ಪೂನಾ,ಮಾ.16- ಸಾಫ್ಟ್‍ವೇರ್ ಉದ್ಯೋಗಿಯೊಬ್ಬ ತನ್ನ ಪತ್ನಿ ಮತ್ತು ಎಂಟು ವರ್ಷದ ಮಗುವನ್ನು ಕೊಂದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪೂನಾದಲ್ಲಿ ನಡೆದಿದೆ.ಪುಣೆಯ ಔಂಧ್ ಪ್ರದೇಶದಲ್ಲಿನ ಅವರ ಫ್ಲಾಟ್‍ನಲ್ಲಿ ಈ ಘಟನೆ ನಡೆದಿದೆ.
ಟೆಕ್ಕಿ ಮೊದಲು ತನ್ನ ಹೆಂಡತಿ ಮತ್ತು ಮಗನನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಂತೆ ತೋರುತ್ತಿದೆ ಎಂದು ಪೊಲೀಸರು ಸುದ್ದಿಗಾರರಿಗೆ ತಿಳಿಸಿದ್ದಾರೆ.ಮೃತರನ್ನು ಸುದೀಪ್ರೋ ಗಂಗೂಲಿ, ಅವರ ಪತ್ನಿ ಪ್ರಿಯಾಂಕಾ ಮತ್ತು ಪುತ್ರ ತನಿಷ್ಕಾ ಎಂದು ಗುರುತಿಸಲಾಗಿದೆ.ಸುದೀಪ್ರೋ ಅವರಿಗೆ ದೂರವಾಣಿ ಕರೆ ಮಾಡಿದರು ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಅವರ ಸಹೋದರ ನೀಡಿದ ದೂರಿನ ಮೇರೆಗೆ ಅಪಾರ್ಟ್‍ಮೆಂಟ್‍ಗೆ ತೆರಳಿ ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಚತುಶ್ರಿಂಗಿ ಪೊಲೀಸರು ವಿವರಣೆ ನೀಡಿದ್ದಾರೆ.
ಡೋರ್‍ಲಾಕ್ ಹಾಕಿದ ಮನೆಯ ಒಳಗೆ ದಂಪತಿಯ ಮೊಬೈಲ್ ಫೋನ್‍ಗಳು ಫ್ಲಾಟ್‍ನೊಳಗೆ ಇರುವುದನ್ನು ಪೊಲೀಸರು ಪತ್ತೆ ಮಾಡಿದರು.
ನಕಲಿ ಕೀ ಬಳಸಿ ಒಳಗೆ ಪ್ರವೇಶಿಸಿದ ನಂತರ ಪೊಲೀಸರು ಸುದೀಪ್ರೋ ನೇಣು ಬಿಗಿದುಕೊಂಡಿರುವುದು ಕಂಡುಬಂದರೆ, ಅವರ ಪತ್ನಿ ಮತ್ತು ಮಗುವಿನ ಮುಖಕ್ಕೆ ಪಾಲಿಥಿನ್ ಚೀಲಗಳನ್ನು ಸುತ್ತಿ ಸತ್ತಿರುವುದು ಕಂಡುಬಂದಿದೆ. ಘಟನಾ ಸ್ಥಳದಿಂದ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Pune, #ITEngineer, #KillsWife, #Aundh,