Saturday, September 23, 2023
Homeಅಂತಾರಾಷ್ಟ್ರೀಯಕೆನಡಾದಲ್ಲಿ ಪಂಜಾಬ್ ಮೂಲದ ಗ್ಯಾಂಗ್‍ಸ್ಟರ್ ಹತ್ಯೆ

ಕೆನಡಾದಲ್ಲಿ ಪಂಜಾಬ್ ಮೂಲದ ಗ್ಯಾಂಗ್‍ಸ್ಟರ್ ಹತ್ಯೆ

- Advertisement -

ಒಟ್ಟಾವಾ,ಮೇ.29- ಕೆನಡಾದ ವ್ಯಾಂಕೋವರ್ ನಗರದಲ್ಲಿ ನಡೆಯುತ್ತಿದ್ದ ಮದುವೆ ಸ್ಥಳದಲ್ಲಿ ಅಪರಿಚಿತ ಗುಂಪೊಂದು ಪಂಜಾಬ್ ಮೂಲದ ಗ್ಯಾಂಗ್‍ಸ್ಟರ್‍ನೊಬ್ಬನನ್ನು ಹತ್ಯೆ ಮಾಡಿದೆ. ಹತ್ಯೆಗೀಡಾದ ಪಂಜಾಬ್ ಮೂಲದ ಗ್ಯಾಂಗ್‍ಸ್ಟರ್‍ನನ್ನು ಅಮರ್‍ಪ್ರೀತ್ ಸಮ್ರಾ ಎಂದು ಗುರುತಿಸಲಾಗಿದೆ.

ಸಮ್ರಾ ತನ್ನ ಸಹೋದರ ದರೋಡೆಕೋರ ರವೀಂದರ್ ಅವರೊಂದಿಗೆ ವ್ಯಾಂಕೋವರ್ ನಗರದ ಫ್ರೇಸರ್ ವ್ಯೂ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆಯುತ್ತಿದ್ದ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಕ್ಷಣ ಮಾತ್ರದಲ್ಲಿ ಆಗಮಿಸಿದ ಹಂತಕರ ತಂಡ ಆತನ ಮೇಲೆ ಗುಂಡಿನ ಸುರಿಮಳೆ ಹರಿಸಿ ಪರಾರಿಯಾಗಿದೆ.

- Advertisement -

ಅಪಘಾತದಲ್ಲಿ 7 ವಿದ್ಯಾರ್ಥಿಗಳ ದುರ್ಮರಣ

ಘಟನೆಯಲ್ಲಿ ಸಮ್ರಾ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಗುಂಡಿನ ದಾಳಿಗೆ ಗ್ಯಾಂಗ್ ಘರ್ಷಣೆಯೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖಾಧಿಕಾರಿಗಳಿಗೆ ಸಹಾಯ ಮಾಡುವ ಮಾಹಿತಿಯನ್ನು ಹೊಂದಿರುವ ಯಾರಾದರೂ ವ್ಯಾಂಕೋವರ್ ಪೋಲೀಸ್ ನರಹತ್ಯೆ ಘಟಕವನ್ನು 604-717-2500 ಗೆ ಕರೆ ಮಾಡಲು ಮನವಿ ಮಾಡಿಕೊಳ್ಳಲಾಗಿದೆ.

ಸಚಿವರಿಗೆ ಸಿಕ್ತು ಖಾತೆ ಗ್ಯಾರೆಂಟಿ: ಯಾರಿಗೆ ಯಾವ ಖಾತೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಕಳೆದ ಆಗಸ್ಟ್ 2022 ರಲ್ಲಿ, ಕೆನಡಾದ ಪೋಲೀಸರು 11 ಪುರುಷರ ಬಗ್ಗೆ ಅಪರೂಪದ ಎಚ್ಚರಿಕೆಯನ್ನು ನೀಡಿದರು ಗ್ಯಾಂಗ್ ಹಿಂಸಾಚಾರದ ತೀವ್ರ ಮಟ್ಟಗಳು. ಸಾರ್ವಜನಿಕರು ಹತ್ತಿರ ಇರದಂತೆ ಪೋಲೀಸರು ಎಚ್ಚರಿಕೆ ನೀಡಿದ್ದಾರೆ. ಎಚ್ಚರಿಕೆಯಲ್ಲಿ ಉಲ್ಲೇಖಿಸಲಾದ 11 ಪುರುಷರಲ್ಲಿ ಅಮರಪ್ರೀತ್ ಮತ್ತು ಅವರ ಸಹೋದರ ರವೀಂದರ್ ಸೇರಿದಂತೆ ಒಂಬತ್ತು ಮಂದಿ ಪಂಜಾಬ್ ಮೂಲದವರು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

Punjab, #Gangster, #ShotDead, #WeddingReception, #Canada,

- Advertisement -
RELATED ARTICLES
- Advertisment -

Most Popular