ಪುನೀತ್‍ ರಾಜ್‍ಕುಮಾರ್ ರಸ್ತೆ ನಾಮಕರಣಕ್ಕೆ ಶ್ರಮಿಸಿದವರನ್ನು ಮರೆತಿರುವುದಕ್ಕೆ ಆಕ್ರೋಶ

Social Share

ಬೆಂಗಳೂರು,ಫೆ.7- ನಾಯಂಡಹಳ್ಳಿ ಜಂಕ್ಷನ್‍ನಿಂದ ಬನ್ನೇರುಘಟ್ಟ ರಸ್ತೆಯ ಮೆಗಾಸಿಟಿ ಮಾಲ್‍ವರೆಗಿನ ರಸ್ತೆಗೆ ಪುನೀತ್ ರಾಜ್‍ಕುಮಾರ್ ಹೆಸರಿಡಲು ಶ್ರಮಿಸದವರನ್ನು ಮರೆತಿರುವುದನ್ನು ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಸಂಘ ಖಂಡಿಸಿದೆ.

ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಇಂದು ಸಂಜೆ ಪದ್ಮನಾಭನಗರದಲ್ಲಿ ಪುನೀತ್ ರಾಜ್‍ಕುಮಾರ್ ರಸ್ತೆ ನಾಮಕರಣ ನೆರವೇರುತ್ತಿದೆ. ಆದರೆ, ಇಂತಹ ಕಾರ್ಯಕ್ರಮಕ್ಕೆ ಪುನೀತ್ ಹೆಸರಿಡಲು ಶ್ರಮಿಸಿದ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರನ್ನು ಮರೆತಿರುವುದು ಖಂಡನಿಯ ಎಂದು ಪುನೀತ್ ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹೊನ್ನೇಗೌಡ ತಿಳಿಸಿದ್ದಾರೆ.

ಪುನೀತ್ ಅವರು ಅಕಾಲಿಕ ಮರಣ ಹೊಂದಿದ ನಂತರ ಎನ್.ಆರ್.ರಮೇಶ್ ಅವರು ಖುದ್ದು ಆಸಕ್ತಿವಹಿಸಿ ವರನಟ ಡಾ.ರಾಜ್‍ಕುಮಾರ್ ಪುಣ್ಯಭೂಮಿ ರಸ್ತೆಗೆ ಹೊಂದಿಕೊಂಡಂತೆ ಹೋಗಿರುವ ನಾಯಂಡಹಳ್ಳಿ ವೃತ್ತದಿಂದ ಬನ್ನೇರುಘಟ್ಟದ ಮೆಗಾಸಿಟಿ ಮಾಲ್‍ವರೆಗಿನ ರಸ್ತೆಗೆ ಪುನೀತ್ ರಾಜ್‍ಕುಮಾರ್ ಹೆಸರು ನಾಮಕರಣ ಮಾಡುವಂತೆ ಒತ್ತಾಯಿಸಿದ್ದರು.

ಕೇಂದ್ರದ ಬಜೆಟ್‍ನಲ್ಲಿ ಸರ್ವ ಹಿತ ರಕ್ಷಣೆಗೆ ಆದ್ಯತೆ : ಪ್ರಧಾನಿ

ಮಾತ್ರವಲ್ಲ, ತಾವೇ ಮುಂದೆ ನಿಂತು ಬಿಬಿಎಂಪಿ ವತಿಯಿಂದ ಪುನೀತ್ ರಾಜ್‍ಕುಮಾರ್ ಅವರ ಹೆಸರು ನಾಮಕರಣ ಮಾಡಲು ಅನುಮತಿಯನ್ನು ಪಡೆದುಕೊಂಡಿದ್ದರು.

ಇದರ ಜತೆಗೆ ತಾವೇ ಸ್ವಂತ ಹಣ ಖರ್ಚು ಮಾಡಿ ರಸ್ತೆಯುದ್ದಕ್ಕೂ ಪವರ್ ಸ್ಟಾರ್ ಪುನೀತ್‍ರಾಜ್‍ಕುಮಾರ್ ಹೆಸರಿನ ನಾಮಫಲಕಗಳನ್ನು ಅಳವಡಿಸಿದ್ದೇ ಅಲ್ಲದೆ, ನಾಯಂಡಹಳ್ಳಿ ವೃತ್ತದಿಂದ ಬನ್ನೇರುಘಟ್ಟದ ಮೆಗಾಸಿಟಿ ಮಾಲ್‍ವರೆಗಿನ ರಸ್ತೆಗೆ ಪುನೀತ್ ಅವರ ಹೆಸರನ್ನು ಈಗಾಗಲೇ ನಾಮಕರಣ ಮಾಡಲಾಗಿದೆ.

ಇದೀಗ ಅದೇ ರಸ್ತೆಗೆ ಸರ್ಕಾರದಿಂದ ಮತ್ತೊಮ್ಮೆ ಪುನೀತ್ ರಾಜ್‍ಕುಮಾರ್ ಅವರ ಹೆಸರಿಡುವ ಕಾರ್ಯಕ್ರಮ ನಡೆಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ರಸ್ತೆ ನಾಮಕರಣಕ್ಕೆ ಶ್ರಮಿಸಿದ ರಮೇಶ್ ಅವರನ್ನು ಮರೆತಿರುವುದು ನ್ಯಾಯಸಮ್ಮತವಲ್ಲ ಎಂದು ಹೊನ್ನೇಗೌಡ ಆರೋಪಿಸಿದ್ದಾರೆ.

ಅದಾನಿ ಹಗರಣದ ತನಿಖೆಗೆ ಪ್ರತಿಪಕ್ಷಗಳ ಪಟ್ಟು, ಕಲಾಪ ಮುಂದೂಡಿಕೆ

ಬಿಜೆಪಿಮಯ: ಒಂದು ಕಡೆ ಪುನೀತ್‍ರಾಜ್‍ಕುಮಾರ್ ರಸ್ತೆ ನಾಮಕರಣಕ್ಕೆ ಶ್ರಮಿಸಿದವರನ್ನು ಮರೆತಿರುವುದರ ಜತೆಗೆ ಸ್ವತಃ ಪುನೀತ್ ಅವರನ್ನೇ ಮರೆತು ಇಡಿ ಕಾರ್ಯಕ್ರಮ ಬಿಜೆಪಿಮಯವಾಗಿ ಹೋಗಿರುವುದು ಕಂಡು ಬರುತ್ತಿದೆ.
ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಪುನೀತ್ ರಾಜ್‍ಕುಮಾರ್ ಅವರ ಫೋಟೋ ಹಾಕಿಲ್ಲ. ಪತ್ರಿಕೆಯಲ್ಲಿ ಬರೀ ಬಿಜೆಪಿ ನಾಯಕರ ಫೋಟೋಗಳೇ ರಾರಾಜಿಸುತ್ತಿರುವುದು ಕಂಡುಬಂದಿದೆ.

ಕೇವಲ ಮತಗಳಿಕೆ ಉದ್ದೇಶದಿಂದ ಪುನೀತ್‍ರಾಜ್‍ಕುಮಾರ್ ಅವರ ಹೆಸರನ್ನು ರಾಜಕೀಯಕ್ಕೆ ಬೆಳೆಸಿಕೊಳ್ಳಲು ಬಿಜೆಪಿ ಮುಖಂಡರು ಮುಂದಾಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ.

Puneethrajkumar, Name, Ring Road, BJP,

Articles You Might Like

Share This Article