424 ಮಂದಿಗೆ ನೀಡಿದ್ದ ಭದ್ರತೆ ಹಿಂಪಡೆದ ಪಂಜಾಬ್‍ ಸರ್ಕಾರ

ಚಂಡಿಗಡ್, ಮೇ 28- ಲಂಚಪ್ರಕರಣಕ್ಕಾಗಿ ಸಚಿವರೊಬ್ಬರನ್ನೇ ಸಂಪುಟದಿಂದ ವಜಾಗೊಳಿಸಿ, ಬಂಸುವ ಮೂಲಕ ಅಚ್ಚರಿ ಮೂಡಿಸಿದ ಪಂಜಾಬ್‍ನ ಆಪ್ ಸರ್ಕಾರ, ಈಗ 424 ಮಂದಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆದು ಮತ್ತೊಮ್ಮೆ ಗಮನ ಸೆಳೆದಿದೆ.

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಪ್ರಮುಖ ನಿರ್ಧಾರ ಕೈಗೊಂಡಿದ್ದಾರೆ. ಈ ಮೊದಲು ಏಪ್ರಿಲ್‍ನಲ್ಲಿ ಮಾಜಿ ಸಚಿವರು, ಶಾಸಕರು ಮತ್ತು ಇತರ ನಾಯಕರು ಸೇರಿ 184 ಮಂದಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆದಿತ್ತು. ಅದರಲ್ಲಿ ಮಾಜಿ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್, ಅಮರಿಂದರ್ ಸಿಂಗ್ ಅವರ ಪುತ್ರ ರಣದೀರ್ ಸಿಂಗ್, ಕಾಂಗ್ರೆಸ್ ಶಾಸಕ ಪ್ರತಾಪ್ ಸಿಂಗ್ ಬಜ್ವಾವೆರೆ ಅವರ ಪತ್ನಿ ಸೇರಿದಂತೆ ಕುಟುಂಬದ ಸದಸ್ಯರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆಲಾಗಿತ್ತು.

ಇಂದು ಹೊರಡಿಸಲಾಗಿರುವ ಹೊಸ ಆದೇಶದಲ್ಲಿ ಧಾರ್ಮಿಕ ನಾಯಕರು, ನಿವೃತ್ತ ಅಧಿಕಾರಿಗಳು ಮತ್ತು ರಾಜಕೀಯ ಪ್ರಮುಖರಿಗೆ ಒದಗಿಸಲಾಗಿದ್ದ ಒಟ್ಟು 424 ಭದ್ರತೆಗಳನ್ನು ಹಿಂಪಡೆಯಲಾಗಿದೆ.