2023ನೇ ಸಾಲಿನ ಸಾರ್ವತ್ರಿಕ ರಜಾದಿನಗಳ ಪಟ್ಟಿ ಪ್ರಕಟ

Social Share

ಬೆಂಗಳೂರು,ನ.21- ರಾಜ್ಯ ಸರ್ಕಾರ 2023ನೇ ಸಾಲಿನಲ್ಲಿ 19 ಸಾರ್ವತ್ರಿಕ ರಜಾದಿನ 17 ಪರಿಮಿತ ರಜಾದಿನಗಳನ್ನು ಪ್ರಕಟಿಸಿದೆ. ಜನವರಿ 26ರ ಗಣರಾಜ್ಯೋತ್ಸವ, ಫೆ.18ರ ಮಹಾಶಿವರಾತ್ರಿ, ಮಾ.22ರ ಯುಗಾದಿ ಹಬ್ಬ , ಏ.3ರ ಮಹಾವೀರ ಜಯಂತಿ, ಏ.7ರ ಶುಭ ಶುಕ್ರವಾರ, ಏ.14ರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಮೇ 1ರ ಕಾರ್ಮಿಕ ದಿನಾಚರಣೆ, ಜೂ.29ರ ಬಕ್ರೀದ್, ಜುಲೈ 29ರ ಮೊಹರಂ ಕಡೆಯ ದಿನವನ್ನು ಸಾರ್ವತ್ರಿಕ ರಜಾದಿನಗಳನ್ನು ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಆ.15ರ ಸ್ವಾತಂತ್ರ್ಯ ದಿನಾಚರಣೆ, ಸೆ.18ರ ವರಸಿದ್ದಿ ವಿನಾಯಕ ವ್ರತ, ಸೆ.28ರ ಈದ್ ಮಿಲಾದ್, ಅ.2ರ ಗಾಂಧಿ ಜಯಂತಿ, ಅ.23ರ ಮಹಾನವಮಿ , ಆಯುಧಪೂಜೆ, ಅ.24ರ ವಿಜಯದಶಮಿ, ನ.1ರ ಕನ್ನಡ ರಾಜ್ಯೋತ್ಸವ, ನ.14 ಬಲಿಪಾಡ್ಯಮಿ, ನ.30ರ ಕನಕದಾಸ ಜಯಂತಿ ಹಾಗೂ ಡಿ.25ರ ಕ್ರಿಸ್‍ಮಸ್ ಸಾವ್ರರ್ತಿಕ ರಜಾದಿನಗಳಾಗಿವೆ.

ಚಾವ್ಲಾ ಅತ್ಯಾಚಾರ ಪ್ರಕರಣ : ಮೇಲ್ಮನವಿ ಸಲ್ಲಿಸಲು ದೆಹಲಿ ಸರ್ಕಾರ ಸಿದ್ಧತೆ

ಈ ಸಂಬಂಧ ಅಧಿಸೂಚನೆ ಹೊರಡಿಸಿರುವ ರಾಜ್ಯ ಸರ್ಕಾರ ಭಾನುವಾರಗಳಂದು ಬರುವ ಜ.15ರ ಮಕರ ಸಂಕ್ರಾಂತಿ, ಏಪ್ರಿಲ್ 23ರಂದು ಬರುವ ಬಸವ ಜಯಂತಿ, ನ.12ರ ನರಕ ಚತುರ್ದಶಿ ಹಾಗೂ 2ನೇ ಶನಿವಾರದಂದು ಬರುವ ಅ.14ರ ಮಹಾಲಯ ಅಮವಾಸೆ ಮತ್ತು 4ನೇ ಶನಿವಾರದಂದು ಬರುವ ಏ.22ರ ರಂಜಾನ್, ಅ.28ರ ಮಹರ್ಷಿ ವಾಲ್ಮೀಕಿ ಜಯಂತಿಯು ಸಾರ್ವತ್ರಿಕ ರಜೆ ಪಟ್ಟಿಯಲ್ಲಿಲ್ಲ.

ಭಾರತ-ಅಮೇರಿಕ ನಡುವೆ ಅತ್ಯುತ್ತಮ ಸಂಬಂಧವಿದೆ : ಶ್ವೇತಭವನದ ಉನ್ನತಾಧಿಕಾರಿ

ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ರಜಾದಿನಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರತ್ಯೇಕವಾಗಿ ಪ್ರಕಟಿಸಲಿದ್ದಾರೆ. ಸರ್ಕಾರಿ ನೌಕರರು, ಸಾರ್ವತ್ರಿಕ ರಜಾದಿನಗಳ ಜೊತೆಗೆ ಎರಡು ದಿವಸಗಳಿಗೆ ಮೀರದಂತೆ ಪರಿಮಿತ ರಜೆಯನ್ನು ಪೂರ್ವಾನುಮತಿ ಪಡೆಯಬಹುದಾಗಿದೆ.

ಕೇಜ್ರಿವಾಲ್ ರ‍್ಯಾಲಿಯಲ್ಲಿ ಮೋದಿ ಘೋಷಣೆ

ಮಧ್ವನವಮಿ, ಷಬ್-ಎ-ಬರಾತ್, ಹೋಳಿ ಹಬ್ಬ, ಶ್ರೀರಾಮನವಮಿ, ಷಬ್-ಎ-ಖದರ್, ಜುಮತ್-ಉಲ್-ವಿದಾ, ಶಂಕರಾಚಾರ್ಯ ಜಯಂತಿ, ರಾಮಾನುಜಚಾರ್ಯ ಜಯಂತಿ, ಬುದ್ದ ಪೂರ್ಣಿಮಾ, ವರಮಹಾಲಕ್ಷ್ಮಿ ವ್ರತ, ತಿರು ಓಣಂ, ಯಜುರ್ ಉಪಕರ್ಮ, ಬ್ರಹ್ಮಶ್ರೀ ನಾರಾಯಣಗುರು ಜಯಂತಿ, ಶ್ರೀಕೃಷ್ಣ ಜನ್ಮಾಷ್ಟಮಿ, ಕನ್ಯಾಮರಿಯಮ್ಮ ಜಯಂತಿ, ತುಲಾ ಸಂಕ್ರಮಣ, ಗುರುನಾನಕ್ ಜಯಂತಿ, ಹುತ್ತರಿ ದಿನಗಳನ್ನು ಪರಿಮಿತ ರಜಾ ದಿನಗಳೆಂದು ಘೋಷಿಸಿದೆ.

Articles You Might Like

Share This Article