ನವದೆಹಲಿ,ಡಿ.8- ಪಂಜಾಬ್ ಗಡಿಯಲ್ಲಿ ಅಜಾಗರೂಕತೆಯಿಂದ ಪಾಕಿಸ್ತಾನದ ಭೂಮಿ ಪ್ರವೇಶಿಸಿದ ಭಾರತೀಯ ಗಡಿ ಭದ್ರತಾ ಪಡೆ ಯೋಧನನ್ನು ಪಾಕ್ ರೇಂಜರ್‍ಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಯೋಧನ ಹಸ್ತಾಂತರಕ್ಕಾಗಿ ಕಾಯಲಾಗುತ್ತಿದೆ ಎಂದು ಬಿಎಸ್‍ಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‍ನ ಅಬೋಹರ್ ಸೆಕ್ಟರ್‍ನಲ್ಲಿ ಕಳೆದ ವಾರ ಡಿಸೆಂಬರ್ 1 ರಂದು ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿ ಉದ್ದಕ್ಕೂ ಗಡಿ ರೇಖೆಯ ತಪಾಸಣೆಯನ್ನು ಕೈಗೊಳ್ಳುವಾಗ ಯೋಧರಿಬ್ಬರು ಪಾಕ್‍ಬದಿಗೆ ದಾಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗಂಗೂಲಿ, ರಿಕ್ಕಿ ದಾಖಲೆ ಸರಿಗಟ್ಟಲು ಕೊಹ್ಲಿ ತವಕ
ಸಶಸ್ತ್ರ ಪಡೆ ಧ್ವಜ ದಿನಾಚರಣೆ ದಿನವೇ ಬಬ್ಬ ಬಿಎಸ್‍ಎಫ್‍ಯೋಧನನ್ನು ಪಾಕಿಸ್ತಾನ ರೇಂಜರ್‍ಗಳು ನಮಗೆ ಹಸ್ತಾಂತರಿಸಿದರು. ಆದರೆ ಮತ್ತೊಂದು ಘಟನೆಯಲ್ಲಿ ಬುಧವಾರ ಬೆಳಿಗ್ಗೆ ದಟ್ಟವಾದ ಮಂಜಿನಿಂದಾಗಿ ಯೋಧ ಆಕಸ್ಮಿಕವಾಗಿ ಇನ್ನೊಂದು ಬದಿಗೆ ದಾಟಿದರು ಆದರೆ ಪಾಕಿಸ್ತಾನದ ರೇಂಜರ್‍ಗಳು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ(LiVE)
ಬಿಎಸ್‍ಎಫ್ ಮತ್ತು ರೇಂಜರ್‍ಗಳು ಪರಸ್ಪರ ಸಂಪರ್ಕದಲ್ಲಿದ್ದಾರೆ ಮತ್ತು ಬಿಡುಗಡೆಗೆ ಕಾಯಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Punjab, Pak, Rangers, Capture, BSF, Soldier, Crossed, Border,