ಮೈಸೂರು, ಫೆ. 28- ಅಪ್ಪು ಚಿತ್ರದ ಹಾಡು ಹಾಕಬೇಕೆಂದು ಕೇಳಿದ ಪುನೀತ್ ರಾಜ್ ಕುಮಾರ್ ಅಭಿಮಾನಿ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎದುರಲ್ಲೇ ಹಲ್ಲೆ ಮಾಡಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೆಬ್ಬಾಳದಲ್ಲಿರುವ ಮೈಸೂರು ಸೋಷಿಯಲ್ಸ್ ರೆಸಾರ್ಟ್‍ನಲ್ಲಿ ಶನಿವಾರ ರಾತ್ರಿ ಪತ್ನಿಯ ಬರ್ತ್ ಡೇ ಪಾರ್ಟಿ ಆಚರಣೆಗೆಂದು ಉದ್ಯಮಿ ತೆರಳಿದ್ದಾಗ ಡಿ ಬಾಸ್ ಬೆಂಬಲಿಗರು ಹೊಡೆದಿದ್ದಾರೆ.
ವಿಶೇಷವೆಂದರೆ ಮೈಸೂರು ಸೋಷಿಯಲ್ಸ್ ರೆಸಾರ್ಟ್ ನಟ ದರ್ಶನ್ ಸ್ನೇಹಿತ ಹರ್ಷಾ ಮೆಲಂಟ ಮಾಲೀಕತ್ವದ್ದು.
ಬೋಗಾದಿ ನಿವಾಸಿ, ಉದ್ಯಮಿ ಯಶವಂತ್ ಕುಮಾರ್ ಪತ್ನಿಯ ಬರ್ತ್ ಡೇ ಪಾರ್ಟಿ ವೇಳೆ ಡಿಜೆ ಮ್ಯೂಸಿಕ್‍ನಲ್ಲಿ ಅಪ್ಪುಅಭಿನಯದ ರಾಜಕುಮಾರ ಹಾಡು ಹಾಕುವಂತೆ ಕೇಳಿದ್ದಾರೆ.
ಮುಳ್ಳುಹಂದಿ ಶಿಕಾರಿಗೆ ಹೋದಾಗ ಸುರಂಗದಲ್ಲಿ ಸಿಲುಕು ಇಬ್ಬರ ಸಾವು
ಎರಡು ಹಾಡುಗಳ ನಂತರ ಅಪ್ಪು ಹಾಡು ಹಾಕುವುದಾಗಿ ಡಿಜೆ ಮ್ಯೂಸಿಕ್ ಸಂಘಟಕರು ಹೇಳಿದ್ದಾರೆ. ನಂತರ ಯಶವಂತ್ ಕುಮಾರ್ ಅವರು ತಮ್ಮ ಟೇಬಲ್ ಬಳಿ ಹೋಗುತ್ತಿದ್ದಾಗ ದರ್ಶನ್ ಅವರ ಸಂಗಡಿಗೊಬ್ಬ ಏಕಾಏಕಿ ಬಂದು ಯಶವಂತ ಕುಮಾರ್ ಅವರ ಕತ್ತಿನ ಪಟ್ಟಿಯನ್ನು ಹಿಡಿದು ಎಳೆದಾಡಿ ಅವಾಚ್ಯಶಬ್ದಗಳಿಂದ ನಿಂದನೆ ಮಾಡಿದ್ದಾನೆ. ಅಲ್ಲದೆ ಕೈಗಳಿಂದ ಜೋರಾಗಿ ತಳ್ಳಿದ್ದಲ್ಲದೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ.
ದೂರದಲ್ಲೇ ಕುಳಿತು ಡಿ ಬಾಸ್ ಮತ್ತು ರೆಸಾರ್ಟ್ ಮಾಲೀಕ ಹರ್ಷಾ ಮೆಲಂಟಾ ಅವರು ಹಲ್ಲೆ ಗಮನಿಸಿದರೂ ಬಿಡಿಸುವ ಗೋಜಿಗೆ ಹೋಗಿಲ್ಲ. ನಂತರ ಯಶವಂತ ಸ್ನೇಹಿತರು ಮತ್ತು ಪತ್ನಿ ಜಗಳವನ್ನು ಬಿಡಿಸಿ, ಸಮಾಧಾನ ಪಡಿಸಿದ್ದಾರೆ.
3ನೇ ಹಂತದ ಪ್ರಜಾಧ್ವನಿ ಯಾತ್ರೆಗೆ ಕಾಂಗ್ರೆಸ್ ಚಾಲನೆ
ಅಪ್ಪು ಹಾಡು ಹಾಕಿ ಎಂದು ಕೇಳಿದ್ದಕ್ಕೆ ಇವರಿಗ್ಯಾಕೆ ಇಷ್ಟೊಂದು ಸಿಟ್ಟು. ವರನಟ ಡಾ. ರಾಜ್ ಕುಮಾರ್ ರಂತೆ ಅಪ್ಪುವನ್ನು ಕನ್ನಡಿಗರು ಮನೆ ಮಗನಂತೆ ನೋಡುತ್ತಾರೆ. ಅಪ್ಪು ಹಾಡು ಕೇಳಬಾರದು, ಇಲ್ಲಿ ಡಿ ಬಾಸ್ ಹಾಡುಗಳನ್ನೇ ಕೇಳಬೇಕೆಂದು ಹೇಳಿದರೆ ಹೇಗೆ, ಈ ರೀತಿಯ ದಬ್ಬಾಳಿಕೆ ಒಳ್ಳೆಯದಲ್ಲವೆಂದು ಯಶವಂತ್ ಹೇಳಿದ್ದಾರೆ.
ಘಟನೆ ಬಗ್ಗೆ ಯಶವಂತ್ ಅವರು ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Puneeth Rajkumar, fan, assaults, Mysore,