ನಾಳೆ ಪಿಯುಸಿ ರಿಸಲ್ಟ್

ಬೆಂಗಳೂರು,ಸೆ.19- ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಫಲಿತಾಂಶ ನಾಳೆ ಪ್ರಕಟವಾಗಲಿದೆ. ನಾಳೆ ಬೆಳಗ್ಗೆ 11 ಗಂಟೆಯ ನಂತರ www.karresults.nic.in ನಲ್ಲಿ ಫಲಿತಾಂಶವನ್ನು ಪಡೆಯಬಹುದಾಗಿದೆ ಎಂದು ಅಕೃತ ಪ್ರಕಟಣೆ ತಿಳಿಸಿದೆ.

ಆಗಸ್ಟ್-ಸೆಪ್ಟೆಂಬರ್‍ನಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆದಿತ್ತು. ನಾಳೆ ಬೆಳಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿ.ಸಿ.ನಾಗೇಶ್ ಅವರು ಫಲಿತಾಂಶ ಪ್ರಕಟಿಸಿದ ನಂತರ ವೆಬ್‍ಸೈಟ್‍ನಲ್ಲಿ ಫಲಿತಾಂಶ ಲಭ್ಯವಾಗಲಿದೆ.

ಒಟ್ಟು 18,413 ಅಭ್ಯರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಅವರಲ್ಲಿ 17,470 ಖಾಸಗಿ ಅಭ್ಯರ್ಥಿಗಳು, 351 ಪುನಾರವರ್ತಿತ ಅಭ್ಯರ್ಥಿಗಳು ಹಾಗೂ 592 ಮಂದಿ ಫ್ರೆಶರ್ಸ್‍ಗಳು ಪರೀಕ್ಷೆಯನ್ನು ಬರೆದಿದ್ದರು.

Sri Raghav

Admin