ಗಡಿಯಲ್ಲಿ ಕಳ್ಳಸಾಗಣಿಕೆ ಯತ್ನ ತಡೆದ ಬಿಎಸ್‍ಎಫ್ ಯೋಧರು

Social Share

ನವದೆಹಲಿ, ಫೆ.18- ಪಂಜಾಬ್ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದಿಂದ ಕಳ್ಳಸಾಗಣಿಕೆ ಪ್ರಯತ್ನವನ್ನು ವಿಫಲಗೊಳಿಸಿರುವ ಬಿಎಸ್‍ಎಫ್ ಯೋಧರು, ಅಪಾರ ಪ್ರಮಾಣದ ಮಾದಕ ದ್ರವ್ಯಗಳು, ಚೀನಾ ಮತ್ತು ಟರ್ಕಿ ನಿರ್ಮಿತ ಪಿಸ್ತೂಲ್‍ಗಳು ಮತ್ತು 242 ಸುತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಶನಿವಾರ ಮುಂಜಾನೆ 5.30 ರ ಸುಮಾರಿಗೆ ಗುರುದಾಸ್‍ಪುರ ಸೆಕ್ಟರ್‍ನ ಡಿಬಿಎನ್ ಮತ್ತು ಶಿಕಾರ್ ಗಡಿ ಪೋಸ್ಟ್‍ನ ಬಳಿ ಗಡಿ ಬೇಲಿಯ ಎರಡೂ ಬದಿಗಳಲ್ಲಿ ಶಸ್ತ್ರಸಜ್ಜಿತ ಕಳ್ಳಸಾಗಾಣಿಕೆದಾರರ ಚಲನವಲನವನ್ನು ಯೋಧರು ಪತ್ತೆಹಚ್ಚಿದರು. ಯೋಧರ ಎಚ್ಚರಿಕೆ ಹೊರತಾಗಿ ನುಸುಳುಕೋರರು ಚಲಿಸಿದ್ದರಿಂದ ಗುಂಡು ಹಾರಿಸಲಾಯಿತು, ಉಗ್ರರ ಕಡೆಯಿಂದಲೂ ಪ್ರತಿದಾಳಿ ನಡೆದಿದೆ. ದಟ್ಟವಾದ ಮಂಜಿನಿಂದಾಗಿ ಉಗ್ರರು ಸ್ಥಳದಿಂದ ತಲೆ ತಪ್ಪಿಸಿಕೊಂಡಿದ್ದಾರೆ.

ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ತಾಯಿ-ಮಕ್ಕಳ ಆಸ್ಪತ್ರೆ

ಸದರಿ ಪ್ರದೇಶದಲ್ಲಿ ಶೋಧ ನಡೆಸಿದಾಗ ಹೆರಾಯಿನ್ ಇರುವ 20 ಪ್ಯಾಕೆಟ್‍ಗಳು, ಚೀನಾ ಮತ್ತು ಟರ್ಕಿಯಲ್ಲಿ ತಯಾರಾದ ತಲಾ ಎರಡು ಪಿಸ್ತೂಲ್‍ಗಳು, 242 ಬುಲೆಟ್ ರೌಂಡ್‍ಗಳು, ಆರು ಮ್ಯಾಗಜೀನ್‍ಗಳು ಮತ್ತು 12 ಅಡಿ ಉದ್ದದ ಪೈಪ್ ಪತ್ತೆಯಾಗಿದೆ ಎಂದು ಅವರು ಬಿಎಸ್‍ಎಫ್ ವಕ್ತಾರರು ತಿಳಿಸಿದ್ದಾರೆ.

Punjab, BSF, recovers, drugs, arms, gunfight, smugglers, Pak border,

Articles You Might Like

Share This Article