ಸ್ವಾತಂತ್ರ್ಯ ಸಂಭ್ರಮದಲ್ಲಿ ಐಕ್ಯತೆ ಬದಲಾಗಿ ಅಪಸ್ವರಗಳದ್ದೇ ಸದ್ದು

Social Share

ಬೆಂಗಳೂರು,ಆ.14- ಸ್ವಾತಂತ್ರ್ಯ ಸಂಭ್ರಮದ 75ನೇ ವರ್ಷದಲ್ಲಿ ಕಂಡುಬರಬೇಕಿದ್ದ ಐಕ್ಯತೆ, ಒಗ್ಗಟ್ಟಿನ ಬದಲಾಗಿ ಸೈದ್ದಾಂತಿಕ ಸಂಘರ್ಷಗಳು, ವ್ಯಕ್ತಿತ್ವ ದೋಷಗಳು ಹೆಚ್ಚಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ.

ನಿನ್ನೆ ಶಿವಮೊಗ್ಗದಲ್ಲಿ ಎಸ್‍ಡಿಪಿಐ ಕಾರ್ಯಕರ್ತರು ಖಾಸಗಿ ಮಾಲ್‍ವೊಂದಕ್ಕೆ ನುಗ್ಗಿ ಸ್ವಾತಂತ್ರ್ಯ ಸಂಭ್ರಮದ ಅಂಗವಾಗಿ ಅಳವಡಿಸಲಾಗಿದ್ದ ಫೋಟೋಗಳ ಸಾಲಿನಲ್ಲಿ ಸಾರ್ವಕರ್ ಭಾವಚಿತ್ರ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಬಳಿಕ ಮಾಲ್‍ನವರು ಫೋಟೊ ತೆರವು ಮಾಡಿದರು. ಅದೇ ಮಾರ್ಗದಲ್ಲಿ ಪಂಜಿನ ಮೆರವಣಿಗೆ ಬಂದ ಬಿಜೆಪಿ ಕಾರ್ಯಕರ್ತರು ಮಾಲ್‍ಗೆ ನುಗ್ಗಿ ಪ್ರತಿಭಟಿಸಿ ಬೀಗ ಹಾಕಿಸಿದರು. ಮಾಲ್‍ನವರು ಮತ್ತೆ ಸಾರ್ವಕರ್ ಅವರ ಫೋಟೋ ಹಾಕಿ ವಿವಾದಕ್ಕೆ ತೆರೆ ಎಳೆಯಲು ಯತ್ನಿಸಿದರು. ಆದರೆ ಬಿಜೆಪಿ ನೀಡಿದ ದೂರನ್ನು ಆಧರಿಸಿ ಪೊಲೀಸರ ಎಸ್‍ಡಿಪಿಐ ಕಾರ್ಯಕರ್ತರು ಮತ್ತು ಮುಖಂಡರ ವಿರುದ್ಧ ದೂರ ದಾಖಲಿಸಿದ್ದರಿಂದ ಠಾಣೆಯ ಮುಂದೆ ಒಂದಿಷ್ಟು ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿದರು.

ಇದು ನಿನ್ನೆ ತಡರಾತ್ರಿವರೆಗೂ ಹೈಡ್ರಾಮಕ್ಕೆ ಕಾರಣವಾಯಿತು. ಶಿವಮೊಗ್ಗದಲ್ಲಿ ಸಾರ್ವಕರ್ ಭಾವಚಿತ್ರಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಬೆಂಗಳೂರಿನಲ್ಲಿ ಪುನೀತ್ ಕೆರಳ್ಳಿ ಅವರ ತಂಡ ಕಾಂಗ್ರೆಸಿಗರು ಸ್ವತಂತ್ರ ನಡಿಗೆ ಅಂಗವಾಗಿ ಮೆಜೆಸ್ಟಿಕ್‍ನ ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ನ್ಯಾಷನಲ್ ಕಾಲೇಜು ಮೈದಾದವರೆಗೂ ಹಾಕಲಾಗಿದ್ದ ಟಿಪ್ಪು ಸುಲ್ತಾನ್ ಅವರ ಪೋಸ್ಟರ್‍ಗಳನ್ನು ಹರಿದು ಹಾಕಿದ್ದಾರೆ.

ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಒಂದಿಷ್ಟು ಕಾಲ ಅಶಾಂತಿ ವಾತಾವರಣ ಉಂಟಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಡರಾತ್ರಿ ಸ್ಥಳಕ್ಕೆ ಭೇಟಿ ನೀಡಿ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಆಗ್ರಹಿಸಿದ್ದಾರೆ.

ಮಾರನೇ ದಿನ ಸರ್ಕಾರ ನೀಡಿರುವ ಜಾಹಿರಾತಿನಲ್ಲಿ ಪಂಡಿತ್ ಜವಾಹಾರ್ ಲಾಲ್ ನೆಹರು ಮತ್ತು ಟಿಪ್ಪು ಸುಲ್ತಾನ್ ಅವರ ಭಾವಚಿತ್ರ ಇಲ್ಲವೆಂಬುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

Articles You Might Like

Share This Article