ರಸ್ತೆ ಗುಂಡಿ ಮುಚ್ಚಿದ ದಂಪತಿ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ

Social Share

ಬೆಂಗಳೂರು, ನ.3- ಉದ್ಯಾನನಗರಿಯ ರಸ್ತೆಗಳ ಗುಂಡಿಯಿಂದ ಪ್ರತಿನಿತ್ಯ ಒಂದಲ್ಲ ಒಂದು ಅನಾಹುತಗಳು ಸಂಭವಿಸುತ್ತಲೇ ಇರುತ್ತವೆ.

ಆದರೆ ಗುಂಡಿಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಮಲ್ಲೇಶ್ವರಂನ ಬಸ್ ನಿಲ್ದಾಣದ ಬಳಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ದಂಪತಿ ಗುಂಡಿ ತಪ್ಪಿಸಲು ಹೋಗಿ ಸ್ವಲ್ಪದರಲ್ಲೇ ಬೀಳುವುದರಿಂದ ಪಾರಾಗಿದ್ದು , ತಾವೇ ಕಲ್ಲು-ಮಣ್ಣು ತಂದು ಗುಂಡಿ ಮುಚ್ಚಿದ್ದಾರೆ.

ದಂಪತಿಯ ಈ ಕಾರ್ಯಕ್ಕೆಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ರಸ್ತೆ ಗುಂಡಿಯ ಅವ್ಯವಸ್ಥೆಯನ್ನು ಸರಿ ಮಾಡಿ ಎಂದು ನಾಗಮಣಿ ದಂಪತಿ ಪರಿಪರಿಯಾಗಿ ಪಾಲಿಕೆಗೆ ಮನವಿ ಮಾಡಿದ್ದಾರೆ.

ಇದು ಘನಘೋರ : ಸಕಾಲದಲ್ಲಿ ಚಿಕಿತ್ಸೆ ಸಿಗದೇ ತಾಯಿ ಮತ್ತು ಅವಳಿ ನವಜಾತ ಶಿಶುಗಳ ಸಾವು

ನಗರದಲ್ಲಿ ಪ್ರತಿನಿತ್ಯ ಗುಂಡಿ ಮುಚ್ಚಲಾಗುತ್ತಿದೆ ಎಂದು ಪಾಲಿಕೆ ಹೇಳುತ್ತಾ ಇದೆ. ಆದರೆ ಎಲ್ಲಲ್ಲಿ ಮುಚ್ಚಿದ್ದಾರೋ ಗೊತ್ತಿಲ್ಲ. ಪ್ರಮುಖ ರಸ್ತೆಗಳಲ್ಲಿ ಹಾಳುದ್ದದ ಗುಂಡಿಗಳು ಬಿದ್ದಿದ್ದು , ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿಡಿದು ಕೊಂಡು ವಾಹನ ಚಲಾಯಿಸುವಂತಾಗಿದೆ.

ನಗರದ ರಸ್ತೆಗಳಲ್ಲಿ ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ದ್ವಿಚಕ್ರ ವಾಹನ ಸವಾರರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಈ ದಂಪತಿಯ ಸಮಾಜಮುಖಿ ಕಾರ್ಯವನ್ನು ನೋಡಿಯಾದರೂ ಪಾಲಿಕೆ ಎಚ್ಚೆತ್ತುಕೊಂಡು ರಸ್ತೆ ಗುಂಡಿಯನ್ನು ಮುಚ್ಚುವಂತಾಗಲಿ.

Articles You Might Like

Share This Article