ಅಪ್ಪು ಜನ್ಮದಿನ : ಸಮಾಧಿ ಬಳಿಗೆ ಹರಿದು ಬಂದ ಅಭಿಮಾನಿ ಸಾಗರ

Social Share

ಬೆಂಗಳೂರು, ಮಾ.17- ನಟನೆ ಜೊತೆಗೆ ವ್ಯಕ್ತಿತ್ವದಲ್ಲಿ ಅಳತೆಗೂ ನಿಲುಕದ ಮಾನವತಾಮೂರ್ತಿ, ಕನ್ನಡಿಗರ ರತ್ನ ಪುನಿತ್ ರಾಜ್‍ಕುಮಾರ್ ಅವರ 48ನೆ ವರ್ಷದ ಹುಟ್ಟುಹಬ್ಬ. ನಮ್ಮನ್ನೆಲ್ಲ ಅಗಲಿ ಎರಡು ವರ್ಷಗಳೇ ಕಳೆದು ಹೋದವು. ಆದರೂ ಪ್ರತಿಯೊಂದು ಮನೆಯಲ್ಲಿ ತಮ್ಮ ಮನೆ ಮಗನ ಜನ್ಮದಿನವನ್ನು ಆಚರಿಸುವ ಹಾಗೆ ಕೇಕ್ ಕಟ್ ಮಾಡುವ ಮೂಲಕ ಪ್ರೀತಿ-ವಾತ್ಸಲ್ಯ ತೋರಿ ಕಣ್ಣೀರು ಹಾಕುತ್ತಿದ್ದಾರೆ.

ಅಭಿಮಾನಿಗಳಲ್ಲಿ ಅವರನ್ನು ಕಳೆದುಕೊಂಡ ನೋವು ಮಾತ್ರ ಕಡಿಮೆಯಾಗಿಲ್ಲ. ಅನೇಕ ಮನೆಗಳ ದೇವರ ಮನೆಯಲ್ಲಿ ಪೂಜ್ಯನೀಯ ಸ್ಥಾನ ಪಡೆದಿದ್ದಾರೆ. ಪ್ರತೀ ಜಾತ್ರೆ ತೇರುಗಳ ಮೇಲೆ ದೇವರ ಬಳಿ ಇವರ ಭಾವಚಿತ್ರಕ್ಕೆ ಪೂಜಿಸಲಾಗುತ್ತಿದೆ. ಆಡಿಯೋ, ಟೈಟಲ, ಟ್ರೈಲರ್, ಟೀಸರ್ ಯಾವುದೇ ಸಿನಿಮಾ ಕಾರ್ಯಕ್ರಮಗಳಿದ್ದರೂ ಮೊದಲು ಪುನೀತ್ ಅವರನ್ನು ನೆನೆದು ಮುಂದಿನ ಕಾರ್ಯಕ್ರಮ ಶುರು ಮಾಡುವ ಪದ್ಧತಿ ಗಾಂಧಿನಗರದಲ್ಲಿ ಶುರುವಾಗಿದೆ.

ಬಿಡುಗಡೆಯಾಗುವ ಪ್ರತೀ ಚಿತ್ರದಲ್ಲಿ ಮೊದಲಿಗೆ ಅಭಿಮಾನದ ನುಡಿಗಳನ್ನು ಬರೆಯಲಾಗಿರುತ್ತದೆ. ಅಷ್ಟರ ಮಟ್ಟಿಗೆ ಗಾಂಧಿನಗರ ಅಪ್ಪು ಅವರನ್ನು ನೆನಪುಗಳ ಮೂಲಕ ಜೀವಂತವಾಗಿರಿಸಿದೆ. ಇಂದು ಹಳ್ಳಿ, ಪಟ್ಟಣ, ನಗರಗಳ ಮೂಲೆಮೂಲೆಗಳಲ್ಲೂ ಪುನೀತ್ ರಾಜಕುಮಾರ್ ಭಾವಚಿತ್ರಗಳ ದೊಡ್ಡ ದೊಡ್ಡ ಕಟೌಟ್ ಗಳು ಹೂವುಗಳಿಂದ ಅಲಂಕೃತಗೊಂಡು ರಾರಾಜಿಸುತ್ತಿವೆ.

ಸಂಸತ್ ಉಭಯ ಸದನಗಳಲ್ಲಿ ಮುಂದುವರೆದ ಗದ್ದಲ : ಮತ್ತೆ ಕಲಾಪ ಮುಂದೂಡಿಕೆ

ಪುನೀತ್ ಸಮಾಧಿಯ ಬಳಿ ಸಾವಿರಾರು ಅಭಿಮಾನಿಗಳು ಕೈಯಲ್ಲಿ ಕೇಕ್‍ಗಳನ್ನು ಹಿಡಿದು ತಂಡೋಪತಂಡವಾಗಿ ಬಂದು ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಎದೆ ಭಾರ ಮಾಡಿಕೊಂಡು ಆಚರಿಸುತ್ತ, ಜೈ ಅಪ್ಪು, ಅಪ್ಪು ಅಮರ,ಅಪ್ಪು ಮತ್ತೆ ಹುಟ್ಟಿ ಬಾ ಎಂಬ ಘೋಷಣೆಗಳನ್ನು ಕೂಗುತ್ತಾ ಮತ್ತೊಮ್ಮೆ ಸಮಾಯ ದರ್ಶನ ಮಾಡುತ್ತಾ ಕಣ್ಣೀರು ಸುರಿಸುತ್ತಾ ಸಾಗುತ್ತಿದ್ದಾರೆ.

ಇಂದೂ ಕೂಡ ರಾಜ್ಯದ ಮೂಲೆ ಮೂಲೆಗಳಿಂದ ಸಮಾಯ ಬಳಿ ಬಂದು ದರ್ಶನ ಮಾಡುವ ಮೂಲಕ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಿದ್ದಾರೆ. ಅಶ್ವಿನಿ ಪುನೀತ್ ರಾಜ್‍ಕುಮಾರ್ ಸೇರಿದಂತೆ ಡಾ.ರಾಜ್‍ಕುಮಾರ್ ಕುಟುಂಬದವರು ಇಂದು ಸಮಾ ಬಳಿ ಬಂದು ಪೂಜೆ ಸಲ್ಲಿಸಿದ್ದಾರೆ.

ರಾಜ್ಯಾದ್ಯಂತ ಸಾವಿರಾರು ದೇವಸ್ಥಾನಗಳಲ್ಲಿ ಪುನೀತ್ ಹೆಸರಲ್ಲಿ ಹೋಮ, ಹವನ, ಅಭಿಷೇಕ ಕೈಂಕರ್ಯಗಳು ನಡೆಯುತ್ತಿದ್ದು, ಅನ್ನ ದಾಸೋಹ ಕಾರ್ಯಕ್ರಮಗಳು ದೊಡ್ಡಮಟ್ಟದಲ್ಲಿ ಜರುಗುತ್ತಿವೆ. ಇದಷ್ಟೇ ಅಲ್ಲದೆ ಪುನೀತ್ ಅಭಿಮಾನಿಗಳ ಸಂಘಗಳು ಮತ್ತು ವಿವಿಧ ಸಂಘಟನೆಗಳು ಇಂದು ನೇತ್ರದಾನ ಅರಿವು ಕಾರ್ಯಕ್ರಮ, ರಕ್ತದಾನ ಶಿಬಿರಗಳು, ನೇತ್ರ ಚಿಕಿತ್ಸಾ ಶಿಬಿರಗಳು,ಅಂಗಾಂಗ ದಾನ, ಬಡ ಶಾಲಾ ಮಕ್ಕಳಿಗೆ ನೆರವು ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಅಪ್ಪು ಸಮಾಜಮುಖಿ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಹೈದ್ರಾಬಾದ್ ಕರ್ನಾಟಕ ಮೀಸಲಾತಿಯಿಂದ ಇತರೆ ಭಾಗದವರಿಗೆ ಭಾರೀ ಅನ್ಯಾಯ.

ಫ್ಯಾ£್ಸï ಕೇವಲ ಹುಡುಗರಷ್ಟೇ ಅಲ್ಲ. ಮಹಿಳೆಯರಿಗೆ ಇವರೆಂದರೆ ಪಂಚಪ್ರಾಣ. ಪ್ರತಿಯೊಂದು ಮನೆ ಮನೆಯಲ್ಲಿ ಅಣ್ಣ, ತಮ್ಮ, ಮಗನಂತೆ ಮನೆಯ ಸದಸ್ಯನಾಗಿ ಆರಾಸುವ ಇವರು ಕುಟುಂಬಸ್ಥರೊಂದಿಗೆ ಅಪ್ಪು ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಅಗಲಿದ ಮೇಲೆ ಅನೇಕ ತಾಯಂದಿರು ತಮ್ಮ ಮಕ್ಕಳು ಅಪ್ಪುವಿನಂತೆ ಆಗಬೇಕೆಂದು ಅವರ ಹೆಸರಿಟ್ಟಿದ್ದಾರೆ. ಇದು ಇವರ ಮೇಲಿನ ಅಭಿಮಾನಕ್ಕೆ ಮತ್ತೊಂದು ಉದಾಹರಣೆ.

ಕಳೆದ ವರ್ಷ ಅಪ್ಪು ಅಭಿನಯದ ಕೊನೆಯ ಚಿತ್ರ ಗಂಧದಗುಡಿ ಚಿತ್ರವನ್ನು ವೀಕ್ಷಿಸಿ ಪ್ರೇಕ್ಷಕ ಹೃದಯ ಭಾರ ಮಾಡಿಕೊಂಡು ಕೊನೆಯ ವಿದಾಯ ಹೇಳಿದ್ದ. ಚಿತ್ರದಲ್ಲಿನ ಪರಿಸರ ಕಾಳಜಿ, ಮಾನವೀಯತೆ ಸಂದೇಶ, ಅವರು ಆಡುವ ಭಾವನಾತ್ಮಕ ನುಡಿಗಳು ಮತ್ತು ಸನ್ನಿವೇಶಗಳು ಸಾವಿನ ಮುನ್ಸೂಚನೆಯಂತೆ ಭಾಸವಾಗುತ್ತಿದ್ದವು. ಇಂದು ಮತ್ತೆ ಗಂಧದ ಗುಡಿಯನ್ನು ಪ್ರತಿಷ್ಠಿತ ಓಟಿಟಿ ಸಂಸ್ಥೆ ಅಮೆಜಾನ್ ಪ್ರೈಮ್ ವೀಡಿಯೋಸ್‍ನಲ್ಲಿ ಕಣ್ತುಂಬಿಕೊಳ್ಳಬಹುದು.

Puneeth Rajkumar Birth Anniversary

Articles You Might Like

Share This Article