ಬಿಜೆಪಿ ಸೇರಿ ಆರು ದಿನದಲ್ಲೇ ಕಾಂಗ್ರೆಸ್‍ಗೆ ಮರಳಿದ ಶಾಸಕ

Social Share

ಚಂಡಿಗಡ್, ಜ.3- ಪಂಜಾಬ್‍ನ ಶಾಸಕರೊಬ್ಬರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಆರು ದಿನದಲ್ಲೇ ಮತ್ತೆ ಮಾತೃ ಪಕ್ಷಕ್ಕೆ ವಾಪಾಸಾಗಿದ್ದಾರೆ.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಂಜಾಬ್‍ನಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿವೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ಉತ್ತರ ಪ್ರದೇಶ ಹಾಗೂ ಪಂಜಾಬ್ ಪ್ರತಿಷ್ಠೆಯ ಕಣಗಳಾಗಿವೆ. ಅಮ್‍ಆದ್ಮಿ ಪ್ರವೇಶದಿಂದ ಚುನಾವಣೆಗೂ ಮುನ್ನವೇ ಅಖಾಡ ರಂಗೇರುತ್ತಿದೆ.
ಹರ್‍ಗೋಬಿಂದಪುರ್ ಶಾಸಕ ಬಲ್ವಿಂದರ್ ಸಿಂಗ್‍ಲಡ್ಡಿ ಕಳೆದ ಆರು ದಿನಗಳ ಹಿಂದೆ ಬಿಜೆಪಿ ಸೇರ್ಪಡೆಯಾಗಿದ್ದರು. ಭಾನುವಾರ ರಾತ್ರಿ ಪಂಜಾಬ್‍ನ ಉಸ್ತುವಾರಿ ನಾಯಕ ಹರೀಶ್ ಚೌದರಿ ಮತ್ತು ಮುಖ್ಯಮಂತ್ರಿ ಚರಣ್‍ಜಿತ್‍ಸಿಂಗ್ ಚನ್ನಿ ಅವರನ್ನು ಭೇಟಿ ಮಾಡಿದ ಶಾಸಕ ಬೆಳಗ್ಗೆ ಮತ್ತೆ ಕಾಂಗ್ರೆಸ್‍ಗೆ ಮರಳಿದ್ದಾರೆ.
ಡಿಸೆಂಬರ್ 28ರಂದು ಲಡ್ಡಿ ಹಾಗೂ ಕ್ವಾಡಿಯನ್ ಶಾಸಕ ಫಥೇಜಂಗ್ ಸಿಂಗ್ ಬಜ್ವಾ ಅವರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು. ಚುನಾವಣೆ ಸಮೀಪುಸುತ್ತಿದ್ದಂತೆ ಪಂಜಾಬ್‍ನಲ್ಲಿ ರಾಜಕೀಯ ವಲಸೆ ಪ್ರವೃತ್ತಿ ಹೆಚ್ಚುತ್ತಿದೆ.

Articles You Might Like

Share This Article