ಉಕ್ರೇನ್ ಮೇಲೆ ಅಣ್ವಸ್ತ್ರ ಪ್ರಯೋಗಿಸಲ್ಲ: ಪುಟಿನ್

Social Share

ಮಾಸ್ಕೋ, ಅ.28- ಉಕ್ರೇನ್ ಮೇಲೆ ಪರಮಾಣು ಆಸ್ತ್ರ ಪ್ರಯೋಗಿಸುವ ಯಾವುದೇ ಉದ್ದೇಶವನ್ನು ರಷ್ಯಾ ಹೊಂದಿಲ್ಲ. ಅದರ ಅವಶ್ಯಕತೆಯೂ ಇಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಭಿಪ್ರಾಯಪಟ್ಟಿದ್ದಾರೆ.

ಅಂತರಾಷ್ಟ್ರೀಯ ವಿದೇಶಾಂಗ ನೀತಿ ತಜ್ಞರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕೆಲವು ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್ ಬೆಂಬಲಕ್ಕೆ ನಿಲ್ಲುವ ಮೂಲಕ ತಮ್ಮ ಇಬ್ಬಗೆ ನೀತಿ ಅನುಸರಿಸುತ್ತಿದ್ದಾರೆ. ಅಂತವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಅವರ ಎಚ್ಚರಿಸಿದರು.

ರಷ್ಯಾವನ್ನು ರಕ್ಷಿಸಲು ಲಭ್ಯವಿರುವ ಎಲ್ಲಾ ವಿಧಾನಗಳನ್ನು ಬಳಸಲು ಸಿದ್ದ ಎಂಬ ನಮ್ಮ ಹೇಳಿಕೆಯನ್ನು ಕೆಲ ಪಾಶ್ಚಿಮಾತ್ಯ ರಾಷ್ಟ್ರಗಳು ತಿರುಚಿದ್ದವು ಎಂದಿದ್ದಾರೆ ಮಾತ್ರವಲ್ಲ, ಲಿಜ್ ಟ್ರಸ್ ಅವರು ಆಗಸ್ಟ್‍ನಲ್ಲಿ ಬ್ರಿಟನ್‍ನ ಪ್ರಧಾನ ಮಂತ್ರಿಯಾದರೆ ಪರಮಾಣು ಅಸ್ತ್ರಗಳನ್ನು ಬಳಸಲು ಸಿದ್ಧ ಎಂದು ಹೇಳಿರುವುದನ್ನು ಅವರು ವಿಶೇಷವಾಗಿ ಉಲ್ಲೇಖಿಸಿದ್ದಾರೆ.

ನವರಂಗಿ ಆಟವಾಡಲು ಹೋಗಿ ಪೊಲೀಸ್ ಅತಿಥಿಯಾದ ಬಾಲಿವುಡ್ ನಿರ್ಮಾಪಕ

ಅಮೆರಿಕಾ ಮತ್ತು ಅದರ ಮಿತ್ರರಾಷ್ಟ್ರಗಳು ನಮ್ಮನ್ನು ಬ್ಲಾಕ್‍ಮೇಲ್ ಮಾಡುವ ಪ್ರಯತ್ನಿಸುತ್ತೀವೆ ಎಂದು ಆರೋಪಿಸಿದ ಅವರು, ‘ಅಪಾಯಕಾರಿ, ರಕ್ತಸಿಕ್ತ ಮತ್ತು ಕೊಳಕು’ ಮನಸ್ಥಿತಿಯ ಅಮೆರಿಕಾ ಇತರ ರಾಷ್ಟ್ರಗಳಿಗೆ ತಮ್ಮ ನಿಯಮಗಳನ್ನು ನಿರ್ದೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ವಿಜಯೇಂದ್ರಗೆ ಸಿಎಂ ಸ್ಥಾನ ಸಿಗಲೆಂದು ಅಶ್ವಮೇಧ ಯಾಗ

ಉಕ್ರೇನ್ ವಿರುದ್ಧದ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಆದರೆ, ತಮ್ಮ ಗೆಲುವಿಗಾಗಿ ಯಾವುದೇ ಕಾರಣಕ್ಕೂ ಅಣ್ವಸ್ತ್ರ ಬಳಸುವುದಿಲ್ಲ. ನಮ್ಮ ವಿರುದ್ಧ ಪಾಶ್ಚಿಮಾತ್ಯ ರಾಷ್ಟ್ರಗಳು ಮಾಡಿರುವ ನಿರ್ಬಂಧಗಳಿಗೂ ತಲೆಕೆಡಿಸಿಕೊಳ್ಳುವುದಿಲ್ಲ. ನಾವು ನಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಸಮರ್ಥರಿದ್ದೇವೆ ಎಂದು ಅವರು ಖಚಿತಪಡಿಸಿದರು.

Articles You Might Like

Share This Article