ಚಂಡೀಗಢ,ಮಾ.13- ಎಎಪಿ ಶಾಸಕ ಹಾಗೂ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಅವರು ಐಪಿಎಸ್ ಅಧಿಕಾರಿ ಜ್ಯೋತಿ ಯಾದವ್ ಅವರನ್ನು ಈ ತಿಂಗಳ ಕೊನೆಯಲ್ಲಿ ವಿವಾಹವಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಜೋಡಿ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರೂಪನಗರ ಜಿಲ್ಲೆಯ ಆನಂದಪುರ ಸಾಹಿಬ್ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿರುವ ಬೈನ್ಸ್ ಅವರು ಪ್ರಸ್ತುತ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದಾರೆ.
ಪಂಜಾಬ್ ಅಸೆಂಬ್ಲಿ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವನ್ ಅವರು, ಸಚಿವರನ್ನು ಅಭಿನಂದಿಸಿದ್ದರು, ಮುಂಬರುವ ದಿನಗಳಲ್ಲಿ ಜೋಡಿಯ ಹೊಸ ಪ್ರಯಾಣಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.
ಆಸ್ಕರ್ ಅಂಗಳದಲ್ಲಿ ಭಾರತೀಯ ಚಿತ್ರಗಳ ಸದ್ದು, ಇಲ್ಲಿದೆ ಪ್ರಶಸ್ತಿಗಳ ಕಂಪ್ಲೀಟ್ ಡೀಟೇಲ್ಸ್
ವೃತ್ತಿಯಲ್ಲಿ ವಕೀಲರಾಗಿರುವ 32 ವರ್ಷದ ಬೈನ್ಸ್ ಆನಂದಪುರ ಸಾಹಿಬ್‍ನ ಗಂಭೀರ್‍ಪುರ ಗ್ರಾಮದವರು. 2017ರ ಚುನಾವಣೆಯಲ್ಲಿ ಸಾಹ್ನೇವಾಲ್ ಕ್ಷೇತ್ರದಿಂದ ಸ್ರ್ಪಧಿಸಿ ಸೋತಿದ್ದರು. ಬೈನ್ಸ್ ಈ ಹಿಂದೆ ರಾಜ್ಯದಲ್ಲಿ ಎಎಪಿಯ ಯುವ ಘಟಕವನ್ನು ಮುನ್ನಡೆಸಿದ್ದರು.
2014 ರಲ್ಲಿ ಚಂಡೀಗಢದ ಪಂಜಾಬ್ ವಿಶ್ವವಿದ್ಯಾನಿಲಯದಿಂದ ಬಿಎ, ಎಲ್‍ಎಲ್‍ಬಿ ಪದವಿ ಪಡೆದಿದ್ದಾರೆ. 2018 ರಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‍ನಿಂದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನಲ್ಲಿ ಪ್ರಮಾಣಪತ್ರವನ್ನು ಪಡೆದಿದ್ದಾರೆ.
ಉತ್ತರ ಕೊರಿಯಾ ಜಲಾಂತರ್ಗಾಮಿ ಯಿಂದ ಕ್ಷಿಪಣಿ ಉಡಾವಣೆ
ಇನ್ನೂ ಜ್ಯೋತಿ ಯಾದವ್, ಪಂಜಾಬ್-ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಮಾನ್ಸಾ ಜಿಲ್ಲೆಯಲ್ಲಿ ಪೊಲೀಸ್ ಸೂಪರಿಂಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಹರಿಯಾಣದ ಗುರುಗ್ರಾಮ್‍ನಿಂದ ಬಂದಿರುವ ಯಾದವ್, ಕಳೆದ ವರ್ಷ ಎಎಪಿ ಶಾಸಕ ರಾಜಿಂದರ್‍ಪಾಲ್ ಕೌರ್ ಚ್ಚಿನ ಅವರೊಂದಿಗೆ ವಾಗ್ವಾದದ ಮೂಲಕ ಗಮನ ಸೆಳೆದಿದ್ದರು.
ಐಪಿಎಸ್ ಅಧಿಕಾರಿ ತನಗೆ ಮಾಹಿತಿ ನೀಡದೆ ತಮ್ಮ ವಿಧಾನಸಭಾ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಶಾಸಕರು ಆರೋಪಿಸಿದರು. ಲುಯಾನದಲ್ಲಿ ಸಹಾಯಕ ಪೊಲೀಸ್ ಕಮಿಷನರ್ ಆಗಿದ್ದ ಯಾದವ್, ಲೂಯಾನ ದಕ್ಷಿಣ ಭಾಗದಲ್ಲಿ ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಶೋಧ ಕಾರ್ಯಾಚರಣೆ ನಡೆಸಿದ್ದರು. ತಮ್ಮ ಈ ಕಾರ್ಯಾಚರಣೆಗೆ ಪೊಲೀಸ್ ಆಯುಕ್ತರ ಅನುಮತಿ ಇದೆ ಎಂದು ಸಮರ್ಥಿಸಿಕೊಂಡಿದ್ದರು.
ಅಮೆರಿಕಕ್ಕೆ ಮಾನವ ಕಳ್ಳಸಾಗಣೆ ಮಾಡುತ್ತಿದ್ದ ದೋಣಿಗಳು ಮುಳುಗಿ 8 ಮಂದಿ ಸಾವು
ಕಳೆದ ವರ್ಷ ಪಂಜಾಬ್‍ನಲ್ಲಿ ಎಎಪಿ ಅಧಿಕಾರಕ್ಕೆ ಬಂದ ಹಲವು ವಿವಾಹ ಸಮಾರಂಭಗಳು ನಡೆದಿವೆ. ಮುಖ್ಯಮಂತ್ರಿ ಭಗವಂತ್‍ಮಾನ್, ಗುರಪ್ರೀತ್ ಕೌರ್ ಅವರೊಂದಿಗೆ ವಿವಾಹವಾಗಿದ್ದಾರೆ. ಎಎಪಿ ಶಾಸಕರಾದ ನರಿಂದರ್ ಕೌರ್ ಭಾರಜ್ ಮತ್ತು ನರಿಂದರ್‍ಪಾಲ್ ಸಿಂಗ್ ಸವಾನಾ ಅವರೂ ವಿವಾಹವಾಗಿದ್ದಾರೆ. ಈಗ ಸಚಿವ ಬೈನ್ಸ್ ಮತ್ತು ಐಪಿಎಸ್ ಅಧಿಕಾರಿ ಜ್ಯೋತಿ ಅವರ ಅರತಕ್ಷತೆ ಸದ್ದು ಮಾಡುತ್ತಿದೆ.
Punjab, minister, Harjot Bains, marry, IPS officer, Jyoti Yadav,