ಟಿವಿ ಮೆಕ್ಯಾನಿಕ್ ಕುಟುಂಬಕ್ಕೆ ಬಂತು 12 ಲಕ್ಷ ವಿದ್ಯುತ್ ಬಿಲ್..!

Social Share

ಪುದುಚೇರಿ, ಸೆ. 21- ದೇಶದ ವಿವಿಧ ರಾಜ್ಯಗಳಲ್ಲಿರುವ ವಿದ್ಯುತ್ ಪ್ರಸರಣ ಕಂಪೆನಿಗಳ ಎಡವಟ್ಟುಗಳು ಪದೇ ಪದೇ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳಿಗೆ ಗುರಿಯಾಗಿದ್ದು ಈಗ ಅಂತಹದೇ ಒಂದು ಪ್ರಕರಣವು ಪುದುಚೇರಿಯಲ್ಲಿ ನಡೆದಿದೆ.
ಪುದುಚೇರಿಯ ವಿದ್ಯುತ್ ಇಲಾಖೆಯು ಟಿವಿ ಮೆಕಾನಿಕ್ ಒಬ್ಬರ ಕುಟುಂಬಕ್ಕೆ 12 ಲಕ್ಷ ರೂ.ಗಳ ವಿದ್ಯುತ್ ಬಿಲ್ ಅನ್ನು ನೀಡಿರುವುದೇ ಭಾರೀ ಎಡವಟ್ಟಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳಾಗುತ್ತಿವೆ.

ಪುದುಚೇರಿಯ ವಿಶ್ವನಾಥ ನಗರದ ಶೇಖ್ ಜಾಹರ್ ರಸ್ತೆಯಲ್ಲಿ ವಾಸಿಸುತ್ತಿರುವ ಟಿವಿ ಮೆಕ್ಯಾನಿಕ್ ಶರವಣನ್ ಅವರಿಗೆ 12 ಲಕ್ಷದ 91 ಸಾವಿರದ 845 ರೂ.ಗಳ ವಿದ್ಯುತ್ ಬಿಲ್ಲನ್ನು ನೀಡುವ ಮೂಲಕ ಶಾಕ್ ನೀಡಿದೆ. ಶರವಣನ್ ಅವರು ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿದ್ದು, ಕುಟುಂಬದ ನಿರ್ವಹಣೆಗಾಗಿ ಹಗಲು ವೇಳೆ ಟಿವಿ ಮೆಕ್ಯಾನಿಕ್ ಆಗಿ ರಾತ್ರಿ ಸಮಯದಲ್ಲಿ ವಾಚ್‍ಮ್ಯಾನ್ ವೃತ್ತಿಯನ್ನು ನಿರ್ವಹಿಸುತ್ತಿದ್ದಾನೆ.

ಇದನ್ನೂ ಓದಿ : BREAKING : ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ ವಿಧಿವಶ

ಶರವಣನ್‍ರ ಮನೆಯವರು ಜೂನ್ ತಿಂಗಳಿನಲ್ಲಿ 20,630 ಯೂನಿಟ್ ವಿದ್ಯುತ್ ಅನ್ನು ಬಳಕೆ ಮಾಡಿದ್ದಾರೆ, ಆದರೆ ಜುಲೈ ತಿಂಗಳಿನಲ್ಲಿ 2,11,150 ಯೂನಿಟ್‍ಗಳನ್ನು ಬಳಸಿರುವುದಾಗಿ ವಿದ್ಯುತ್ ಇಲಾಖೆಯವರು ಬಿಲ್ ನೀಡಿದ್ದಾರೆ. ಅಂದರೆ ಶರವಣನ್ ಮನೆಯವರು ಒಂದೇ ತಿಂಗಳಿನಲ್ಲಿ 1,90,520 ಯೂನಿಟ್‍ಗಳನ್ನು ಬಳಕೆ ಮಾಡಿರುವುದಾಗಿ ಬಿಲ್‍ನಲ್ಲಿ ನಮೂದಿಸಲಾಗಿದೆ.

ಪ್ರತಿ ತಿಂಗಳು 600 ರಿಂದ 700 ರೂ. ವಿದ್ಯುತ್ ಬರುತ್ತಿದ್ದ ಜಾಗದಲ್ಲಿ ಜುಲೈ ತಿಂಗಳಿನಲ್ಲಿ 12,91, 845 ರೂ. ಬಿಲ್ ಬಂದಿರುವುದನ್ನು ನೋಡಿ ಶಾಕ್ ಆದ ಶರವಣನ್ ಅವರು ಅಂದಿನಿಂದಲೂ ವಿದ್ಯುತ್ ಇಲಾಖೆಯವರು ಸಂಪರ್ಕಿಸುತ್ತಿದ್ದರೂ ಯಾವುದೇ ಪ್ರತಿಕ್ರಿಯೆ ನೀಡದೆ ನಿರ್ಲಕ್ಷ್ಯತನವನ್ನು ಮೆರೆಯುತ್ತಿದ್ದರು.

ಇದರಿಂದ ಬೇಸತ್ತ ಶರವಣನ್ ಅವರು ವಿದ್ಯುತ್ ಮೀಟರ್‍ನಲ್ಲಿ 5 ಡಿಜಿಟ್‍ವರೆಗೂ ಮಾತ್ರ ತೋರಿಸುತ್ತದೆ, ಆದರೆ 6 ಡಿಜಿಟ್ ಅಂಕಿ ಬರಲು ಹೇಗೆ ಸಾಧ್ಯ ಎಂದು ಕೂಡ ಪ್ರಶ್ನಿಸಿದರೂ ಇಲಾಖೆಯವರಿಂದ ಸರಿಯಾದ ಉತ್ತರ ಸಿಗಲಿಲ್ಲ.

ಆದರೆ ಈಗ ವಿದ್ಯುತ್ ಬಿಲ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ತಾಂತ್ರಿಕ ದೋಷದಿಂದಾಗಿ ಇಂತಹ ಎಡವಟ್ಟು ಆಗಿ ಮೀಟರ್ ರೀಡಿಂಗ್‍ನಲ್ಲಿ ಒಂದು ಅಂಕಿ ಹೆಚ್ಚಾಗಿ ನಮೂದಿಸಲಾಗಿದ್ದು ಅದು ಸರಿಪಡಿಸುವುದಾಗಿ ಹೇಳಿದ್ದಾರೆ.
ವಿದ್ಯುತ್ ಸರಬರಾಜು ಕಂಪೆನಿಯವರು ಮಾಡುವ ಎಡವಟ್ಟಿಗೆ ಗ್ರಾಹಕರು ಬೆಚ್ಚಿ ಬೀಳುವಂತಾಗಿದೆ. ಇನ್ನಾದರೂ ಇಂತಹ ಎಡವಟ್ಟುಗಳಾಗದಂತೆ ಎಚ್ಚರ ವಹಿಸುವಂತಾಗಲಿ.

Articles You Might Like

Share This Article