ಪುನೀತ ಪರ್ವ ಕಾರ್ಯಕ್ರಮ ನೋಡುತ್ತಲೇ ಪ್ರಾಣಬಿಟ್ಟ ಅಪ್ಪು ಅಭಿಮಾನಿ

Social Share

ಬೆಂಗಳೂರು,ಅ.22- ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸಾವಿನ ದುಃಖ ತಡೆಯಲಾರದೆ ಅವರ ಅಭಿಮಾನಿಯೊಬ್ಬರು ಹೃದಯಘಾತದಿಂದ ನಿಧನರಾಗಿದ್ದಾರೆ. ನಿನ್ನೆ ಪ್ರಸಾರವಾಗುತ್ತಿದ್ದ ಪುನೀತ ಪರ್ವ ಕಾರ್ಯಕ್ರಮ ನೋಡುತ್ತಿದ್ದಾಗಲೇ ಅಪ್ಪು ಅಭಿಮಾನಿ ಗಿರಿರಾಜ ಎನ್ನುವವರು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ.

ಮಲ್ಲೇಶ್ವರಂನ ಲಿಂಕ್ ರಸ್ತೆಯಲ್ಲಿ ವಾಸಿಸುತ್ತಿದ್ದ ಗಿರಿರಾಜ ಅಪ್ಪು ಅವರ ಅಪ್ಪಟ ಅಭಿಮಾನಿಯಾಗಿದ್ದರು.
ಅಪ್ಪು ನಿಧನದ ಸಂದರ್ಭದಲ್ಲೂ ತೀವ್ರವಾಗಿ ಘಾಸಿಗೊಂಡಿದ್ದ ಗಿರಿರಾಜ ಅವರು ನಿನ್ನೆ ಪುನೀತ ಪರ್ವ ಕಾರ್ಯಕ್ರಮ ನೋಡುವಾಗ ಮತ್ತಷ್ಟು ಕಂಗೆಟ್ಟಿದ್ದರು.

ಪುನೀತ್ ಪರ್ವ ಕಾರ್ಯಕ್ರಮ ನೋಡುವಾಗ ಎಂಥ ಮನುಷ್ಯ ಸತ್ತೋದ ಎಂದ ಕಣ್ಣೀರಿಡುತ್ತಿದ್ದ ಗಿರಿರಾಜ ಅವರು ಅಪ್ಪು ಸಾಯಬಾರದಿತ್ತು ಎಂದು ಕನವರಿಸುತ್ತಲೆ ರಾತ್ರಿ 10.30ಕ್ಕೆ ಶೌಚಾಲಯಕ್ಕೆ ಹೋದವರು ಅಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಯಾವುದೆ ಪ್ರಯೋಜನವಾಗಲಿಲ್ಲ ಎಂದು ಅವರ ಪೋಷಕರು ತಿಳಿಸಿದ್ದಾರೆ.

ಟ್ರಕ್‍ಗೆ ಬಸ್ ಡಿಕ್ಕಿ, 15 ಕಾರ್ಮಿಕರ ದುರ್ಮರಣ,ಮಧ್ಯಪ್ರದೇಶದಲ್ಲಿ ಘೋರ ದುರಂತ

ಮಗ ಗಿರಿರಾಜನಿಗೆ ಅಪ್ಪು ಅಂದ್ರೆ ಅಭಿಮಾನ, ದಿನಾ ಅಪ್ಪು ಫೋಟೊಗೆ ಪೂಜೆ ಮಾಡ್ತಿದ್ದ, ನಿನ್ನೆ ಅಪ್ಪು ಪರ್ವ ಕಾರ್ಯಕ್ರಮ ನೋಡಿ ಬೇಜಾರಾಗಿದ್ದ, ಛೇ ಎಂತ ಮನುಷ್ಯ ಹೋದ ಅಂತ ಚಡಪಡಿಸುತ್ತಿದ್ದ. ಅಪ್ಪು ಅಗಲಿಕೆಯನ್ನು ಸಹಿಸಲಾರದೆ ಆತ ಹೃದಯಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಗಿರಿರಾಜ್ ತಂದೆ ತಿಳಿಸಿದ್ದಾರೆ.

ದೀಪಾವಳಿ ವೇಳೆ ಅಗ್ನಿ ಅವಘಡ ತಡೆಯಲು ಮುಂಜಾಗ್ರತಾ ಕ್ರಮಗಳ ಸುತ್ತೋಲೆ

ಅಪ್ಪುವಿನ ಒಂದು ವಿಡಿಯೋ ನೋಡಿದ ನನ್ನ ಮಗ ಅದೇ ತರಹ ನನಗೂ ಊಟ ಮಾಡಿಸು ಎಂದು ಹಠ ಹಿಡಿದಿದ್ದ ಅವನ ಹಠಕ್ಕೆ ಮನಸೋತು ನಿನ್ನೆಯಷ್ಟೇ ಅವನಿಗೆ ಕೈ ತುತ್ತು ತಿನಿಸಿದ್ದೇ. ಇಂದು ನಾನು ಯಾರಿಗೆ ಕೈ ತುತ್ತು ನೀಡಲಿ ಎಂದು ಗಿರಿರಾಜ್ ತಾಯಿ ಜಯಮ್ಮ ರೋಧಿಸುತ್ತಿರುವ ದೃಶ್ಯ ಕಲ್ಲು ಹೃದಯವನ್ನು ಕರಗಿಸುವಂತಿತ್ತು.

Articles You Might Like

Share This Article