ಪಿಎಸ್‍ಐ ಪರೀಕ್ಷೆ ಅಕ್ರಮ : ಪುತ್ರನ ಆಯ್ಕೆಗೆ ಡೀಲ್ ಮಾಡಿದ್ದ ಗ್ರಾಪಂ ಅಧ್ಯಕ್ಷ ಅರೆಸ್ಟ್

Spread the love

ಹಾಸನ,ಮೇ 9- 545 ಪಿಎಸ್‍ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿ ಸಿಐಡಿ ಅಧಿಕಾರಿಗಳು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ವಿಚಾರಣೆ ವೇಳೆ ರಾಜ್ಯದ ಕೆಲ ಜಿಲ್ಲೆಗಳಲ್ಲೂ ಈ ಅಕ್ರಮ ನಡೆದಿರುವ ಶಂಕೆ ಮೂಡಿದೆ. ಇನ್ನು ಹಗರಣದಲ್ಲಿ ಭಾಗಿಯಾಗಿರುವ ಆರೋಪದಡಿ ಗ್ರಾಮ ಪಂಚಾಯಿತಿ ಅಧ್ಯಕ್ಷನನ್ನು ಬಂಧಿಸಲಾಗಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೆಕ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವಮೂರ್ತಿ ಬಂಧನಕ್ಕೊಳಗಾಗಿದ್ದಾನೆ.

ಕೇಶವಮೂರ್ತಿಯನ್ನು ವಿಚಾರಣೆಗೆ ಕರೆಸಿ ಸಿಐಡಿ ಬಂಧಿಸಿದ್ದಾರೆ. ಪರಾರಿಯಾಗಿರುವ ಮತ್ತೊಬ್ಬ ಪ್ರಭಾವಿ ವ್ಯಕ್ತಿಗಾಗಿ ಸಿಐಡಿ ಶೋಧಕಾರ್ಯ ಮುಂದುವರಿಸಿದೆ. ನೇಮಕಾತಿ ಹಗರಣದ ನಂಟು ಹಾಸನ ಜಿಲ್ಲೆಗೂ ಹಬ್ಬಿದೆ. ಸಿಐಡಿ ಜಿಲ್ಲೆಯಲ್ಲಿ ಹಲವರನ್ನು ವಶಕ್ಕೆ ಪಡೆದಿದೆ. ಪಿಎಸ್‍ಐ ತಾತ್ಕಾಲಿಕ ಪಟ್ಟಿಯಲ್ಲಿ ಹೆಸರಿದ್ದ ವೆಂಕಟೇಶ್‍ನನ್ನು ವಶಕ್ಕೆ ಪಡೆಯಲಾಗಿದೆ.

ವೆಂಕಟೇಶ್ ಬೆಕ್ಕ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಚಂದ್ರಶೇಖರ್ ಅವರ ಪುತ್ರ. ಚಂದ್ರಶೇಖರ್ ಬೆಕ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಕೇಶವಮೂರ್ತಿಯವರ ಆಪ್ತರಾಗಿದ್ದಾರೆ. ಕೇಶವಮೂರ್ತಿ ಮೂಲಕ ಪಿಎಸ್‍ಐ ನೇಮಕಾತಿಯಲ್ಲಿ ಡೀಲ್ ಮಾಡಿ ಪುತ್ರನ ಆಯ್ಕೆ ಮಾಡಿಸಿರುವ ಆರೋಪದಡಿ ವೆಂಕಟೇಶ್‍ನನ್ನು ವಶಕ್ಕೆ ಪಡೆದಿದ್ದಾರೆ.