ಪೊಲೀಸ್ ಠಾಣೆಯಲ್ಲೊಂದು ಗಂಧರ್ವಲೋಕ..!

Social Share

ಪುಣೆ, ಜ.15- ಪೊಲೀಸ್ ಠಾಣೆ ಎಂದರೆ ಸದಾ ಅಪರಾಗಳ ವಿಚಾರಣೆ, ಅಪರಾಧಗಳ ಜಂಜಾಟವೇ ತುಂಬಿ ತುಳುಕುತ್ತಿರುತ್ತದೆ, ಪೊಲೀಸರು ಕೂಡಾ ಸದಾ ಒತ್ತಡದಲ್ಲೇ ಕರ್ತವ್ಯದಲ್ಲಿ ತೊಡಗಿರುತ್ತಾರೆ, ಆದರೆ ಪೊಲೀಸರ ಚಿಂತೆ ದೂರ ಮಾಡುವ ಸಲುವಾಗಿ ಪೊಲೀಸ್ ಠಾಣೆಯಲ್ಲೇ ಸಂಗೀತ ಕೋಣೆ ನಿರ್ಮಿಸಿದರೆ… ಹೌದು. ಇಂತಹ ವ್ಯವಸ್ಥೆಯು ಪುಣೆಯ ಲಕ್ಷರ್ ಪೊಲೀಸ್ ಠಾಣೆಯಲ್ಲಿದೆ.

ಪುಣೆಯ ಕಂಟೋನ್ಮೆಂಟ್ ಪ್ರದೇಶದಲ್ಲಿರುವ ಲಕ್ಷರ್ ಪೊಲೀಸ್ ಠಾಣೆಯಲ್ಲಿ ಮಹಾರಾಷ್ಟ್ರದಲ್ಲೇ ಮೊದಲ `ಸಂಗೀತ ಕೋಣೆ¿ಯನ್ನು ನಿರ್ಮಿಸಲಾಗಿದ್ದು, ಇಲ್ಲಿ ಕರೋಕೆ ಸೇರಿದಂತೆ ಹಲವು ಸಂಗೀತ ಸಾಧನೆಗಳಿದ್ದು, ಪೊಲೀಸರು ದಿನನಿತ್ಯ ತಮ್ಮ ಕರ್ತವ್ಯದ ಪಾಲನೆ ಜೊತೆಗೆ ಸಂಗೀತದಲ್ಲಿ ತೊಡಗಿಸಿಕೊಂಡು ತಮ್ಮ ಚಿಂತೆಯನ್ನು ದೂರಪಡಿಸಿಕೊಂಡಿದ್ದಾರೆ.

ಕರ್ತವ್ಯದ ಬಿಡುವಿನ ಸಮಯದಲ್ಲಿ ಪೊಲೀಸರು ಸಂಗೀತ ಕೋಣೆಗೆ ಹೋಗಿ ಅಲ್ಲಿ ಸ್ವರ ಮಾಂತ್ರಿಕರಾದ ಲತಾ ಮಂಗೇಷ್ಕರ್, ಕಿಶೋರ್ಕುಮಾರ್. ಮೊಹಮ್ಮದ್ ರಫಿ ರಂತಹ ಗಾಯಕರ ಗೀತೆಗಳನ್ನು ಹಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಲಕ್ಷರ್ಠಾಣೆಯ ಹಿರಿಯ ಸಬ್ಇನ್ಸ್ಪೆಕ್ಟರ್ ಅಶೋಕ್ ಕದಮ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, `ಕೊರೊನಾ ಸಮಯದಲ್ಲಿ ನಮ್ಮ ಠಾಣೆಯ ಸಿಬ್ಬಂದಿಗಳು ಹೆಚ್ಚಿನ ಕರ್ತವ್ಯದಿಂದಾಗಿ ಖಿನ್ನತೆಗೆ ಒಳಗಾಗಿದ್ದರು. ಈ ವೇಳೆ ಅವರ ಒತ್ತಡ ತಗ್ಗಿಸುವ ಸಲುವಾಗಿ ಖ್ಯಾತ ಥೆರಾಪಿಸ್ಟ್ ಡಾ. ಸಂತೋಷ್ ಬೊರೊಡೆ ಅವರು ಸಂಗೀತ ಥೆರಪಿಗೆ ಮುಂದಾದರು.

ಪೊಲೀಸರನ್ನು ಉತ್ತೇಜಿಸಿ ಅವರಲ್ಲಿರುವ ಸಂಗೀತವನ್ನು ಹೊರಹೊಮ್ಮಿಸುವಂತೆ ಮಾಡಲಾಯಿತು ಎಂದು ಹೇಳಿದರು. ಡಾ.ಸಂತೋಷ್ ಬರೊಡೆ ಅವರು ನೀಡಿದ ಸಲಹೆ ಮೇರೆಗೆ ನಮ್ಮ ಠಾಣೆಯಲ್ಲಿ ಸಂಗೀತ ಕೋಣೆಯೊಂದನ್ನು ನಿರ್ಮಿಸಿದೆವು. ಇದರಿಂದ ಸದಾ ಅಪರಾಧ ವಿಷಯದಿಂದ ಕಂಗೆಟ್ಟು ಹೋಗಿದ್ದ ಪೊಲೀಸರು ಉಲ್ಲಾಸದಾಯಕವಾದ ಸಂಗೀತದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ, ಇದರಿಂದ ತಮ್ಮ ಒತ್ತಡವನ್ನು ನಿಭಾಯಿಸಲು ಸಹಕಾರಿಯಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಸಜ್ಜಿತವಾಗಿ ನಿರ್ವಹಿಸಲು ಸಹಕಾರಿಯಾಗಿದೆ ಎಂದು ಅಶೋಕ್ ಕದಮ್ ತಿಳಿಸಿದರು.

ಲಕ್ಷರ್ ಠಾಣೆಯ ಪೊಲೀಸ್ ಸಿಬ್ಬಂದಿಗಳ ಸಂಗೀತ ಜ್ಞಾನಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಠಾಣೆಗೆ ಉತ್ಕøಷ್ಟ ಮಟ್ಟದ ಕರೊಕೆ ಸಿಸ್ಟಮ್ಸ್ , ಮೈಕ್ಗಳನ್ನು ಒದಗಿಸಿಕೊಟ್ಟಿದ್ದಾರೆ. ಇಂದು ನಮ್ಮ ಠಾಣೆಯಲ್ಲಿ ಕೆಲಸ ಮಾಡುವ ಪೊಲೀಸರು, ಸಿಬ್ಬಂದಿಗಳ ಪೈಕಿ 15 ಮಂದಿ ನಿಪುಣ ಸಂಗೀತಗಾರರಿದ್ದು, ಪ್ರತಿನಿತ್ಯ ಸಂಗೀತ ಕೋಣೆಯಲ್ಲಿ ಗೀತೆಗಳನ್ನು ಹಾಡುವ ಮೂಲಕ ಠಾಣೆಯನ್ನು ಸಂಗೀತ ಲೋಕದಂತೆ ಪರಿವರ್ತಿಸಿದ್ದಾರೆ ಎಂದು ಪ್ರಶಂಸಿದ್ದಾರೆ.

ಠಾಣೆಯ ಇನ್ಸ್ಪೆಕ್ಟರ್ ವಿನಾಯಕ್ ಗುಜಾರ್ ಅವರು ಮಾತನಾಡಿ, ನಾನು ಕೂಡ ಅಪ್ಪಟ ಸಂಗೀತ ಪ್ರೇಮಿಯಾಗಿದ್ದು, ನಮ್ಮ ಠಾಣೆಯಲ್ಲೇ ಸಂಗೀತ ಕೋಣೆ ಇರುವುದರಿಂದ ಪ್ರತಿನಿತ್ಯ 7 ಗಂಟೆಗೆ ನಾವು ಜಮಾವಣೆಗೊಂಡು ಕೆಲವು ಸಮಯ ಸಂಗೀತದಲ್ಲಿ ತೊಡಗಿಸಿಕೊಳ್ಳುತ್ತೇವೆ, ಕೆಲವೊಮ್ಮೆ ಸ್ಥಳೀಯ ಗಾಯಕರು ಕೂಡ ನಮ್ಮ ಜೊತೆ ಸೇರಿ ಗೀತೆಗಳನ್ನು ಹಾಡುತ್ತಾರೆ ‘ ಎಂದು ಹೇಳಿದರು.

`ನುರಿತ ಸಂಗೀತಗಾರರು ಮಾಡುವಂತೆ ನಮ್ಮ ಪೊಲೀಸರು ಕೂಡ ಕೆಲವು ಸಂಗೀತ ಸ್ವರಗಳನ್ನು ಅಳವಡಿಸಿಕೊಂಡು , ಪ್ರಮುಖ ನೋಟ್ಸ್ಗಳನ್ನು ಕೂಡ ಮಾಡಿಕೊಳ್ಳುತ್ತಾರೆ, ಇದರಿಂದಾಗಿ ನಮ್ಮ ಸಿಬ್ಬಂದಿಗಳು ಇಂದು ಸ್ಟೇಜ್ ಶೋಗಳಲ್ಲೂ ನಿರ್ಭೀತಿಯಾಗಿ ಹಾಡುಗಳನ್ನು ಹಾಡುವ ಸಾಮಥ್ರ್ಯ ಹೊಂದಿದ್ದಾರೆ¿ ಎಂದು ಹೇಳಿದರು.

`ಠಾಣೆಯಲ್ಲಿರುವ ಸಂಗೀತ ಕೋಣೆಯಲ್ಲಿ ಭೇದಭಾವ ಮರೆತು ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಚರ್ಚಿಸಿ ಒತ್ತಡ ನಿರ್ವಹಣೆ ಮಾಡಿಕೊಳ್ಳುವುದರಿಂದ, ಸೂರ್ತಿದಾಯಕವಾಗಿ ಅಪರಾಧ ಪ್ರಕರಣಗಳನ್ನು ಭೇದಿಸಲು ಸಹಕಾರಿಯಾಗಿದೆ ‘ ಎಂದು ಕದಮ್ ಹೇಳಿದ್ದಾರೆ.

#pune, #policemen, #enjoymusic, #policestation, #crackingcrimecases,

Articles You Might Like

Share This Article