ಪುನೀತ್ ಪರ್ವಕ್ಕೆ ಕ್ಷಣಗಣನೆ, ಅರಮನೆ ಮೈದಾನದಲ್ಲಿ ಸೆಲೆಬ್ರೆಟಿಗಳ ಸಮಾಗಮ

Social Share

ಬೆಂಗಳೂರು,ಅ.21- ಅಪ್ಪು ಅವರು ತುಂಬ ಪ್ರೀತಿಯಿಂದ ಮಾಡಿದ ಕೊನೆ ಸಿನಿಮಾ ಗಂಧದ ಗುಡಿ ಇದೇ ತಿಂಗಳು 28 ರಂದು ಬಿಡುಗಡೆಯಾಗುತ್ತಿದೆ . ನಾಡು-ನುಡಿ ಬಗ್ಗೆ ಅಪಾರ ಅಭಿಮಾನ ಪ್ರೀತಿ ಹೊಂದಿದ್ದ ಇವರು ಕನ್ನಡ ನಾಡಿನ ಸಂಸ್ಕøತಿ, ಪರಂಪರೆ, ಪ್ರಕೃತಿ ಸೌಂದರ್ಯವನ್ನು ಪರಿಚಯಿಸುವ ಮಹತ್ಕಾರ್ಯವನ್ನು ಈ ಚಿತ್ರದಲ್ಲಿ ಮಾಡಿದ್ದಾರೆ ಎಂದು ರಾಘವೇಂದ್ರ ರಾಜಕುಮಾರ್ ತಿಳಿಸಿದ್ದಾರೆ.

ನಮ್ಮನ್ನೆಲ್ಲ ಆಗಲಿ ಹೋಗುವ ಮುನ್ನ ಮಾಡಿದ ಕೊನೆಯ ಸಿನಿಮಾ ಆಗಿರುವುದರಿಂದ, ಇವರನ್ನ ನೆನೆಯಲು ರಾಜ್ ಕುಟುಂಬ ಪ್ರೀ ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಇಂದು ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುನೀತ್ ಪರ್ವ ಹೆಸರಿನಲ್ಲಿ ನಡೆಯುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಪೊಲೀಸ್ ನೇಮಕಾತಿಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ : ಸಿಎಂ

ಗಂಧದ ಗುಡಿಯ ಬಿಡುಗಡ ಮುನ್ನ ಇಂದಿನ ಕಾರ್ಯಕ್ರಮದಲ್ಲಿ ನಾಡಿನ , ದೇಶದ ಹಲವಾರು ಗಣ್ಯರುಗಳು ಭಾಗವಹಿಸಲಿದ್ದಾರೆ . ಬಹಳಷ್ಟು ಕಲಾವಿದರುಗಳು ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.

ನನ್ನ ತಮ್ಮನ ಪತ್ನಿ ಅಶ್ವಿನಿ ಪುನೀತ್ ಅವರ ಮುಂದಾಳತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ . ಪುನೀತ್ ಗಂಧದ ಗುಡಿಯನ್ನು ಬಹಳ ಪ್ರೀತಿಯಿಂದ ತಯಾರಿಸಿದ್ದಾರೆ . ದೇವರು ಈ ಸಿನಿಮಾ ಮುಗಿಸಿ ಹೋಗಲು ಅಪ್ಪುಗೆ ಅವಕಾಶ ಮಾಡಿಕೊಟ್ಟ ಗಂಧದ ಗುಡಿ ಕಾರ್ಯಕ್ರಮ ಒಂದು ಸೆಲೆಬ್ರೇಷನ್ ಆಗಿದೆ ಎಂದರು.

ಚೋಲಾದೋರಾ ಧರಿಸಿ ಕೇದಾರನಾಥನ ದರ್ಶನ ಪಡೆದ ಪ್ರಧಾನಿ ಮೋದಿ

ಅಪ್ಪು ನಮ್ಮೊಂದಿಗೆ ಇದ್ದಿದ್ದರೆ ಎಂದು ಬಾವುಕರಾದ ಅವರು ಚಿತ್ರ ಎಷ್ಟು ಚೆನ್ನಾಗಿ ಮಾಡುತ್ತಿದ್ದನೋ , ಅದಕ್ಕಿಂತಲೂ ಚೆನ್ನಾಗಿ ನಾವು ಈ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ . ಈ ಕಾರ್ಯಕ್ರಮದಲ್ಲಿ ಹಾಡು , ಡಾನ್ಸï ಎಲ್ಲವೂ ಇರುತ್ತದೆ ಎಂದು ಹೇಳಿದ್ದಾರೆ . ಕನ್ನಡ ಚಿತ್ರರಂಗದ ಎಲ್ಲರೂ ಭಾಗವಹಿಸಲಿರುವ ಈ ಕಾರ್ಯಕ್ರಮದಲ್ಲಿ ತೆಲುಗು ತಮಿಳಿನ ಕಮಲಹಾಸನ್ , ಪ್ರಭುದೇವ , ಸೂರ್ಯ , ನಂದಮೂರಿ ಬಾಲಕೃಷ್ಣ , ರಾಣ ದಗ್ಗು ಭಾಟಿ ಸೇರಿದಂತೆ ಅನೇಕ ಗಣ್ಯರುಗಳು ಬರುತ್ತಾರೆ . ಕಾರ್ಯಕ್ರಮದಲ್ಲಿ ಎಲ್ಲಾ ಚಿತ್ರರಂಗದ ಗಣ್ಯರುಗಳೂ ಸೇರಲಿದ್ದಾರೆ . ಈ ಕಾರ್ಯಕ್ರಮ ಕಣ್ಣಿಗೆ ಹಬ್ಬದ ಹಾಗೆ ಇರುತ್ತದೆ ಎಂದೂ ರಾಗಣ್ಣ ಹೇಳಿದ್ದಾರೆ.

ಇದೊಂದು ಅಪ್ಪು ಹಬ್ಬ ಎಂದೇ ಭಾವಿಸಲಾಗಿದ್ದು , ದಕ್ಷಿಣಭಾರತ ಸಿನಿಮಾರಂಗದ ಅನೇಕ ಕಲಾವಿದರು ಇದರಲ್ಲಿ ಭಾಗಿಯಾಗಲಿದ್ದಾರೆ . ಅಭಿಮಾನಿಗಳಿಗೂ ಕೂಡ ಉಚಿತವಾಗಿ ಪ್ರವೇಶ ಕಲ್ಪಿಸಲಾಗಿದ್ದು , ಎಷ್ಟೇ ಜನ ಬಂದರೂ ಎಲ್ಲರಿಗೂ ಕಾರ್ಯಕ್ರಮವನ್ನು ತೋರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ . ನಾನಾ ರೀತಿಯ ಮನರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಚೋಲಾದೋರಾ ಧರಿಸಿ ಕೇದಾರನಾಥನ ದರ್ಶನ ಪಡೆದ ಪ್ರಧಾನಿ ಮೋದಿ

ಕಿಚ್ಚ ಸುದೀಪ್ , ಯಶ್ , ರಮ್ಯಾ , ರವಿಚಂದ್ರನ್ , ಜಗ್ಗೇಶ್ , ರಮೇಶ್ ಅರವಿಂದ್ , ಶ್ರೀಮುರಳಿ , ಗಣೇಶ್ , ಉಪೇಂದ್ರ ಸೇರಿದಂತೆ ಬಹುತೇಕ ಕಲಾವಿದರು ಭಾಗವಹಿಸುವುದು ಪಕ್ಕ ಆಗಿದ್ದು ಅರಮನೆ ಮೈದಾನದಲ್ಲಿ ಎಲ್ಲ ಸಿದ್ದತೆ ನಡೆದಿದೆ ಎಂದರು.

Articles You Might Like

Share This Article