ಇಸ್ಲಾಮಾಬಾದ್, ಜು 27 – ರಾಜಕೀಯ ನಾಟಕಗಳ ನಡುವೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ಚೌಧರಿ ಪರ್ವೇಜ್ ಇಲಾಹಿ ಪ್ರಮಾಣ ವಚನ ಸ್ವೀಕರಿಸಿದರು. ಡೆಪ್ಯೂಟಿ ಸ್ಪೀಕರ್ ತೀರ್ಪನ್ನು ಪಾಕ್ ಸುಪ್ರೀಂ ಕೋರ್ಟ್ ತಳ್ಳಿಹಾಕಿದ ಕೆಲವೇ ಗಂಟೆಗಳ ನಂತರ ಪಿಎಂಎಲ್-ಕ್ಯೂಪಕ್ಷ ಸಭೆ ಸೇರಿ ಹೊಸ ನಾಯಕನ ಆಯ್ಕ ನಡೆಸಿತ್ತು.
ಪಂಜಾಬ್ ಮುಖ್ಯಮಂತ್ರಿ ಆಯ್ಕೆ ವೇಳೆ 10 ಮತಗಳನ್ನು ತಿರಸ್ಕರಿಸಿದ ಡೆಪ್ಯುಟಿದೋಸ್ತ್ ಮುಹಮ್ಮದ್ ಮಜಾರಿ ಅವರ ವಿವಾದಾತ್ಮಕ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಡರಾತ್ರಿ ಅಕ್ರಮ ಎಂದು ಘೋಷಿಸಿತು ಮತ್ತು ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಬೆಂಬಲಿತ ಅಭ್ಯರ್ಥಿ ಇಲಾಹಿ ಅವರು ಹೊಸ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ತೀರ್ಪು ನೀಡಿದರು.
ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಉರ್ಮ ಅತಾ ಬಂಡಿಯಾಲï, ನ್ಯಾಯಮೂರ್ತಿ ಇಜಾಜುಲ್ ಅಹ್ಸಾನ್ ಮತ್ತು ನ್ಯಾಯಮೂರ್ತಿ ಮುನೀಬ್ ಅಖ್ತರ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಇಲಾಹಿಗೆ ಪ್ರಮಾಣ ವಚನ ಬೋಧಿಸುವಂತೆ ಪಂಜಾಬ್ ಗವನರ್ ಬಲಿಘ್ ಉರ್ ರೆಹಮಾನ್ ಅವರಿಗೆ ಆದೇಶ ನೀಡಲಾಗಿತ್ತು.
ಆದರೆ, ರೆಹಮಾನ್ ತಮ್ಮ ಕರ್ತವ್ಯ ನಿರ್ವಹಿಸಲು ನಿರಾಕರಿಸಿದರು. ಗವನರ್ ರೆಹಮಾನ್ ನಿರಾಕರಣೆ ನಂತರ, ಇಲಾಹಿ ಮಂಗಳವಾರ ತಡರಾತ್ರಿ ಇಸ್ಲಾಮಾಬಾದ್‍ಗೆ ತೆರಳಿ ಸುಪ್ರೀಂ ಕೋರ್ಟ್ ಆದೇಶದಂತೆ ಪಾಕಿಸ್ತಾನದ ಅಧ್ಯಕ್ಷ ಆರಿಫ್ ಅಲ್ವಿ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕಾಗಿ ಇಲಾಹಿಯನ್ನು ಇಸ್ಲಾಮಾಬಾದ್‍ಗೆ ಕರೆತರಲು ಅಧ್ಯಕ್ಷ ಅಲ್ವಿ ವಿಶೇಷ ವಿಮಾನವನ್ನು ಕಳುಹಿಸಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.