ಬೆಂಗಳೂರು, ಡಿ. 3- ಸಾರ್ವಜನಿಕರಿಗೆ ಟ್ಯಾಕ್ಸಿ ಸೇವೆ ಒದಗಿಸುವ, ಆಹಾರ ಪದಾರ್ಥಗಳನ್ನು ಹಾಗೂ ಇನ್ನಿತರೆ ವಸ್ತುಗಳನ್ನು ಸರಬರಾಜು ಮಾಡುವ ಸಂಸ್ಥೆಗಳ ಪದಾಕಾರಿಗಳೊಂದಿಗೆ ನಗರ ಪೊಲೀಸ್ ಆಯುಕ್ತರು, ವಿಶೇಷ ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳು ಸಮಾಲೋಚನೆ ಹಾಗೂ ಸಮನ್ವಯ ಸಭೆ ನಡೆಸಿ ಸುರಕ್ಷತೆ ಹಾಗೂ ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ಸಲಹೆ ಸೂಚನೆಗಳನ್ನು ನೀಡಿದರು.
ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ವಿವಿಧ ಟ್ಯಾಕ್ಸಿ ಎಜೆನ್ಸಿಗಳು, ಲಾಜಿಸ್ಟಿಕ್ ಎಜೆನ್ಸಿಗಳು, ಆಹಾರ ಪದಾರ್ಥಗಳು ಹಾಗೂ ಇನ್ನಿತರೆ ವಸ್ತುಗಳನ್ನು ಗ್ರಾಹಕರ ವಿಳಾಸಗಳಿಗೆ ಸರಬರಾಜು ಮಾಡುವ ವಿವಿಧ ಹಾಗೂ ಸೇವೆಗಳನ್ನು ಒದಗಿಸುವ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ಹಾಗೂ ಸಮನ್ವಯ ಸಭೆಯನ್ನು ನಡೆಸಿ, ಸದರಿ ಸಂಸ್ಥೆಗಳ ಅಹವಾಲುಗಳನ್ನು ಪಡೆದುಕೊಂಡರು.
ಈ ಸಂಸ್ಥೆಗಳ ಕಾರ್ಯವೈಖರಿ ಗಳನ್ನು ಸಾರ್ವಜನಿಕ, ಮಹಿಳೆ ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಹಾಗೂ ಈ ಸೇವೆಗಳನ್ನು ಹೆಚ್ಚು ಸುರಕ್ಷತೆ ಮತ್ತು ಜನಸ್ನೇಹಿಯಾಗಿಸುವ ನಿಟ್ಟಿನಲ್ಲಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಸಲಹೆ, ಸೂಚನೆಗಳು, ಮುಂಜಾಗ್ರತಾ ಕ್ರಮಗಳು, ತಾಂತ್ರಿಕ ಸೌಲಭ್ಯ ಅಳವಡಿಸಿಕೊಳ್ಳುವಂತೆ ಸೂಚಿಸಿದರು.
ಗ್ರಾಹಕರು ಟ್ಯಾಕ್ಸಿ ಬುಕ್ ಮಾಡಿದಾಗ ಅವರು ಪ್ರಯಾಣ ಆರಂಭಿಸಿದ ಬಳಿಕ ನಿಗದಿತ ಸ್ಥಳಕ್ಕೆ, ನಿರ್ದಿಷ್ಟ ಸಮಯಕ್ಕೆ ತಲುಪಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಟ್ಯಾಕ್ಸಿ ಎಜೆನ್ಸಿಗಳು ತಾಂತ್ರಿಕ ಸೌಲಭ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಸೂಚಿಸಿದ್ದರು.
500ಕೆಜಿ ನಿಷೇಧಿತ ಪ್ಲಾಸ್ಟಿಕ್ ಸೀಜ್, 34 ಸಾವಿರ ರೂ.ದಂಡ
ಸಂಸ್ಥೆಯ ಸಾಫ್ಟ್ವೇರ್ ಅಪ್ಲಿಕೇಷನ್ಗಳಲ್ಲಿ ಹಾಗೂ ವಾಹನಗಳಲ್ಲಿ ಸೇಫ್ಟಿ ಸ್ಟಿಕ್ಕರ್ಸ್ ಇಆರ್ಎಸ್ಎಸ್ ನಂಬರ್ 112 ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಬೇಕು. ಸಂಸ್ಥೆಯ ಸಮವಸ್ತ್ರಗಳು ದುರುಪಯೋಗವಾಗದಂತೆ ನೋಡಿಕೊಳ್ಳಬೇಕು, ನೌಕರರು ಕೆಲಸ ಬಿಟ್ಟಾಗ ಅವರಿಗೆ ನೀಡಲಾಗಿದ್ದ ಸಂಸ್ಥೆಯ ಗುರುತಿನ ಚೀಟಿ, ಸಮವಸ್ತ್ರವನ್ನು ವಾಪಸ್ ಪಡೆಯುವಂತೆ ಸಲಹೆ ನೀಡಿದರು.
ಡಂಝೋ, ಪೋರ್ಟರ್, ಪ್ಲಿಪ್ ಕಾರ್ಟ್ ಮುಂತಾದ ಡೆಲಿವರಿ ಪ್ಲಾಟ್ಫಾರಂಗಳಲ್ಲಿ ನಿಷೇದಿತ ವಸ್ತುಗಳನ್ನು ಸರಬರಾಜು ಮಾಡದಂತೆ ಎಚ್ಚರವಹಿಸಬೇಕು. ಗ್ರಾಹಕರು ಬುಕ್ ಮಾಡಿರುವ ವಸ್ತುಗಳನ್ನು ಮಾತ್ರವೇ ಡೆಲಿವರಿ ಮಾಡತಕ್ಕದ್ದು. ತಮ್ಮ ತಮ್ಮ ಸಂಸ್ಥೆಯ ನೌಕರರಿಗೆ ಜಾಗೃತಿ ಉಂಟು ಮಾಡಲು ಅಗತ್ಯವಿದ್ದಲ್ಲಿ ಉಚಿತವಾಗಿ ಸಂಚಾರ ಪೊಲೀಸ್ ವತಿಯಿಂದ ತರಬೇತಿ ಕಾರ್ಯಗಳನ್ನು ಏರ್ಪಡಿಸುವುದಾಗಿ ಇದೇ ವೇಳೆ ತಿಳಿಸಲಾಯಿತು.
ನೋಡಲ್ ಅಧಿಕಾರಿ:
ಪ್ರತಿಯೊಂದು ಸಂಸ್ಥೆಗಳಿಂದ ತುರ್ತು ಮಾಹಿತಿ ವಿನಿಮಯಕ್ಕಾಗಿ ದಿನದ 24 ಗಂಟೆಯೂ ನೊಡೇಲ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕು ಎಂಬುದು ಸೇರಿದಂತೆ ಹಲವು ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದರು.
ಸುಂದರ್ ಪಿಚೈಗೆ ಅಮೆರಿಕಾದಲ್ಲಿ ಪದ್ಮಭೂಷಣ ಪ್ರದಾನ
ಅಗತ್ಯ ಕ್ರಮದ ಭರವಸೆ:
ಡೆಲಿವರಿ ನೀಡಲು ಹೋಗುವ ನೌಕರರು ಕೆಲವೊಂದು ಸಂದರ್ಭಗಳಲ್ಲಿ ಸುಲಿಗೆ, ಹಲ್ಲೆಗೆ ಒಳಗಾಗಿರುವ ಪ್ರಕರಣಗಳು ವರದಿಯಾಗಿದ್ದು, ಅಂತಹ ಪ್ರಕರಣಗಳಲ್ಲಿ ನಿರ್ದಾಕ್ಷಿಣ್ಯವಾದ ಕಾನೂನು ಕ್ರಮಗಳನ್ನು ಜರುಗಿಸಿ ಸಂಸ್ಥೆಯ ನೌಕರರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಪೊಲೀಸ್ ಅಧಿಕಾರಿಗಳು ನೀಡಿದರು.
ಬೆಂಗಳೂರಿನಲ್ಲಿ ಡಿ.8ರಿಂದ 10ರವರೆಗೆ ಫ್ಯೂಚರ್ ಡಿಸೈನ್ ಸಮಾವೇಶ
ಒಟ್ಟಾರೆ ಈ ಸಂಸ್ಥೆಗಳ ನೌಕರರಿಂದ ಯಾವುದೇ ಅಹಿತಕರ ಘಟನೆಗಳು ಪುನರಾವರ್ತನೆಯಾಗದಂತೆ ಹಾಗೂ ನಿಷೇದಿತ ವಸ್ತುಗಳ ಸರಬರಾಜು ನಿಯಂತ್ರಿಸಲು ಮತ್ತು ಕಾನೂನು ಪರಿಪಾಲನೆ ಮಾಡುವ ನಿಟ್ಟಿನಲ್ಲಿ ಅಗತ್ಯ ಸೂಚನೆಗಳನ್ನು ಸಮನ್ವಯ ಸಭೆಯಲ್ಲಿ ನೀಡಲಾಯಿತು.
public, consumer, service, meeting, police,