ರಗೊಂಡಿದೆ. ಚೀನಾದಾದ್ಯಂತ ಜನ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ವಿಶ್ವಕಪ್ ಪುಟ್ಬಾಲ್ ಕ್ವಾರ್ಟರ್ ಫೈನಲ್ ತಲುಪಿದ ಇಂಗ್ಲೆಂಡ್
ಕೋವಿಡ್ ಸೋಂಕು ನಿಯಂತ್ರಣಕ್ಕೆ ಚೀನಾ ಸರ್ಕಾರ ಕೈಗೊಂಡಿರುವ ಶೂನ್ಯ ಸಹಿಷ್ಣುತೆ ನೀತಿಯ ವಿರುದ್ಧ ಜನ ಬೀದಿಗಿಳಿದಿದ್ದಾರೆ. ಈಗ ಅಮೆರಿಕಾದಲ್ಲೂ ಪ್ರತಿಭಟನೆ ನಡೆಸಿ ಚೀನಾದ ಬೆಳವಣಿಗೆಗಳ ಬಗ್ಗೆ ವಿರೋಧ ವ್ಯಕ್ತ ಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಚೀನಾದ ಪ್ರಜೆಯೊಬ್ಬರು ಸೇಡಿನ ಕ್ರಮಕ್ಕೆ ತುತ್ತಾಗುವ ಭಯದಿಂದ ತಮ್ಮ ಪೂರ್ತಿ ಹೆಸರನ್ನು ಹೇಳಲು ನಿರಾಕರಿಸಿದರು, ತಮ್ಮನ್ನು ತಾವು ಲಿಯು ಎಂದಷ್ಟೆ ಪರಿಚಯಿಸಿಕೊಂಡ ಅವರು, ಸಾರ್ವಜನಿಕವಾದ ಸಮಸ್ಯೆಗಳ ಬಗ್ಗೆ ನನಗೆ ಹೆಚ್ಚು ಕಾಳಜಿ ವಹಿಸಲು ಸಾಧ್ಯವಾಗಲಿಲ್ಲ.
ಇಂಡೋನೇಷ್ಯಾದ ಮೌಂಟ್ ಸೆಮೆರು ಜ್ವಾಲಾಮುಖಿ ಸ್ಫೋಟದಿಂದ ಆಪಾರ ಹಾನಿ
ನನ್ನಿಂದ ಅದು ಸಾಧ್ಯವೂ ಆಗಲಿಲ್ಲ. ಚೀನಾದಲ್ಲಿ ಜಾರಿಗೊಳಿಸಲಾಗಿರುವ ನಿರ್ಬಂಧಗಳು ಸಂಪೂರ್ಣ ಅವೈಜ್ಞಾನಿಕವಾಗಿವೆ. ಸದ್ಯಕ್ಕೆ ನಾನೀಗ ವಾಕ್ ಸ್ವಾತಂತ್ರ್ಯಿವಿರುವ ದೇಶದಲ್ಲಿದ್ದೇನೆ. ನನ್ನ ಹಕ್ಕುಗಳ ರಕ್ಷಣೆಗಾಗಿ ಉತ್ತಮವಾದದನ್ನು ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಈ ಬಾರಿ ವಿಭಿನ್ನ ತೀರ್ಪು ನೀಡಿ : ಗುಜರಾತ್ ಜನತೆಗೆ ಕೇಜ್ರಿವಾಲ್ ಮನವಿ
ಚೀನಾ ಪ್ರಜೆಗಳ ಪ್ರತಿಭಟನೆಗೆ ಉರಿಗ್ಯಾರಿಗಳು ಮತ್ತು ಟಿಬೆಟಿಯನ್‍ರು ಭಾಗವಹಿಸಿ ಬೆಂಬಲ ವ್ಯಕ್ತ ಪಡಿಸಿದರು.
ಚೀನಾದಲ್ಲಿ ಪ್ರತಿಭಟನೆ ನಡೆಸುತ್ತಿರುವ ಯುವ ಜನರ ಧೈರ್ಯವನ್ನು ನಾನು ಪ್ರಶಂಸಿಸುತ್ತೇನೆ. ಆದರೆ ನಾವು ಅವರ ಜೊತೆ ನಿಲ್ಲಲು ಸಾಧ್ಯವಾಗುತ್ತಿಲ್ಲ ಎಂದು ಮತ್ತೊಬ್ಬ ಚೀನಾ ಪ್ರಜೆ ವಿಷಾದಿಸಿದ್ದಾರೆ.
Protesters, White House, demand, Free China, #FreeChina