ಮೂರನೇ ಮಹಾಯುದ್ಧದ ಎಚ್ಚರಿಕೆ ನೀಡಿದ ರಷ್ಯಾ..!

Social Share

ಮಾಸ್ಕೋ.ಅ.14- ಉಕ್ರೇನ್ ದೇಶ ನ್ಯಾಟೋಗೆ ಸೇರಿಸಿದರೆ 3 ನೇ ಮಹಾಯುದ್ಧ ನಡೆಯಬಹುದು ಎಂದು ರಷ್ಯಾದ ಭದ್ರತಾ ಮಂಡಳಿಯ ಉಪ ಕಾರ್ಯದರ್ಶಿ ಅಲೆಕ್ಸಾಂಡರ್ ವೆನೆಡಿ ಕ್ಟೋವ್ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕಾ ನೇತೃತ್ವದ ನ್ಯಾಟೊ ಮಿಲಿಟರಿ ಪಡೆಗೆ ಉಕ್ರೇನ್ ಸೇರಿದರೆ ಸಂಘರ್ಷ ಹೆಚ್ಚಾಗಿ ಮತ್ತೊಂದು ಮಹಾಯುದ್ಧ ನಡೆಯಲಿದೆ ಎಂಬುದು ಅವರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.

ಉಕ್ರೇನ್ ಬೆಂಬಲಕ್ಕೆ ಮತ್ತಷ್ಟು ಶಸ್ತ್ರಾಸ್ತ್ರಗಳನ್ನು ಒದಗಿಸುವುದಾಗಿ ನ್ಯಾಟೋ ರಾಷ್ಟ್ರಗಳು ಘೋಷಿಸುತ್ತಿದ್ದಂತೆ ಉಕ್ರೇನ್ ಮೇಲೆ ರಷ್ಯಾ ದಾಳಿಯನ್ನು ತೀವ್ರಗೊಳಿಸಿತ್ತು. 24 ಗಂಟೆಗಳಲ್ಲಿ ಉಕ್ರೇನïನ 40ಕ್ಕೂ ಹೆಚ್ಚು ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತುಹಲವೆಡೆ ಕಟ್ಟಡಗಳು ವಿದ್ವಂಸಗೊಂಡಿದೆ.

ಇದೇ ವೇಳೆ ಉಕ್ರೇನ್ ವಾಯುಪಡೆ ಕೂಡಾ ಪ್ರತಿದಾಳಿ ನಡೆಸಿವೆ ಎಂದು ಸೇನಾಕಾರಿ ಹೇಳಿದ್ದಾರೆ. ಕೈವ್ ವಸತಿ ಪ್ರದೇಶದ ಮೇಲೆ ರಷ್ಯಾ ಇರಾನ್ ನಿರ್ಮಿತ ಡ್ರೊೈನ್ ಬಳಸಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ಹಲವರು ಮೃತಪಟ್ಟಿದ್ದಾರೆ.

Articles You Might Like

Share This Article