ಪುಟಿನ್‍ಗೆ ವಾರ್ನಿಂಗ್ ಕೊಟ್ಟ ಬಿಡೆನ್

Social Share

ವಾಷಿಂಗ್ಟನ್,ಮಾ.2- ಉಕ್ರೇನ್ ಮೇಲೆ ಆಕ್ರಮಣ ನಡೆಸುತ್ತಿರುವ ರಷ್ಯಾದ ಅಧ್ಯಕ್ಷರಿಗೆ ಮುಂದೇನು ಒದಗಿಬರಲಿದೆ ಎಂಬ ಅಂದಾಜಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡನ್ ಎಚ್ಚರಿಕೆ ನೀಡಿದ್ದಾರೆ. ಅಮೆರಿಕದ ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಸಂಸದರನ್ನು ಉದ್ದೇಶಿಸಿ ಬಹಳ ದಿನಗಳ ನಂತರ ಮೊದಲ ಅಧಿವೇಶನದಲ್ಲಿ ಮಾತನಾಡಿದ ಅವರು, ನಾವು ಪ್ರತಿಯೊಬ್ಬರು ಉಕ್ರೇನ್ ಪರವಾಗಿ ನಿಲ್ಲಬಲ್ಲೆವು ಮತ್ತು ತಪ್ಪುಗಳಿಲ್ಲದ ಸಂದೇಶವನ್ನು ಉಕ್ರೇನ್ ಮೂಲಕ ವಿಶ್ವಕ್ಕೆ ನೀಡಬಲ್ಲೆವು ಎಂದು ಹೇಳಿದ್ದಾರೆ.
ಈ ನಡುವೆ ಉಕ್ರೇನ್ ಜೊತೆಗೆ ನಿಂತು ಯುದ್ಧ ಮಾಡುವ ಬಗ್ಗೆ ಸಂಸದರ ನಡುವೆಯೇ ಭಿನ್ನಾಭಿಪ್ರಾಯಗಳಿವೆ. ಸ್ಟೇಟ್ ಆಫ್ ಯೂನಿಯನ್ ಭಾಷಣದಲ್ಲಿ ಭಾಗವಹಿಸಿದ್ದ ಬಹಳಷ್ಟು ಸಂಸದರು ಉಕ್ರೇನ್‍ನ ಚಿಹ್ನೆಯನ್ನು ಧರಿಸಿದ್ದರು ಮತ್ತು ಉಕ್ರೇನ್ ರಾಷ್ಟ್ರಧ್ವಜ ಹಳದಿ ಮತ್ತು ನೀಲಿ ಬಣ್ಣದ ಉಡುಗೆಗಳನ್ನು ಧರಿಸಿ ಬೆಂಬಲ ವ್ಯಕ್ತಪಡಿಸಿದರು. ಮಹಿಳಾ ಸಂಸದರು ಕೂಡ ಇದೇ ಮಾದರಿಯನ್ನು ಅನುಸರಿಸಿದರು.
ಚೇಂಬರ್ ಆಫ್ ಹೌಸ್ ಪ್ರತಿನಿಗಳ ಸಭೆಯಲ್ಲಿ ಮಾತನಾಡಿದ ಬಿಡೆನ್ ಅವರು, ಅಮೆರಿಕ ಈ ಮೊದಲಿಗಿಂತಲೂ ಹೆಚ್ಚು ಬಲವಾಗಿದೆ. ಆರ್ಥಿಕವಾಗಿ ಶತಕೋಟಿ ಡಾಲರ್ ವಹಿವಾಟಿನ ಹೊಸ ಯೋಜನೆಗಳನ್ನು ಹೊಂದಿದೆ. ಅದರ ಹೊರತಾಗಿಯೂ ಕೂಡ 40 ವರ್ಷಗಳ ಬಳಿಕ ಅತ್ಯಂತ ಹಣದುಬ್ಬರ ಎದುರಿಸುತ್ತಿದೆ. ಕರೋನದಿಂದಾಗಿ ಸಂಕಷ್ಟಗಳಿವೆ ಎಂದು ಹೇಳಿದ್ದಾರೆ.
ಅಮೆರಿಕ ಒಕ್ಕೂಟ ನಿಮ್ಮಿಂದಾಗಿ ಹೆಚ್ಚು ಬಲ ಹೊಂದಿದೆ. ಜನರ ಬೆಂಬಲ ಪಡೆದಿದೆ. ನಾವು ಯಾವುದೇ ಸಂದೇಶವನ್ನಾದರೂ ಕಳುಹಿಸಬಲ್ಲೆವು ಎಂದಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ದಾಳಿ ಅಮೆರಿಕದ ಸಾಮಥ್ರ್ಯ ವನ್ನು ಪ್ರಶ್ನಿಸುವಂತಿದೆ. ಹೀಗಾಗಿ ಈವರೆಗೂ ಅಳೆದುತೂಗಿ ಬಿಡೆನ್ ಆಡಳಿತ ಲೆಕ್ಕಾಚಾರ ಹಾಕುತ್ತಲೇ ಕಾಲ ಕಳೆಯುತ್ತಿದೆ.
ಯುಕ್ರೇನ್ ಯುದ್ದ ಭೂಮಿಗೆ ಅಮೆರಿಕ ಯೋಧರು ಈವರೆಗೂ ಕಾಲಿಟ್ಟಿಲ್ಲ. 30 ವರ್ಷಗಳಿಂದಲೂ ರಷ್ಯಾದೊಂದಿಗೆ ಅಮೆರಿಕ ಶೀತಲ ಸಮರ ಹೊಂದಿದ್ದು, ಉಕ್ರೇನ್ ಮೇಲಿನ ದಾಳಿಯನ್ನು ಬಳಸಿಕೊಂಡು ತನ್ನ ಹಗೆತನವನ್ನು ಸಾಸಿಕೊಳ್ಳಬಹುದು ಎಂಬ ಅಂದಾಜಿತ್ತು. ಆದರೆ ಬಿಡೆನ್ ಎಲ್ಲ ಪಕ್ಷಗಳ ಸಂಸದರ ಬೆಂಬಲ ಯಾಚಿಸಿದ್ದಾರೆ.

Articles You Might Like

Share This Article