ನಿಗದಿನ ವೇಳಾ ಪಟ್ಟಿಯಂತೆ ನಡೆಯಲಿವೆ ಪಿಯುಸಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆ

Social Share

ಬೆಂಗಳೂರು, ಜ.25- ಪಿಯುಸಿ , ಎಸ್‍ಎಸ್‍ಎಲ್‍ಸಿ ಪರೀಕ್ಷೆ ಗಳು ನಿಗದಿನ ವೇಳಾ ಪಟ್ಟಿಯಂತೆ ನಡೆಯಲಿವೆ. ತಾತ್ಕಾಲಿಕ ಪರೀಕ್ಷೆ ವೇಳಾಪಟ್ಟಿಯಂತೆಯೇ ಅಂತಿಮ ಪರೀಕ್ಷೆಗಳು ನಡೆಯುವ ಸಾಧ್ಯತೆ ಇದೆ. ಕಳೆದ ಸಾಲಿನಲ್ಲಿ ಕೊರೋನಾ ತೀವ್ರಗೊಂಡ ಹಿನ್ನಲೆಯಲ್ಲಿ ಪರೀಕ್ಷೆಗಳು ನಡೆದಿರಲಿಲ್ಲ. ಆದರೆ ಈಬಾರಿ ಪಿಯುಸಿ , ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ.
ಕೊರೋನಾ ನಡುವೆಯೂ ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ಪಿಯು ಪರೀಕ್ಷೆಗಳು ನಡೆಯಲಿವೆ ಎಂದು ಪಿಯು ಬೋರ್ಡ್ ನಿರ್ದೇಶಕಿ ಆರ್.ಸ್ನೇಹಲ್ ಸ್ಪಷ್ಟನೆ ನೀಡಿದ್ದಾರೆ. ಏಪ್ರಿಲ್ 16 ರಿಂದ ಮೇ 4 ರವರೆಗೆ ಪರೀಕ್ಷೆಗಳು ನಡೆಯಲಿವೆ. ಕಳೆದ ವರ್ಷದಂತೆ ಭಾಷಾ ವಿಷಯದಲ್ಲಿ ಶೇ. 30 ರಷ್ಟು ಪಠ್ಯ ಕಡಿತ ಮಾಡಲಾಗಿದೆ. ಐಚ್ಛಿಕ ವಿಷಯಗಳಲ್ಲಿ ಯಾವುದೇ ಪಠ್ಯ ಕಡಿತವಿಲ್ಲ.
ಐಚ್ಛಿಕ ,ಭಾಷಾ ಕೋರ್ ವಿಷಯದಲ್ಲಿ ಬಹು ಆಯ್ಕೆ ಪ್ರಶ್ನೆ ಇರಲಿದೆ. ಈ ಮೊದಲು ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆ ಇರುತ್ತಿರಲಿಲ್ಲ. ಪಿಯು ಪರೀಕ್ಷಾ ನೋಂದಣಿಗೆ ದಿನಾಂಕ ವಿಸ್ತರಣೆ: ಪಿಯುಸಿ ಪರೀಕ್ಷೆಗೆ ಖಾಸಗಿ ವಿದ್ಯಾರ್ಥಿಗಳು ನೋಂದಣಿಗೆ ಜನವರಿ 31, 2022 ರವರೆಗೆ ಅವಕಾಶ ನೀಡಲಾಗಿದೆ.

Articles You Might Like

Share This Article